ಬುಧವಾರ ರಾಶಿ ಭವಿಷ್ಯ-ಮೇ,21,2025

1 min read
Share it

ಮೇಷ ರಾಶಿ

ನಿಮ್ಮ ಸಲಹೆ, ಮಾತುಗಳನ್ನು ಜನ  ಇಷ್ಟಪಡುತ್ತಾರೆ

ನಿಮ್ಮ ಗುರಿಗಳ ಬಗ್ಗೆ ಹೆಚ್ಚು ಜಾಗೃತರಾಬೇಕು

ನಿಮ್ಮ ಎಲ್ಲ ಕೆಲಸಗಳು ಬಹಳ ನಿಧಾನವಾಗಿ ಸಾಗುತ್ತದೆ

ಇಂದು ದುಬಾರಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಯೋಗವಿದೆ

ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಕಡಿಮೆ ಇರುತ್ತದೆ

ಸಮಾಜದ ಗಣ್ಯರನ್ನು, ಯೋಗ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಯೋಗವಿದೆ

ಕಾಲಭೈರವನನ್ನು ಧ್ಯಾನ ಮಾಡಬೇಕು

 

ವೃಷಭ ರಾಶಿ

ಇಂದು ಆರೋಗ್ಯದ ಬಗ್ಗೆ ತಾತ್ಸಾರ ಮಾಡಿದರೆ ಕಷ್ಟ ಸಾಧ್ಯತೆ

ಪತಿ-ಪತ್ನಿಯರಲ್ಲಿ ಸಣ್ಣ ವಿಚಾರಗಳಿಗೆ ಜಗಳ ಸಾಧ್ಯತೆ

ಹಳೆಯ ಕಹಿ ನೆನಪುಗಳು ಕಾಡಬಹುದು, ವೈಯಕ್ತಿಕ ತೇಜೋವಧೆ ಮಾಡಿಕೊಳ್ಳುತ್ತೀರಿ

ದೂರದ ಪ್ರಯಾಣ ಮಾಡದಿದ್ದರೆ ಒಳ್ಳೆಯದು

ಧರ್ಮದ ಕಾರ್ಯಗಳ ಬಗ್ಗೆ ಮನಸ್ಸು ವಿಚಲಿತ ಸಾಧ್ಯತೆ

ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಬೇಕು

 

ಮಿಥುನ ರಾಶಿ

ಓದಿನ ಹೊರತಾಗಿ ಬೇರೆ ಚಟುವಟಿಕೆಗಳಿಗೆ ಆಕರ್ಷಿತರಾದ್ರೆ ತೊಂದರೆ

ನಿಮ್ಮ ಸ್ನೇಹಿತರ ಮಾತಿಗೆ ಮರುಳಾಗಿ ಆ ಕಾರ್ಯದಲ್ಲಿ ಭಾಗಿಯಾದರೆ ತೊಂದರೆ

ನಿಮ್ಮ ಬುದ್ಧಿವಂತಿಕೆ ಅಭ್ಯಾಸದ ಕಡೆಗೆ ಹೆಚ್ಚು ಇದ್ದರೆ ಯಶಸ್ಸು ಸಿಗುತ್ತದೆ

ಅನಾರೋಗ್ಯದಿಂದ ಬಳಲುತ್ತಿದ್ದರೆ ಇಂದು ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ

ಇಂದು ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕಾದ

ಪರ್ವತಾಂಜನೇಯನನ್ನು ಪ್ರಾರ್ಥನೆ ಮಾಡಬೇಕು

 

ಕಟಕ ರಾಶಿ

ಒಂದೇ ಬಾರಿಗೆ ಹಲವು ಕೆಲಸ ಅಥವಾ ವಿಚಾರ ಬೇಡ

ಗೊಂದಲ ಆವರಿಸಿ ಸಮಯ ಕಳೆದು ಬಿಡುತ್ತದೆ

ನಿಮ್ಮ ಮೇಲಿನ ಮನೆಯವರ-ಸ್ನೇಹಿತರ ನಿರೀಕ್ಷೆ ಹುಸಿ ಮಾಡಬೇಡಿ

ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ದಿನವಿದು

ಪ್ರಮುಖ ನಿರ್ಧಾರಗಳಿಗೆ ಪ್ರೀತಿ ಪಾತ್ರರ ಸಲಹೆ ಮುಖ್ಯ

ಲಕ್ಷ್ಮೀ ಆರಾಧನೆ ಮಾಡಬೇಕು

 

ಸಿಂಹ ರಾಶಿ

ತಲೆ ನೋವಿರುವ ವ್ಯಕ್ತಿಗಳು ಸೂರ್ಯನ ನೇರ ಬೆಳಕು, ಧೂಳಿನಿಂದ ರಕ್ಷಿಸಿಕೊಳ್ಳಿ

ರಾಜಕೀಯ ಆಸಕ್ತಿ ಉಳ್ಳವರಿಗೆ ನಷ್ಟ ಸಾಧ್ಯತೆಯಿದೆ

ನಿಮ್ಮ ನಿಮ್ಮ ಕಾರ್ಯಕ್ಷೇತ್ರದಲ್ಲಿ ಮನಸ್ಸಿರುವುದಿಲ್ಲ

ಹಿರಿಯರ, ಮೇಲಾಧಿಕಾರಿಗಳ ಅವಕೃಪೆಗೆ ಒಳಗಾಗುವ ಸಾಧ್ಯತೆಯಿದೆ

ಅನುಪಯುಕ್ತ ಕೆಲಸ, ವಸ್ತುಗಳ ಬಗ್ಗೆ ಮನಸ್ಸು ಎಳೆಯುತ್ತಿರುತ್ತದೆ

ಸಾಯಂಕಾಲ ಶುಭವಾರ್ತೆ ಕೇಳುತ್ತಿರಾ

ಸಾಯಂಕಾಲದ ಸೂರ್ಯನನ್ನು ಪ್ರಾರ್ಥನೆ ಮಾಡಬೇಕು

 

ಕನ್ಯಾ ರಾಶಿ

ಮನೆಯಲ್ಲಿ ಬೇಸರವಾಗಿ ಹೊರಗೆ ಹೋಗಬಹುದು

ಹೆಂಗಸರು ತವರು ಮನೆ ಅಥವಾ ಸಂಬಂಧಿಕರ ಮನೆಗೆ ಹೋಗಬಹುದು

ಅಲರ್ಜಿ ಅಥವಾ ಕಫದಿಂದ ಕಿರಿಕಿರಿ ಉಂಟಾಗಬಹುದು

ಇಂದು ಕುಟುಂಬದಲ್ಲಿ ಸಾಮರಸ್ಯದ ಕೊರತೆ ಇರುತ್ತದೆ

ವಾದ-ವಿವಾದಗಳಿಂದ ಸತಿ-ಪತಿಗಳಲ್ಲಿ ಬಿರುಕು ಉಂಟಾಗಬಹುದು

ಜನ ನಿಮ್ಮ ಬೆನ್ನ ಹಿಂದೆ ಟೀಕಿಸುವ ಪ್ರಸಂಗಗಳು ಹೆಚ್ಚು ನಡೆಯಬಹುದು

ಐಕ್ಯಮತ್ಯ ಮಂತ್ರವನ್ನು ಶ್ರವಣ ಮಾಡಬೇಕು

 

ತುಲಾ ರಾಶಿ

ವೈವಾಹಿಕ ಜೀವನವು ಮಧುರವಾಗಿರುತ್ತದೆ

ಕೆಲಸದ ಒತ್ತಡ ಕಡಿಮೆ, ಮಾನಸಿಕ ಸಂತೋಷ ಹೆಚ್ಚು

ವ್ಯವಹಾರ, ಓದಿನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶವಿದೆ

ವಿದ್ಯಾರ್ಥಿಗಳು ಮತ್ತು ನೌಕರರಿಗೆ ಸ್ಪರ್ಧಾತ್ಮಕ, ಇಲಾಖಾ ಪರೀಕ್ಷೆಗಳಲ್ಲಿ ಯಶಸ್ಸು ಇದೆ

ದೇವರ ಧ್ಯಾನ, ಪೂಜಾದಿಗಳಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ

ಉತ್ತಮ ಪದವೀಧರರ ಸಂಪರ್ಕ ಸಿಗುತ್ತದೆ

ಆರಾಧ್ಯ ದೇವತೆಯನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ

ಸ್ವಂತ ನಿರ್ಧಾರದಿಂದ ದೂರವಾದರೆ ಕಷ್ಟ ಸಾಧ್ಯತೆ

ಮೇಲಾಧಿಕಾರಿಗಳು, ಹಿರಿಯರ ನಂಬಿಕೆ ಉಳಿಯೋದಿಲ್ಲ

ಯಾರೊಂದಿಗೂ ಜಗಳ ಮಾಡೋದಕ್ಕೆ ಹೋಗಬೇಡಿ

ನಿಮ್ಮ ಕೆಲಸಗಳಲ್ಲಿ ಬೇರೆಯವರ ಅಭಿಪ್ರಾಯ, ಮಾರ್ಗದರ್ಶನ ಬೇಡ

ಉಚಿತ ಸಲಹೆ ದೂರಮಾಡಿ, ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ

ಹಳೆಯ ಅನುಭವಗಳ ಲಾಭ ನಿಮಗಿದೆ

ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಬೇಕು

 

ಧನಸ್ಸು

ನಿಮ್ಮ ಕೆಲಸದ ರೀತಿ ಶೈಲಿ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ

ನಿಗೂಢವಾದ ವಿಜ್ಞಾನ – ಸಂಶೋಧನೆ ವಿಷಯಗಳ ಕಡೆ ಆಸಕ್ತಿ ತೋರುತ್ತೀರಿ

ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ

ಹಿಂದಿನಿಂದ ಇದ್ದ ತೊಂದರೆಗಳು ದೂರವಾಗುವ ಸಾಧ್ಯತೆ

ಮಾರುತಿಯನ್ನ ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ

ನಿಮ್ಮ ಹಠದಿಂದ ಜನರು ದೂರ ಉಳಿಯುತ್ತಾರೆ

ಬೇರೆಯವರ ಸಹಾಯ ನಿಮಗೆ ಬೇಕಿದ್ದರೂ ಹತ್ತಿರ ಬರುವುದಿಲ್ಲ

ಹಣದ ವಿಚಾರವಾಗಿ ಕುಟುಂಬ, ಸ್ನೇಹಿತರ ಜೊತೆ ಮನಸ್ತಾಪ ಸಾಧ್ಯತೆ

ಕೌಟುಂಬಿಕ ಜೀವನದಲ್ಲಿ ಒತ್ತಡ, ಮಾನಸಿಕ ಸೌಖ್ಯವಿರುವುದಿಲ್ಲ

ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಿ

ಸುದರ್ಶನನ್ನು ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ

ಇಂದು ವಿರೋಧಿಗಳು ನಿಮ್ಮೆದುರು ಸೋಲುತ್ತಾರೆ

ನಿಮ್ಮ ಕೀರ್ತಿ ಹೆಚ್ಚಾಗುತ್ತದೆ, ಇದರಿಂದ ಬೀಗುತ್ತೀರಿ

ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ನಿಮಗೆ ಪ್ರಶಂಸೆ

ವಿದ್ಯಾರ್ಥಿಗಳಿಗೆ ಶಹಬ್ಬಾಶ್‌ ಗಿರಿ ಸಿಗುತ್ತದೆ

ಹೊಗಳಿಕೆಯಿಂದ ಧನಾತ್ಮಕ ಶಕ್ತಿ ನಿಮಗಿರುತ್ತದೆ

ಇಂದು ಹಿರಿಯರ ಆಶೀರ್ವಾದ ಪಡೆಯಿರಿ

 

ಮೀನ ರಾಶಿ

ಹಣ ಅಥವಾ ಪದಾರ್ಥ ನಷ್ಟವಾಗುವ ಸಾಧ್ಯತೆ ಇರುತ್ತದೆ

ಮನೆಯಲ್ಲಿನ ವಿದ್ಯುತ್‌ ಉಪಕರಣಗಳಿಂದ ಹಾನಿ ಸಾಧ್ಯತೆ

ಇಂದು ಕೆಲಸದ ಒತ್ತಡ ಹೆಚ್ಚು, ಸುಳ್ಳು ಹೇಳಬೇಡಿ

ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಬೇಡ

ಮಕ್ಕಳ ವಿಚಾರಕ್ಕೆ ಮನೆಯಲ್ಲಿ ಮನಸ್ತಾಪ ಸಾಧ್ಯತೆ

ಧ್ಯಾನ ಮಾಡುತ್ತಿರುವ ಋಷಿಗಳನ್ನು ಸ್ಮರಿಸಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?