ರೈತರಿಗೆ ಬಿತ್ತನೆ ಬೀಜ ಗೊಬ್ಬರ ವಿತರಿಸಲು ರೈತ ಸಂಘದಿಂದ ಮನವಿ

ಮುಂಡರಗಿ : ರೈತರಿಗೆ ಬಿತ್ತನೆ ಬೀಜ, ಗೊಬ್ಬರ ವಿತರಣೆ, ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಎರಿಸ್ವಾಮಿ ಪಿ.ಎಸ್. ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ ಮಾತನಾಡಿ, ಕೃಷಿ ಇಲಾಖೆ ಮುಂಗಾರು ಬಿತ್ತನೆಗಾಗಿ ಬೀಜ, ಗೊಬ್ಬರ ವಿತರಿಸಬೇಕು.ಅಗ್ರೋ ಕೇಂದ್ರಗಳಲ್ಲಿ ರೈತರು ಗೊಬ್ಬರ ಖರೀದಿಸಲು ಹೋದರೆ ಡಿಎಪಿ ಜೊತೆಗೆ ಸಟೈಟ್ ಅಥವಾ ನ್ಯಾನೋ ಯೂರಿಯಾ ಹೀಗೆ ಹಲವು ಬಗೆಯ ಲಿಂಕ್ ಗೊಬ್ಬರ ಕೊಡುವುದರಿಂದ ರೈತರಿಗೆ ಬಿತ್ತನೆ ಮಾಡಲು, ಬೀಜ ಗೊಬ್ಬರ ಹಾಕಲು ಹೆಚ್ಚಿನ ಹೊರೆಯಾಗುತ್ತದೆ. ಆದ್ದರಿಂದ ರೈತರಿಗೆ ಲಿಂಕ್ ಗೊಬ್ಬರ ಕೊಡಬಾರದು. ಅಗ್ರೋ ಕೇಂದ್ರಗಳಲ್ಲಿ ರೈತರು ಕೇಳಿದ ಬೀಜ, ಗೊಬ್ಬರ ಮಾತ್ರ ನೀಡಬೇಕು. ಎಲ್ಲ ಅಗ್ರೋ ಕೇಂದ್ರಗಳಲ್ಲಿ ಡಿಎಪಿ ಗೊಬ್ಬರ ಸಮರ್ಪಕವಾಗಿ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಕಂಬಳಿ, ಎಚ್.ಬಿ. ಕುರಿ, ಚಂದ್ರಪ್ಪ ಗದ್ದಿ, ಚಂದ್ರಪ್ಪ ಬಳ್ಳಾರಿ, ತಿಮ್ಮಪ್ಪ ಉಪ್ಪಾರ, ರವಿ ಹಡಪದ, ಕನಕಪ್ಪ ಕುರಿ, ಮಾರುತೆಪ್ಪ ಮ್ಯಾಗೇರಿ, ವೆಂಕಟೇಶ ಉಪ್ಪಾರ, ಈರಣ್ಣ ಗಡಾದ, ವೈ.ಎಚ್. ಭಜಂತ್ರಿ, ಶೇಖಪ್ಪ ರಾಟಿ, ಎಂ.ಎಂ. ಬಂಡಿವಡ್ಡರ, ರಾಘವೇಂದ್ರ ಕುರಿ, ಎಸ್.ಸಿ. ಉಳ್ಳಾಗಡ್ಡಿ, ಯಂಕಪ್ಪ ಕುರಿ, ಇತರರು ಇದ್ದರು.
![]()