ಸಿಡಿಲು ಬಡೆದು ಯುವಕ ಸಾವು…. ರಜೆ ಹಿನ್ನಲೆ ಮಾವನ ಮನೆಗೆ ಬಂದಿದ್ದ ಯುವಕ ಸಿಡಿಲಿಗೆ ಬಲಿ.
1 min read
ಧಾರವಾಡ : ರಜೆಗೆಂದು ಮಾವನ ಮನೆಗೆ ಬಂದಿದ್ದ ಬಾಲಕನೋರ್ವ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಇಂದು ಕುಂದಗೋಳ ತಾಲೂಕಿನ ಹಿರೇನೆರ್ತಿ ಗ್ರಾಮದಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಮೈಲಾರಪ್ಪ ಬಸವರಾಜ ಉಣಕಲ್ ಎಂಬ 18 ವರ್ಷದ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ರಜೆ ಸಮಯ ಕಳೆಯಲು ಮೈಲಾರಪ್ಪ ನಾಲ್ಕೈದು ದಿನಗಳ ಹಿಂದಷ್ಟೇ ಹಿರೆನೇರ್ತಿ ಗ್ರಾಮದ ಮಾವನ ಮನೆಗೆ ಬಂದಿದ್ದ. ಇಂದು ಹಿರೇನೆರ್ತಿ ಗ್ರಾಮದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಶಿಲ್ಪಾ ಭೇಟಿ ನೀಡಿ ಪ್ರಾಥಮಿಕ ವರದಿ ಪಡೆದಿದ್ದು, ಪೊಲೀಸರು ಸಮ್ಮುಖದಲ್ಲಿ ಮೃತ ಬಾಲಕನ ಶವವನ್ನು ಕುಂದಗೋಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಗೆ ತಹಶೀಲ್ದಾರ್ ರಾಜು ಮಾವರಕರ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
