ಕಸಾಯಿ ಖಾನೆಗೆ ಸಾಗುಸುತ್ತಿದ್ದ 9 ಗೋವುಗಳ ರಕ್ಷಣೆ… ವಿಶ್ವ ಹಿಂದೂ ಪರಿಷದ್ ಹಾಗೂ ಶ್ರೀ ರಾಮ ಸೇನೆ ಕಾರ್ಯಕರ್ತರಿಂದ ರಕ್ಷಣೆ.

ಹುಬ್ಬಳ್ಳಿ : ಮಿನಿ ಗೂಡ್ಸ್ ವಾಹಮದಲ್ಲಿ ಅಕ್ರಮವಾಗಿ ಹಸುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದ ವಾಹನ ಬೆನ್ನಟ್ಟಿ ತಡೆದು 9 ಗೋವುಗಳನ್ನು ಶ್ರೀರಾಮ ಸೇನೆಯ ಹಾಗೂ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ರಕ್ಷಣೆ ಮಾಡಿರುವ ಘಟನೆ ಹುಬ್ಬಳ್ಳಿ ಹೊರವಲಯದ ಕಾರವಾರ ರಸ್ತೆ ಬ್ರಡ್ಜ್ ಬಳಿ ಇಂದು ನಡೆದಿದೆ.
ಕಲಘಟಗಿಯಿಂದ ಚಂದ್ರಶೇಖರ ಹಂಜಗಿ ಹುಬ್ಬಳ್ಳಿಗೆ ಬರುವ ವೇಳೆ ಅಕ್ರಮವಾಗಿ ಅಶೋಕ ಲೇಲ್ಯಾಂಡ್ ಬಡಾ ದೋಸ್ತ ವಾಹನದಲ್ಲಿ ಹಿಂಬದಿ ಪರದೆ ಬಿಟ್ಟುಕೊಂಡು ಹಸುಗಳನ್ನು ತುಂಬಿಕೊಂಡು ಬರುವುದನ್ನು ಗಮನಿಸಿದ್ದಾರೆ. ವಾಹನ ಚಾಲಕನ ಬಳಿ ವಿಚಾರಿಸಲು ಮುಂದಾದಾಗ ಚಾಲಕ ಸಹಕರಿದೇ ವೇಗವಾಗಿ ವಾಹನ ಚಲಾವಣೆ ಮಾಡಿಕೊಂಡು ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಅನುಮಾನಗೊಂಡ ಚಂದ್ರಶೇಖರ ತನ್ನ ಸಂಘಟನೆಯ ಮುಖಂಡರಿಗೆ ವಿಷಯ ಮುಟ್ಟಿಸಿದ್ದಾನೆ. ಅಷ್ಟೋತ್ತಿಗಾಗ್ಲೇ ಮಿನಿ ಗೂಡ್ಸ್ ವಾಹನ ಹುಬ್ಬಳ್ಳಿ ಹೊರವಲಯದ ಕಾರವಾರ ಬ್ರಿಡ್ಜ್ ಬಳಿ ಬಂದಿದೆ. ಕೂಡಲೇ ಅಲ್ಲಿಗೆ ಬಂದಿದ್ದ ಶ್ರೀರಾಮ ಸೇನೆ ಹಾಗೂ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ವಾಹಮ ನಿಲ್ಲಿಸಿ ವಿಚಾರಿಸಲು ಹೋಗುವಷ್ಟರಲ್ಲಿ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದು, ಕೂಡಲೇ ಹಳೇ ಹುಬ್ಬಳ್ಳಿ ಪೊಲೀಸರನ್ನು ಸ್ಥಳಕ್ಲೆ ಕರೆಯಿಸಿ ಹಸುಗಳನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಈಗ ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಗೋ ಸಾಗಾಟದ ಹಿಂದಿರುವ ವ್ಯಕ್ತಿಗಳ ಪತ್ತೆಗೆ ಪೊಲೀಸರು ಈಗ ಮುಂದಾಗಿದ್ದಾರೆ.
![]()