ಮಂಗಳವಾರ ರಾಶಿ ಭವಿಷ್ಯ – ಮೇ, 20,2025

1 min read
Share it

 

ಮೇಷ ರಾಶಿ

ಅನಾರೋಗ್ಯ ಪೀಡಿತರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ

ಈ ದಿನ ಹಿತಶತೃಗಳಿಂದ ತೊಂದರೆ ಸಾಧ್ಯತೆ, ಎಚ್ಚರಿಕೆ ಇರಲಿ

ಕುಟುಂಬದ ಸದಸ್ಯರ ಮಧ್ಯೆ ಕಲಹ ಸಾಧ್ಯತೆ

ಇಂದು ಶಾಂತವಾಗಿರಿ, ನಿಮ್ಮ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸಿ

ಈಶ್ವರನನ್ನು ಆರಾಧಿಸಬೇಕು

 

ವೃಷಭ ರಾಶಿ

ದೊಡ್ಡ ಉದ್ದಿಮೆ-ಕೈಗಾರಿಕೆಗಳನ್ನು ಹೊಂದಿರುವವರಿಗೆ ಶುಭಫಲ

ಹಿಂದೆ ಮಾಡಿದ್ದ ಉತ್ತಮ ಕೆಲಸಗಳಿಗೆ ಇಂದು ಮೆಚ್ಚುಗೆ ಸಿಗುತ್ತದೆ

ವೈವಾಹಿಕ ಜೀವನದಿಂದ ಸಂತೋಷ ಸಿಗುತ್ತದೆ

ಕುಟುಂಬಕ್ಕೆ ಹೊಸ ಅತಿಥಿ ಆಗಮನ ಸಾಧ್ಯತೆ ಇದೆ

ನಿಮ್ಮ ವೃತ್ತಿಯಲ್ಲಿ ಸಮಾಧಾನ ಸಿಗುವ ದಿನ

ಬೇರೆಯವರಿಗೆ ಸಹಾಯ ಮಾಡುತ್ತಿರಿ, ಇದರಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ

ಹೊಸ ಕೆಲಸಗಳು, ಯೋಜನೆಗಳು ಆರಂಭವಾಗುವ ದಿನ

ಶಿವಾರಾಧನೆ ಮಾಡಬೇಕು

 

ಮಿಥುನ ರಾಶಿ

ಅವಸರದಲ್ಲಿ ಮಾಡಿದ ಕೆಲಸಗಳಿಂದ ನಷ್ಟ ಹೊಂದುತ್ತೀರಿ

ಉದ್ಯೋಗ ವ್ಯಾಪಾರದೊಂದಿಗೆ ಇನ್ನೊಂದು ಕೆಲಸವನ್ನು ಶುರು ಮಾಡುವ ಯೋಚನೆ ಬರುತ್ತದೆ

ಹಣಕಾಸಿನ ವಿಚಾರದಲ್ಲಿ ಈ ದಿನ ಚೆನ್ನಾಗಿದೆ

ಪೂರ್ವಿಕರು, ಹಿರಿಯರು ಮಾಡಿದ ಧರ್ಮ-ಕರ್ಮಗಳಿಂದ ನಿಮಗೆ ಯಶಸ್ಸು ಸಿಗುತ್ತದೆ

ಗುರುಗಳನ್ನು ಆರಾಧಿಸಬೇಕು

 

ಕಟಕ ರಾಶಿ

ವೃತ್ತಿಪರರು ನಿಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ

ಸಮಾಜದಲ್ಲಿ ನಿಮ್ಮ ಚಿಂತನೆ-ವಿಚಾರಗಳಿಗೆ ಮನ್ನಣೆ ದೊರೆಯುತ್ತದೆ

ವಾದ-ವಿವಾದಗಳನ್ನು ಮಾಡಿಕೊಳ್ಳಬೇಡಿ ಕೆಲಸಗಳು ಹಾಳಾಗುತ್ತವೆ

ಇಂದು ನಿಮ್ಮ ಮಾತುಗಳಲ್ಲಿ ಗೊಂದಲವಿಲ್ಲದೆ ಸ್ಪಷ್ಟವಾಗಿರಲಿ

ಬಹಳ ಕಾಲದ ನಂತರ ನಿಮ್ಮ ಪ್ರೀತಿ ಪಾತ್ರರ ದರ್ಶನದಿಂದ ಮನಸ್ಸಿಗೆ ಆನಂದ

ಮಕ್ಕಳ ಆರೋಗ್ಯ ವ್ಯತ್ಯಾಸದಿಂದ ಸಾಯಂಕಾಲದ ಸಮಯಕ್ಕೆ ಬೇಸರ ಸಾಧ್ಯತೆ

ಸಾಯಂಕಾಲ ಸೂರ್ಯನನ್ನು ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ಜಮೀನು, ಆಸ್ತಿ ವಿಚಾರಗಳ ಬಗ್ಗೆ ಪರ-ವಿರೋಧ ಚರ್ಚೆ ಸಾಧ್ಯತೆ

ಮನೆಯ ಹೊರಗಡೆ ವಿನಾಕಾರಣ ಜಗಳವಾಗಬಹುದು ಎಚ್ಚರಿಕೆ ಇರಲಿ

ನೀವು ಬಳಸುವ ವಾಹನ ಬಗ್ಗೆ ಜಾಗ್ರತೆ ಇರಲಿ, ವಾಹನದಿಂದ ನಷ್ಟವಿದೆ

ಇಂದು ವಾಹನ ಚಾಲನೆ ಮಾಡದೆ ಇದ್ದರೆ ಒಳ್ಳೆಯದು

ಹೃದ್ರೋಗಿಗಳು ತುಂಬಾ ಕಷ್ಟ ಅನುಭವಿಸುವ ಸಾಧ್ಯತೆ ಇದೆ

ಔಷಧೋಪಚಾರಗಳು ಪರಿಣಾಮ ಬೀರದೆ ಇರಬಹುದು ಎಚ್ಚರ

ಉಗ್ರ ನರಸಿಂಹನ ಆರಾಧನೆ ಮಾಡಬೇಕು

 

ಕನ್ಯಾ ರಾಶಿ

ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಾಧ್ಯತೆ

ಕಾರ್ಯಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಸಾಧನೆ, ಬದಲಾವಣೆ ಸಾಧ್ಯತೆ

ಸಹೋದರ ವರ್ಗದ ಹಾರೈಕೆಯಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯತೆ

ವೈವಾಹಿಕ ಜೀವನ ಸುಖದಾಯಕವಾಗಿರುತ್ತದೆ

ಅವಿವಾಹಿತರಿಗೆ ವಿವಾಹ ವಿಚಾರದಲ್ಲಿ ಶುಭ ಫಲ

ಇಂದು ಆದಾಯದಲ್ಲಿ ಹೆಚ್ಚಳ ಆಗಲಿದೆ

ಆತ್ಮವಿಶ್ವಾಸ ಹೆಚ್ಚಾಗಿ ಸಂತೋಷ ಪಡುತ್ತೀರಿ

ಶಿವಾರಾಧನೆ ಮಾಡಬೇಕು

ತುಲಾ ರಾಶಿ

ಬೇರೆಯವರ ವಿಷಯಕ್ಕೆ ತಲೆ ಹಾಕಬೇಡಿ, ಅವಮಾನ ಸಾಧ್ಯತೆ

ಆದಾಯ ಇರುವ ದಿನ, ಆದರೆ ಖರ್ಚು ಕೂಡ ಹೆಚ್ಚಾಗಿರುತ್ತದೆ

ಚಿನ್ನಾಭರಣಗಳ ಖರೀದಿ ಬೇಡ, ಮನೆಯಲ್ಲಿರುವ ಆಭರಣಗಳ ಬಗ್ಗೆ ಜಾಗ್ರತೆ ಇರಲಿ

ಹೊಸ ಸಂಪರ್ಕಗಳಿಂದ ಮನಸ್ಸಿಗೆ ಖುಷಿಯಾಗಬಹುದು

ಇಂದು ಮಕ್ಕಳ ಶಿಕ್ಷಣ ವಿಚಾರವಾಗಿ ಉತ್ತಮ ದಿನ

ನಿಮ್ಮ ಆಲೋಚನೆಗಳು ಕುಟುಂಬಕ್ಕೆ ಸೀಮಿತವಾಗಿರದೆ ಸಮಾಜಮುಖಿಯಾಗಿರಲಿ

ವೈಯಕ್ತಿಕ ಲಾಭಕ್ಕೆ ನಂಬಿದವರಿಂದ ಮೋಸ ಸಾಧ್ಯತೆ

ವೀರಾಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ

ಹಣ ಹೂಡಿಕೆಯಿಂದ ಮನಸ್ಸಿಗೆ ಸಮಾಧಾನ ಸಿಗಬಹುದು

ಆಕಸ್ಮಿಕವಾಗಿ ಹಣ ಸಿಗುವುದರಿಂದ ಅಹಂಕಾರ ಬರಬಹುದು ಎಚ್ಚರವಾಗಿರಿ

ಸಂಬಂಧಿಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ

ನಿಮ್ಮ ತಾಳ್ಮೆ – ವಿನಯ ಮಾತ್ರ ನಿಮ್ಮನ್ನು ಕಾಪಾಡಬಲ್ಲದು

ನಿಮ್ಮನ್ನು ನೀವು ಮರೆಯುವ ಸಾಧ್ಯತೆ ಇದೆ

ಹಣದ ವ್ಯವಹಾರ, ಹೂಡಿಕೆಯನ್ನು ಮಧ್ಯಾಹ್ನದ ನಂತರ ಮಾಡಿ

ಶ್ರೀರಾಮ ಪರಿವಾರ ದೇವತೆಗಳನ್ನು ಆರಾಧನೆ ಮಾಡಬೇಕು

 

ಧನಸ್ಸು ರಾಶಿ

ಸೈದ್ಧಾಂತಿಕವಾಗಿ ಮಾಡಬೇಕಿರುವ ಸಮಸ್ಯೆಗಳ ಪರಿಹಾರಕ್ಕೆ ಹಿನ್ನಡೆಯಾಗುತ್ತದೆ

ನಿಮ್ಮ ಶತ್ರುಗಳ ಮಾತಿನಿಂದ ನಿಮ್ಮ ಆತ್ಮಿಯರು ನಿಮ್ಮನ್ನು ಅವಮಾನಿಸುವ ಸಾಧ್ಯತೆ

ನಿಮ್ಮೊಂದಿಗೆ ಸರಿಯಾಗಿ ವ್ಯವಹರಿಸುವುದಿಲ್ಲ, ಮಾತಾಡಲು ಒಪ್ಪುವುದಿಲ್ಲ

ಇಂದು ನಿಮ್ಮ ವೈಯಕ್ತಿಕ ಪ್ರತಿಷ್ಠೆ, ಅಹಂಕಾರ ಬಿಟ್ಟರೆ ಒಳ್ಳೆಯದು

ಸಮಾಜದಲ್ಲಿ ಚಿಕ್ಕವರ ಮುಂದೆ ಚಿಕ್ಕವರಾಗುವ ಸಾಧ್ಯತೆ ಇದೆ

ಕಲ್ಕಿ ಭಗವಾನರನ್ನು ಸ್ಮರಿಸಬೇಕು

 

ಮಕರ ರಾಶಿ

ಸ್ಮೇಹಿತರೊಂದಿಗೆ ನಿಮ್ಮ ವಿದ್ಯಾಭ್ಯಾಸ, ಕೆಲಸ, ಹೊಸ ಆಲೋಚನೆಗಳ ಬಗ್ಗೆ ಚರ್ಚಿಸಿದರೆ ಒಳ್ಳೆಯದು

ಕೆಲಸದ ಒತ್ತಡ ಇದ್ದಾಗ್ಯೂ ಜನಸೇವೆ ಮಾಡಿ ಗೌರವ ಹೆಚ್ಚಾಗುತ್ತದೆ

ಜನರು ಕೊಡುವ ಅಭಿಮಾನ, ಪ್ರೀತಿ, ಗೌರವಕ್ಕೆ ಭಾಜನರಾಗುತ್ತೀರಿ

ನಿಮ್ಮನ್ನು ನಂಬಿದವರಿಗೆ ನ್ಯಾಯವನ್ನು ಕೊಡುತ್ತೀರಿ

ಬೆಳ್ಳಂಬೆಳಗ್ಗೆ ಕಹಿ ಘಟನೆಯಿಂದ ಮನೆಯಲ್ಲಿ ಅಶಾಂತಿ ಸಾಧ್ಯತೆಯಿದೆ

ಕೋದಂಡರಾಮನ ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ

ಹಣದ ವಿಚಾರದಲ್ಲಿ ಇಂದು  ಗೊಂದಲ ಸಾಧ್ಯತೆ

ಆದಾಯ-ಖರ್ಚಿನ ಅಸ್ಪಷ್ಟತೆಯಿಂದ ತೊಳಲಾಡಬಹುದು

ಗಂಟಲಿನ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ

ಸಂಗೀತಕಾರರಿಗೆ ತಮ್ಮ ಕಾರ್ಯದಲ್ಲಿ ಹಿನ್ನಡೆ, ಕಾರ್ಯಕ್ರಮ ರದ್ದಾಗುವ ಸೂಚನೆ

ರಾಜಕಾರಣಿಗಳಿಗೆ ಹೊಸ ಸುದ್ದಿ ಸಾಧ್ಯತೆ

ಮಕ್ಕಳ ಉತ್ತಮ ಫಲಿತಾಂಶದಿಂದ ಸಮಾಧಾನ

ಶಿವಾರಾಧನೆ ಮಾಡಬೇಕು

 

ಮೀನ  ರಾಶಿ

ತತ್ವ ಸಿದ್ಧಾಂತದ ಆಧಾರದ ಮೇಲೆ ಸಮಸ್ಯೆಗಳನ್ನು ಬಗೆಹರಿಸಲು ಕಷ್ಟದ ದಿನವಾಗುತ್ತದೆ

ಪ್ರಾಯೋಗಿಕ ರೀತಿಯಿಂದ ಬಗೆಹರಿಸಿಕೊಳ್ಳಬೆಕು

ದಾಕ್ಷಿಣ್ಯಕ್ಕೆ ಒಳಗಾಗಿ ನಿಮ್ಮ ಆತ್ಮಗೌರವಕ್ಕೆ ಕೊರತೆ ಸಾಧ್ಯತೆ

ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಮುಕ್ತವಾಗಿ ಮಾತಾಡಿ ಬಗೆಹರಿಸಿಕೊಳ್ಳಬೇಕು

ವಿದ್ಯಾರ್ಥಿಗಳಿಗೆ ಈ ದಿನ  ಸಮಸ್ಯೆ ಬಗೆ ಹರಿಯುತ್ತದೆ

ಮನೆ ದೇವಾಲಯಗಳಲ್ಲಿ ಕುಟುಂಬದ ಹಿತಕ್ಕಾಗಿ ಧರ್ಮಕಾರ್ಯ ನಡೆಯುತ್ತವೆ

ಮನಸ್ಸಿಗೆ ಆಹ್ಲಾದ ನೆಮ್ಮದಿ ದೊರೆಯುತ್ತದೆ

ನವಗ್ರಹರ ಆರಾಧನೆ ಮಾಡಬೇಕು

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?