ರಾತ್ರಿ ಸುರಿದ ಭಾರಿ ಮಳೆಗೆ ನಡುಗಿದ ಬೆಂಗಳೂರು: ಸಾಯಿಲೇಔಟ್ ಜಲಾವೃತ, ಮನೆಗಳಿಗೆ ನೀರು ನುಗ್ಗಿ ಅವಾಂತರ
1 min read
ಬೆಂಗಳೂರು : ನಿನ್ನೆ ರಾತ್ರಿ ಸುರಿದ ಮಳೆಗೆ ಸಿಲಿಕಾನ್ ಸಿಟಿ ಜನರು ನಿಜಕ್ಕೂ ಬೆಚ್ಚಿ ಬಿದಿದ್ದಾರೆ. ಸತತ ಸುರಿದ ಮಳೆಗೆ ನೀರು ತುಂಬಿದ ರಸ್ತೆಯಲ್ಲಿ ಬೈಕ್ ಸವಾರರು ಪರದಾಡಿದ್ದು, ಇನ್ನೊಂದೆಡೆ ರಾಜಧಾನಿಯಲ್ಲಿ ಮಳೆ ಅವಾಂತರಗಳನ್ನೇ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ಕಾವೇರಿ ನಗರದ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಟುವಂತಾಗಿದೆ. ನಗರದಲ್ಲಿ ಕಳೆದ ರಾತ್ರಿ ಸುರಿದ ಬಾರಿಮಳೆ ಹಿನ್ನೆಲೆಯಲ್ಲಿ ಸಾಯಿ ಬಡಾವಣೆಗೆ ಜಲ ಕಂಟಕ ಎದುರಾಗಿದೆ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಸಂಕಷ್ಟ ಪಡುವಂತಾಗಿದೆ.
ಮಳೆಯಿಂದಾಗಿ ಬಡಾವಣೆ ಜಲಾವೃತಗೊಂಡಿದ್ದು, ಇದೇ ವರ್ಷದಲ್ಲಿ ಹಲವು ಬಾರಿ ಸಮಸ್ಯೆ ಎದುರಾಗಿದೆ. ಸಾಯಿಮಂದಿರಕ್ಕೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬೆಳಗ್ಗೆಯಾದರೂ ನೀರು ಮಾತ್ರ ಖಾಲಿಯಾಗಿಲ್ಲ. ರಾಜಕಾಲುವೆ ನೀರು ರಸ್ತೆ ತುಂಬಿ ಮನೆಗಳಿಗೂ ನುಗ್ಗಿದೆ. ಹಾಗಾಗಿ ಜನರು ಹೊರಗೆ ಬಾರದೆ ಮನೆಯಲ್ಲಿ ಉಳಿಯುವಂತಾಗಿದೆ. ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಚರಂಡಿ ನೀರು ಹೊರಹಾಕಲು ಹರಸಾಹಸಪಟ್ಟಿದ್ದಾರೆ. ಮಳೆಗೆ ರಸ್ತೆಯಲ್ಲಿ ಮೂರ್ನಾಲ್ಕು ಅಡಿ ನೀರು ನಿಂತಿದ್ದು, ಹಲವು ಬೈಕ್ಗಳು ನೀರಲ್ಲಿ ಮುಳುಗಿ ಹೋಗಿದ್ದವು,ಅಡುಗೆ ಸಾಮಾಗ್ರಿಗಳು ಸೇರಿದಂತೆ ಮೌಲ್ಯಯುತ ಸಾಮಾಗ್ರಿಗಳು ಮಳೆಗೆ ಆಹುತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಯಿಬಡಾವಣೆ ನೂರಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ ಬಿಬಿಎಂಪಿಯವರು ಯಾವುದೇ ಶಾಶ್ವತ ಪರಿಹಾರ ಒದಗಿಲ್ಲ ಎಂದು ಸ್ಥಳೀಯ ನಿವಾಸಿ ಸಂತೋಷ ಆರೋಪಿಸಿದರು. ಪ್ರತಿಬಾರಿ ಮಳೆ ಬಂದಾಗಲೂ ಸಮಸ್ಯೆ ಎದುರಾಗುತ್ತಿದ್ದು,ಬಿಬಿಎಂಪಿ ಅಧಿಕಾರಿಗಳು ಕಲ್ಲು ಬಂಡೆಗಳಂತೆ ವರ್ತಿಸುತ್ತಾರೆ, ಮಳೆ ಬಂದರೆ ಸಮಸ್ಯೆ ಸಾಮಾನ್ಯವಾಗಿದ್ದು,ಇದರ ಬಗ್ಗೆ ನೀಗಾವಹಿಸಿಸುಂತೆ
ನಿವಾಸಿ ನವೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಅವಾಂತರಕ್ಕೆ ನಿವಾಸಿಗಳು ಸುಸ್ತಾಗಿದ್ದು, ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ಸಣ್ಣ ಮಳೆ ಬಂದರೂ ಇಡೀ ಮನೆ ಮುಳುಗುತ್ತಿದೆ. ತೆರಿಗೆ ಕಟ್ಟುತ್ತೇವೆ ಆದರೂ ಇಂತಹ ಸ್ಥಿತಿ ಇದೆ.