ಮೈಸೂರು ಸೋಪ್ ರಾಯಭಾರಿಯಾದ ತಮನ್ನಾ ಆಯ್ಕೆ.. 2 ವರ್ಷಕ್ಕೆ ಪಡೆಯೋ ಸಂಭಾವನೆ ಕೇಳಿದ್ರೆ ಶಾಕ್ !
1 min read
ಖ್ಯಾತ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸದ್ಯ ಸೌತ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಬಾಲಿವುಡ್ ಕಡೆ ಮುಖ ಮಾಡಿರುವ ತಮನ್ನಾ ಆಗೊಂದು ಈಗೊಂದು ಸಿನಿಮಾಗಳನ್ನಷ್ಟೇ ಮಾಡುತ್ತಿದ್ದಾರೆ. ಆದ್ರೂ ಕೂಡ ಭಾರತದಾದ್ಯಂತ ತಮನ್ನಾ ಭಾಟಿಯಾ ಅಭಿಮಾನಿಗಳನ್ನು ಹೊಂದಿದ್ದಾರೆ.ಇದರ ಮಧ್ಯೆ ಮಿಲ್ಕಿ ಬ್ಯೂಟಿಯನ್ನು ಕರ್ನಾಟಕ ಸರ್ಕಾರ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಆಯ್ಕೆ ಮಾಡಿದ್ದಾರೆ. ಹೌದು, ಮಿಲ್ಕಿ ಬ್ಯೂಟಿಯನ್ನು ರಾಜ್ಯ ಸರ್ಕಾರ ಅವರನ್ನು ಮೈಸೂರು ಸ್ಯಾಂಡಲ್ ಸೋಪ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಾಡಿದೆ. ಇದು ಅವರ ಅಭಿಮಾನಿಗಳು ಸಂತಸ ತಂದಿದೆ.
ಇನ್ನೂ, ಅಚ್ಚರಿ ವಿಚಾರ ಎಂದರೆ ಮಿಲ್ಕಿ ಬ್ಯೂಟಿಗೆ ನೀಡಿದ ಸಂಭಾವನೆಯನ್ನು ಅಧಿಕೃತವಾಗಿ ಘೋಷಿಸಿಕೊಂಡಿದೆ. 2 ವರ್ಷ 2 ದಿನ ಬ್ರಾಂಡ್ ಅಂಬಾಸಿಡರ್ ಆಗುವುದಕ್ಕೆ ತಮನ್ನಾಗೆ 6.2 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಇದು ರಾಜ್ಯ ಸರ್ಕಾರವೇ ಪ್ರಕಟಣೆ ಹೊರಡಿಸಿದೆ.
