ಮೇ 29 ರಂದು ವೀರ ಯೋಧರಿಗಾಗಿ ಇಷ್ಟ ಲಿಂಗ ಪೂಜೆ ಹಾಗೂ ಬಸವ ಜಯಂತಿ: ಮಾಜಿ ಶಾಸಕ ಮಸಾಲೆ ಜಯರಾಮ್ ಅವರಿಗೆ ಸನ್ಮಾನ
1 min read
ತುರುವೇಕೆರೆ : ತುರುವೇಕೆರೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಮಹಿಳಾ ಮತ್ತು ಯುವ ಘಟಕದ ವತಿಯಿಂದ ಎಲ್ಲಾ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇದೇ ತಿಂಗಳು 29ನೇ ಗುರುವಾರದಂದು ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿರುವ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಬಸವ ಜಯಂತಿ ಮತ್ತು ವೀರ ಯೋಧರಿಗೆ ಬಲ ನೀಡಲು ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಇದರ ಪೂರ್ವಭಾವಿ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಘಟಕದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಇದೆ ವೇಳೆ ಅಧ್ಯಕ್ಷರಾದ ಎಂ ಕುಮಾರಸ್ವಾಮಿ ಮಾತನಾಡಿ, ಈಗಾಗಲೇ ಭಾರತ ಮತ್ತು ಪಾಕಿಸ್ತಾನ ನಡುವೆ ಸಮರ ನಡೆದು ಭಾರತವು ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನದ ವಿರುದ್ಧ ಸಮರ ನಡೆಸಿ ಭಾರತಕ್ಕೆ ಜಯವನ್ನು ತಂದು ಕೊಟ್ಟಿರುವ ಸೈನಿಕರಿಗೆ ಇನ್ನು ಹೆಚ್ಚಿನ ಬಲವನ್ನು ತುಂಬಲು ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಮಾಡುವುದರ ಜೊತೆಗೆ ಬಸವ ಜಯಂತಿಯನ್ನು ಆಚರಿಸಲಾಗುವುದು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುರುವೇಕೆರೆಯ ವೀರಕ್ತ ಮಠದ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ ವಹಿಸಿ, ಗುಬ್ಬಿ ತಾಲೂಕಿನ ಗೊಲ್ಲಹಳ್ಳಿ ಶ್ರೀ ಸಿದ್ದಲಿಂಗೇಶ್ವರ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ,
ಕಾರ್ಯಕ್ರಮದ ಉದ್ಘಾಟನೆಯನ್ನು ಹಾಲಿ ಶಾಸಕರಾದ ಎಂ ಟಿ ಕೃಷ್ಣಪ್ಪನವರು ಮಾಡಲಿದ್ದು, ನಂತರ ಇದೇ ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿರುವ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನಕ್ಕೆ ಮಾಜಿ ಶಾಸಕರಾದ ಮಸಾಲೆ ಜಯರಾಮ್ ಅವರು ಅಪಾರ ಕೊಡುಗೆ ನೀಡಿದ್ದು ಇದರ ಸವಿನೆನಪಿಗಾಗಿ ವಿಶೇಷವಾಗಿ ಮಸಾಲ ಜಯರಾಮ್ ಅವರಿಗೆ ಸನ್ಮಾನವನ್ನು ಮಾಡಲಾಗುವುದು, ಜೊತೆಗೆ ಇದೇ ತಿಂಗಳು 29ನೇ ಗುರುವಾರದಂದು ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದ ಬಂಧುಗಳು ಆಗಮಿಸಬೇಕಾಗಿ ಎಂದು ಮಾಧ್ಯಮದ ಮುಖೇನ ಆಹ್ವಾನಿಸಿದರು.
ವರದಿ, ಮಂಜುನಾಥ್ ಕೆ ಎ ತರುವೇಕೆರೆ.
