ಅಂಬೇಡ್ಕರ್ ಪುತ್ಥಳಿ ತೆರವು ..ಚಿಂತಾಮಣಿಯಲ್ಲಿ ಬಂದ್ ಗೆ ಬೆಂಬಲ
1 min read
ಚಿಂತಾಮಣಿ : ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಸರ್ಕಾರಿ ಬಾಲಕರ ಶಾಲೆಯಲ್ಲಿನ ಅಂಬೇಡ್ಕರ್ ಪುತ್ಥಳಿಯನ್ನು ರಾತ್ರೋ ರಾತ್ರಿ ತೇರವುಗೊಳಿಸಿರುವುದನ್ನ ಖಂಡಿಸಿ ದಲಿತ ಪರ ಸಂಘಟನೆಗಳ ಒಕ್ಕೂಟ ಬಂದ್ ಗೆ ಕರೆ ನೀಡಿದ್ದು, ಚಿಂತಾಮಣಿ ಬಂದ್ ಗೆ ಉತ್ತಮ ಪ್ರತಿಕ್ರೀಯೆ ಸಿಕ್ಕಿದೆ. ಬೆಳಗ್ಗೆಯಿಂದ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬಂದ್ ಗೆ ಸಹಕಾರ ನೀಡಿದ್ದಾರೆ.
ಇನ್ನು ದಲಿತ ಪರ ಸಂಘಟನೆಗಳ ಪದಾದಿಕಾರಿಗಳು ಬೆಳಗ್ಗೆಯಿಂದಲ್ಲೇ ಶಾಂತಿಯುತವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ಗಳ ಮುಖಾಂತರ ಸಂಚರಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಚಿಂತಾಮಣಿ ಬಂದ್ ಅಂಗವಾಗಿ ನಗರದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿದ್ದರಿಂದ ವಿನೋಭಾಕಾಲೋನಿಯಲ್ಲಿ ಪೊಲೀಸ್ ಜೀಪ್ ತಡೆದು ಪ್ರತಿಭಟಿಸಿದರು.
