ಶನಿವಾರ ರಾಶಿ ಭವಿಷ್ಯ – ಮೇ,24,2025
1 min read
ಮೇಷ ರಾಶಿ
ಅನುಭವಿಗಳ ಜೊತೆಯಲ್ಲಿ ಕೆಲವು ವಿಚಾರವನ್ನು ಚರ್ಚಿಸಬಹುದು
ಅಣ್ಣ-ತಮ್ಮಂದಿರು, ಬಂಧುಗಳು ಸೌಹಾರ್ದಯುತರಾಗಿರುತ್ತಾರೆ
ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ಮಾಡಬಹುದು
ಪ್ರತಿಭೆ ಇರುವವರಿಗೆ ಅವಕಾಶಗಳು ಹೆಚ್ಚಾಗಿ ಸಿಗಲಿದೆ
ಆರ್ಥಿಕ ಸಮಸ್ಯೆಗೆ ಪರಿಹಾರ ದೊರಕಲಿದೆ
ಕಲಾಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಹೊಸ ಅವಕಾಶಗಳು ಸಿಗಲಿದೆ
ಮನೆ ದೇವರನ್ನು ಪ್ರಾರ್ಥನೆ ಮಾಡಬೇಕು
ವೃಷಭ ರಾಶಿ
ಸರ್ಕಾರಿ ಕೆಲಸಗಳ ತೊಂದರೆ ನಿವಾರಣೆ ಆಗಲಿದೆ
ಅಧಿಕಾರಿ ವರ್ಗದವರಿಂದ ಮೆಚ್ಚುಗೆ ಸಿಗಲಿದೆ
ನಿಮ್ಮ ಕೆಲಸಕ್ಕೆ ಸ್ನೇಹಿತರ ಸಹಾಯ ದೊರೆಯಲಿದೆ
ಇಂದು ಸತಿ ಪತಿಗಳಲ್ಲಿ ಜಗಳ ಬೇಡ
ವ್ಯಾಪಾರಿಗಳಿಗೆ ಅಲ್ಪ ಲಾಭ, ನಷ್ಟದ ಭಯ ದೂರವಾಗಲಿದೆ
ಕೆಲಸ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಸಿಗಲಿದೆ
ವಿಷ್ಣು ಸಹಸ್ರನಾಮವನ್ನು ಪಠಿಸಬೇಕು
ಮಿಥುನ ರಾಶಿ
ಬೇರೆಯವರ ಕೆಲಸದ ಜವಾಬ್ದಾರಿ ಹೊತ್ತುಕೊಳ್ಳಬೇಡಿ
ಇಂದು ಅನಾವಶ್ಯಕ ಪ್ರಯಾಣ ಬೇಡ
ಉಚಿತ ಸಮಯವನ್ನು ಅಧ್ಯಯನಕ್ಕೆ ಅಥವಾ ವಿಚಾರ ತಿಳಿಯಲು ವಿನಿಯೋಗಿಸಿ
ನಕಲಿ ಖರೀದಿಯಿಂದ ಮೋಸ ಆಗಬಹುದು
ಉದ್ಯೋಗದಲ್ಲಿ ಹಕ್ಕು ಕಡಿಮೆಯಾಗಬಹುದು
ಹಣದ ವಿಚಾರಕ್ಕೆ ಜಗಳದ ಸಾಧ್ಯತೆ ಇದೆ
ಗಣಪತಿ ಅಷ್ಟೋತ್ತರ ಶತನಾಮ ಪಠಿಸಬೇಕು
ಕಟಕ ರಾಶಿ
ಕಮಿಷನ್ ಏಜೆಂಟ್ಸ್ ಗಳಿಗೆ ಲಾಭವಿದೆ
ಮನೆಯವರಿಗೆ ಸಂತೋಷ ಮತ್ತು ತೃಪ್ತಿ ಸಿಗಲಿದೆ
ತುಂಬಾ ಕೆಲಸದ ಒತ್ತಡ, ತಕ್ಕ ಆದಾಯ ಸಿಗಲಿದೆ
ಒತ್ತಡ ದೂರ ಮಾಡಿಕೊಳ್ಳಿ ವಿಶ್ರಾಂತಿಯ ಅಗತ್ಯವಿದೆ
ಮಕ್ಕಳಿಗಾಗಿ ಹಣ ವ್ಯಯವಾಗಲಿದೆ
ಶಿವಾರಾಧನೆ ಮಾಡಬೇಕು
ಸಿಂಹ ರಾಶಿ
ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
ಜವಾಬ್ದಾರಿ ಹೊತ್ತು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
ರಾಜಕಾರಣಿಗಳಿಂದ ಅನುಕೂಲವಿದೆ
ಕುಟುಂಬದವರ ಸಹಕಾರ ಸಿಗಬಹುದು
ತುಂಬಾ ತಾಳ್ಮೆಯಿಂದ ಕೆಲಸ ಮಾಡಿದ ನೀವು ಜನ ಮೆಚ್ಚುಗೆಯನ್ನು ಪಡೆಯುತ್ತೀರಿ
ಹಣದ ಲಾಭ ಹೆಸರು ಎಲ್ಲವೂ ನಿಮ್ಮದಾಗಲಿದೆ
ಗಣಪತಿಗೆ ಗರಿಕೆಯನ್ನು ಅರ್ಪಿಸಬೇಕು
ಕನ್ಯಾ ರಾಶಿ
ನಿಮ್ಮ ಚಟುವಟಿಕೆಯ ಸಲುವಾಗಿ ಅಪಾಯವಿದೆ
ಕುಟುಂಬ ಸದಸ್ಯರ ಜೊತೆ ವೈಮನಸ್ಸು ಬೇಡ
ವ್ಯಾಪಾರ ಅಥವಾ ವ್ಯವಹಾರದ ಸಮಸ್ಯೆಯನ್ನು ಬೇರೆಯವರಿಗೆ ಹೇಳಬೇಡಿ
ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತೀರಿ
ಈ ದಿನ ಹೆಚ್ಚಿನ ದುಃಖವಾಗಬಹುದು
ಇಂದು ನಿಮಗೆ ಏಕಾಂಗಿತನ ಕಾಡಬಹುದು
ಪ್ರತ್ಯಂಗಿರಾದೇವಿಯನ್ನು ಪೂಜಿಸಬೇಕು
ತುಲಾ ರಾಶಿ
ತುಂಬಾ ಶ್ರಮ ಪಡಬೇಕಾದ ದಿನ
ಮಕ್ಕಳಿಗೆ ಹಾರೈಕೆ ಮಾಡುವುದು ನಿಮಗೆ ಸಂತೋಷ ನೀಡಲಿದೆ
ಇಂದು ಸಾಲದ ವಿಚಾರ ಬೇಡ
ಸರ್ಕಾರಿ ಸಮಸ್ಯೆಗಳು ಎದುರಾಗಬಹುದು
ವೈವಾಹಿಕ ಜೀವನದಲ್ಲಿ ಅತೃಪ್ತಿ
ಲಕ್ಷ್ಮಿ ನಾರಾಯಣನನ್ನು ಪಾರಾಯಣ ಮಾಡಬೇಕು
ವೃಶ್ಚಿಕ ರಾಶಿ
ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ
ವ್ಯಾವಹಾರಿಕವಾಗಿ ಹಣ ಸಂಪಾದನೆ ಮಾಡುತ್ತೀರಿ
ಹಿರಿಯರ ಹೆಸರು ಹೇಳಿ ಗೌರವ ಸಂಪಾದಿಸುತ್ತೀರಿ
ಎಲ್ಲೋ ಕೇಳಿದ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ
ಮನೆಯಲ್ಲಿ ಸಂತೋಷ ಸಿಗಲಿದೆ
ಸಾಲದ ಹಣ ಪಡೆದು ಹೊಸ ಯೋಜನೆ ಮಾಡುವುದರಿಂದ ಶುಭವಿದೆ
ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಧನಸ್ಸು ರಾಶಿ
ಯಾವುದೇ ಬಾಕಿ ಕೆಲಸಗಳನ್ನು ಪೂರ್ಣ ಮಾಡಿ
ಸ್ವಚ್ಛತೆಗೆ ಆದ್ಯತೆ ನೀಡಿ
ಇಂದು ಜಗಳ ಮನಸ್ತಾಪ ಬೇಡ
ಸಾಯಂಕಾಲದ ಹೊತ್ತಿಗೆ ಸ್ವಲ್ಪ ಅಸ್ವಸ್ಥತೆ ಹೊಂದಬಹುದು
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದುಕೊಳ್ಳಬೇಡಿ
ಯುವಕ ಅಥವಾ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ ಸಿಗಲಿದೆ
ದುರ್ಗಾರಾಧನೆ ಮಾಡಬೇಕು
ಮಕರ ರಾಶಿ
ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಸಿಗಲಿದೆ
ಮಾತಿನಿಂದ ಬೇರೆಯವರನ್ನು ಕಟ್ಟಿ ಹಾಕಬೇಡಿ
ಮನೆಯಲ್ಲಿ ಶುಭ ಕಾರ್ಯಕ್ರಮಗಳ ಚರ್ಚೆ ಆಗಲಿದೆ
ದೈನಂದಿನ ಕಾರ್ಯಗಳಿಗೆ ಮಹತ್ವ ಸಿಗಲಿದೆ
ಧಾರ್ಮಿಕ ಚಿಂತನೆಗಳಿಂದ ನಿಮ್ಮ ತಪ್ಪಿನ ಅರಿವಾಗಬಹುದು
ವಿಶ್ರಾಂತಿಯಿಲ್ಲದೆ ದುಡಿಮೆಯ ಚಿಂತನೆ ಮಾಡುತ್ತೀರಿ
ಶಾರದಾ ಪರಮೇಶ್ವರಿಯನ್ನು ಆರಾಧಿಸಬೇಕು
ಕುಂಭ ರಾಶಿ
ಆತ್ಮಾವಲೋಕನದ ದಿನ ತಪ್ಪಿಗೆ ಪ್ರಾಯಶ್ಚಿತ್ತದ ಚಿಂತನೆ ಮಾಡುತ್ತೀರಿ
ಆರೋಗ್ಯದ ಕಡೆ ಗಮನಹರಿಸಿ
ಮನೆಯವರ ಸಲಹೆ ಮುಖ್ಯವಾಗಿರುತ್ತದೆ
ಜಮೀನಿಗೆ ಸಂಬಂಧಿಸಿದ ಚರ್ಚೆಯಾಗಬಹುದು
ಶಾಂತಿ ಅಥವಾ ತಾಳ್ಮೆಯು ನಿಮಗೆ ಸಹಕರಿಸುತ್ತದೆ
ನರಸಿಂಹ ಕರಾವಲಂಬನ ಸ್ತೋತ್ರವನ್ನು ಪಠಿಸಬೇಕು
ಮೀನ ರಾಶಿ
ಪ್ರವಾಸದ ಬಗ್ಗೆ ಮಾತುಕತೆ ನಡೆಯಬಹುದು
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಗಂಭೀರದ ವಿಚಾರವಾಗಬಹುದು
ಆತುರದ ನಿರ್ಧಾರದಿಂದ ಕೆಲಸದಲ್ಲಿ ವ್ಯತ್ಯಯವಾಗಬಹುದು
ಈ ದಿನ ಮಾತನಾಡುವಾಗ ಹಿಡಿತವಿರಲಿ
ಮಕ್ಕಳ ಜೊತೆಯಲ್ಲಿ ಸಂತೋಷವಾಗುತ್ತೀರಿ
ಶಾರದಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು
