ಗುರುವಾರ ರಾಶಿ ಭವಿಷ್ಯ-ಮೇ,15,2025

1 min read
Share it

 

ಮೇಷ ರಾಶಿ

ಇಷ್ಟವಿಲ್ಲದ ವಿಚಾರಗಳೇ ನಿಮ್ಮ ಸುತ್ತ ಮಾತನಾಡಿ ಮಾನಸಿಕ ಹಿಂಸೆ ಕೊಡುವರು

ಮನೆಯಲ್ಲಿ ಸಂತೃಪ್ತಿಯ ವಾತಾವರಣವಿರುತ್ತದೆ

ಆತ್ಮವಿಶ್ವಾಸ ಹೆಚ್ಚಿಸುವ ದಿನವಾಗಿರುತ್ತದೆ

ಮುಂದಿನ ಯೋಚನೆಗಳ ಫಲ, ಯಶಸ್ಸಿನ ಗುಟ್ಟು ತಿಳಿಯುವಂತ ದಿನ

ಅಂದುಕೊಂಡ ಕಾರ್ಯವನ್ನು ಮೇಲ್ದರ್ಜೆಗೆ ಏರಿಸಿ ಅದಕ್ಕೆ ಆದ್ಯತೆ ಕೊಡುತ್ತೀರಿ

ಸ್ನೇಹಿತರ ಮನೆಯಲ್ಲಿ ಮಂಗಳ ಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ

ಆಕಸ್ಮಿಕವಾಗಿ ವಾಹನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಚ್ಚರವಿರಲಿ

ಗಣಪತಿಯ ಆರಾಧನೆ ಮಾಡಬೇಕು

 

ವೃಷಭ ರಾಶಿ

ಹಣದ ವ್ಯವಹಾರದಲ್ಲಿ ತಾಳ್ಮೆ ಮತ್ತು ಯುಕ್ತಿಯ ಅಗತ್ಯವಿದೆ

ನಿಮ್ಮ ಇಚ್ಛೆಯಂತೆ ಕೆಲಸ ಮಾಡಿ ಯಶಸ್ಸನ್ನು ಹೊಂದಬಹುದು

ಈ ದಿನ ಉತ್ತಮವಾಗಿದೆ ಅಂತ ಭಾವಿಸಿ ಕಾರ್ಯಪ್ರವೃತ್ತರಾಗಿ ಕೆಲಸದಲ್ಲಿ ಯಶಸ್ಸು ಸಿಗಲಿದೆ

ಕೆಲಸಗಳಲ್ಲಿ ಸಣ್ಣ ಪುಟ್ಟ ಕಿರಿಕಿರಿ ಉಂಟಾಗಬಹುದು

ನಿಮ್ಮ ಮನಸ್ಸು ಹತೋಟಿಯಲ್ಲಿರಬೇಕು

ಅಸಂಬದ್ಧ ಚಟುವಟಿಕೆಗಳತ್ತ ಮನಸ್ಸು ಹೋಗಬಹುದು

ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ

ಹಣಗಳಿಸಬೇಕೆಂಬ ಭರದಲ್ಲಿ ತಪ್ಪು ದಾರಿ ಹಿಡಿಯಬಾರದು

ಹಳೆಯ ವಾಹನದಲ್ಲಿ ಪ್ರಯಾಣಿಸುವಾಗ ತುಂಬಾ ಎಚ್ಚರವಹಿಸಿ

ಸುಬ್ರಹ್ಮಣ್ಯ ದೇವರನ್ನು ಆರಾಧಿಸಬೇಕು

 

ಮಿಥುನ ರಾಶಿ

ದಿನದ ಅಂತ್ಯದಲ್ಲಿ ಆನಂದದ ಕ್ಷಣಗಳು ನಿಮ್ಮನ್ನು ಹತ್ತಿರದಿಂದ ತಲುಪುತ್ತವೆ.

ಆರ್ಥಿಕವಾಗಿ ಅನುಕೂಲವಾಗುವ ದಿನ

ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯತೆಯನ್ನ ಪೂರೈಸುವ ದಿನ

ಗುರುವಾರ ತಮ್ಮ ಕರ್ತವ್ಯವನ್ನು ಬಹಳ ನಿಷ್ಠೆಯಿಂದ ಮಾಡುವಂತದ್ದು

ಪ್ರೇಮಿಗಳಿಗೆ ಶುಭದಿನ, ಸದುಪಯೋಗವಾಗಲಿ

ಉದ್ಯೋಗಿಗಳಿಗೆ ವ್ಯಾವಹಾರಿಕವಾಗಿ ಲಾಭವಿದೆ ಆದರೆ ಪ್ರಾಮಾಣಿಕವಾಗಿರಬೇಕು

ಸ್ನೇಹಿತರ ಭೇಟಿಯಿಂದ ಮೋಜು, ಮಸ್ತಿ ಹೆಚ್ಚಾಗಿದ್ದು ಹಣ ಹೆಚ್ಚು ಖರ್ಚು ಮಾಡುತ್ತೀರಿ

ಪ್ರಭಾವಿ ವ್ಯಕ್ತಿಗಳ ಭೇಟಿ ,ಪರಿಚಯ, ಸಂತೋಷವನ್ನುಂಟು ಮಾಡುತ್ತದೆ

ಮಹಾವಿಷ್ಣುವನ್ನು ಆರಾಧಿಸಬೇಕು

 

ಕಟಕ ರಾಶಿ

ನಿಮ್ಮ ಎದುರಾಳಿಯನ್ನು ಯುಕ್ತಿಯಿಂದ ಗೆಲ್ಲಬಹುದು. ನಿಮ್ಮ ಸಾಮರ್ಥ್ಯಕ್ಕೆ ಶತ್ರುಗಳು ತಾನಾಗಿಯೇ ಕಡಿಮೆಯಾಗುವರು.

ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರು ಸವಾಲುಗಳನ್ನು ಎದುರಿಸಬೇಕಾದ ದಿನ

ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ದ್ರೋಹ ಮಾಡುವ ಸೂಚನೆ ಇದೆ

ಆತುರದಿಂದ ಯಾವುದೇ ನಿರ್ಧಾರವನ್ನು ಮಾಡಬಾರದು

ಅನಗತ್ಯ ವಿಚಾರಗಳಗೆ ಜಗಳವಾಗುವ ಸಂಭವವೂ ಹೆಚ್ಚಾಗಿರುತ್ತದೆ

ಕುಟುಂಬದಲ್ಲಿ ಹೆಂಗಸರ ಆರೋಗ್ಯ ಹದಗೆಡಬಹುದು ಎಚ್ಚರಿಕೆವಹಿಸಿ

ದಾಂಪತ್ಯದಲ್ಲಿ ಕಲಹ, ಅಸಮಾಧಾನ ಉಂಟಾಗಬಹುದು

ಈಶ್ವರನನ್ನು ಆರಾಧಿಸಬೇಕು

 

ಸಿಂಹ ರಾಶಿ

ಸಾಮಾಜಿಕವಾಗಿ ಬೆಳೆಯುವ ಆಸೆ ಚಿಗುರುವುದು

ನೀವು ಯೋಚಿಸಿದ ಎಲ್ಲಾ ಕೆಲಸಗಳೂ ಪೂರ್ಣಗೊಳ್ಳುತ್ತದೆ

ಕೆಲಸವನ್ನು ಅಲ್ಪ ಎಂದು ಭಾವಿಸದೆ ಶ್ರದ್ಧೆ ಇರಲಿ ತಾತ್ಸಾರ ಬೇಡ

ಹೊಸ ಕೆಲಸವನ್ನು ಆರಂಭ ಮಾಡುವುದಕ್ಕೆ ಅದ್ಭುತವಾದ ದಿನ

ಕೆಲಸ ನಿಮಿತ್ತ , ಹೆಚ್ಚಿನ ವಿದ್ಯಾಭ್ಯಾಸದ ನಿಮಿತ್ತ ಸಂದರ್ಶನಕ್ಕೆ ಭಾಗಿಯಾದರೆ ಯಶಸ್ಸು ನಿಮ್ಮದಾಗಿರುತ್ತದೆ

ಮುರಿದು ಬಿದ್ದ ಸಂಬಂಧಗಳನ್ನು ಸರಿಪಡಿಸಲು ಉತ್ತಮವಾದ ದಿನ

ಪ್ರೇಮಿಗಳಿಗೆ ತುಂಬಾ ಅಪಾಯಕರವಾದ ದಿನ

ಪಾರ್ವತಿ ಪರಮೇಶ್ವರನ್ನು ಆರಾಧನೆ ಮಾಡಬೇಕು

 

ಕನ್ಯಾ ರಾಶಿ

ಹಲವು ವಿಚಾರಕ್ಕೆ ಹೊಂದಾಣಿಕೆಯ ಕೊರತೆ ಕಂಡು ದಾಂಪತ್ಯದಲ್ಲಿ ಕಲಹವಾಗುವುದು.

ಮಹಿಳೆಯರಿಗೆ ಆರೋಗ್ಯದ ಆತಂಕ ಕಾಡಬಹುದು ಎಚ್ಚರಿಕೆ

ಅಲ್ಪ ಸ್ವಲ್ಪ ಕೂಡಿಟ್ಟ ಹಣ ಔಷಧಿಗಳಿಗೆ ಖರ್ಚಾಗಬಹುದು

ಹಣದ ಖರ್ಚು, ಅನಾರೋಗ್ಯದಿಂದ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ

ಕಷ್ಟ ಪಟ್ಟು ಮಾಡಿದ ಕೆಲಸ, ಹಾಗೆ ಹಿಂದೆ ಮಾಡಿದ ಉದ್ಯೋಗ ನೆನಪಾಗಿ ನೋವನ್ನು ಅನುಭವಿಸುತ್ತೀರಿ

ಕುಟುಂಬದಲ್ಲಿ ನಂಬಿಕೆ ಕಡಿಮೆಯಾಗಬಹುದು

ನಿಮ್ಮ ಸಹಾಯಕ್ಕೆ ಯಾರು ಆಗುವುದಿಲ್ಲ ಎಂಬ ಮನೋಭಾವನೆ ಕಾಡುತ್ತದೆ

ನಿಮ್ಮ ಕುಲದೇವತೆಯನ್ನು ಆರಾಧಿಸಬೇಕು

 

ತುಲಾ ರಾಶಿ

ನಿಮ್ಮ ಬೆಳವಣಿಗೆಗೆ ಪೂರಕವಾದ ಸನ್ನಿವೇಶವು ಬರಬಹುದು.

ಕುಟುಂಬದ ಎಲ್ಲಾ ಸದಸ್ಯರು ಕೂಡ ಸಂತೋಷವಾಗಿರುವ ದಿನ

ಆರ್ಥಿಕವಾದ ಸ್ಥಿತಿ ಅಥವಾ ಬಂಧುಗಳ ವಿಶ್ವಾಸ ಎಲ್ಲವೂ ನೀವು ಅಂದುಕೊಂಡ ಹಾಗೆ ನಡೆದು ಸಮಾಧಾನ ಕೊಡುವ ದಿನ

ಧನಾತ್ಮಕವಾದ ಚಿಂತನೆಗಳು ನಿಮ್ಮ ಮನಸಿಗೆ ಬರುವುದಿಲ್ಲ

ಕಾರ್ಯಕ್ಷೇತ್ರದಲ್ಲಿ ಸಿಹಿ ಸುದ್ದಿ ಇರುತ್ತದೆ, ಅನುಭವಿಸಲು ಯೋಗವಿಲ್ಲ

ಪ್ರೇಮಿಗಳಿಗೆ ಅಡ್ಡಿ ಆಗುವ ದಿನ, ಸವಾಲುಗಳನ್ನು ಎದುರಿಸಬೇಕಾಗುತ್ತದೆ

ಸಾಯಂಕಾಲಕ್ಕೆ ಅದೃಷ್ಟ ವಿರುದ್ಧ ಅನಿಸುತ್ತದೆ

ಕುಬೇರನನ್ನು ಪ್ರಾರ್ಥಿಸಬೇಕು

 

ವೃಶ್ಚಿಕ ರಾಶಿ

ಆರ್ಥಿಕ ವ್ಯವಹಾರದಲ್ಲಿ ಲಾಭದ ಸೂಚನೆ ಇದೆ.

ಈ ದಿನ ಬರೀ ನಕಾರಾತ್ಮಕ ಚಿಂತನೆಗಳು, ವಿಷಯಗಳು ನಿಮ್ಮ ಮುಂದೆ ಬರುವಂತಹದ್ದು

ನಿಮ್ಮ ನಿರ್ದಿಷ್ಟ ಗುರಿಗಳನ್ನು ತಲುಪಲು ಹಲವು ರೀತಿಯಲ್ಲಿ ಪ್ರಯತ್ನಿಸಿ ವಿಫಲರಾಗುತ್ತೀರಿ

ಸಂಬಂಧಿಕರು ಮತ್ತು ಸ್ನೇಹಿತರು ದೊಡ್ಡ ಆತಂಕಕ್ಕೆ ಒಳಗಾಗಬಹುದು

ಇಡೀ ದಿನವನ್ನು ತುಂಬಾ ತಾಳ್ಮೆಯಿಂದ ಕಳೆಯಬೇಕಾಗುತ್ತದೆ

ದಾಂಪತ್ಯದಲ್ಲಿ ವೈಮನಸ್ಯ ಬರದಂತೆ ನೋಡಿಕೊಳ್ಳಬೇಕು

ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರಬಹುದು

ಹಳೆಯ ಲೆಕ್ಕದಿಂದ ಬೇಸರ ಉಂಟಾಗಲಿದೆ

ಅಷ್ಟಲಕ್ಷ್ಮೀಯನ್ನು ಆರಾಧಿಸಬೇಕು

 

ಧನಸ್ಸು ರಾಶಿ

ಏನೋ ಮಾಡಲು ಹೋದ ಶತ್ರುಗಳಿಂದ ನಿಮಗೆ ಅನುಕೂಲವೇ ಆಗುವುದು.

ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಸಾಧ್ಯತೆ

ಸಂಪಾದನೆ ಮಾಡುವ ದೃಷ್ಟಿಯಲ್ಲಿ ಆತ್ಮಸ್ಥೆರ್ಯ ಇದ್ದರೂ ಖರ್ಚನ್ನು ನೋಡಿ ಧೈರ್ಯಗೆಡಬೇಕಾದ ಪರಿಸ್ಥಿತಿ ಏರ್ಪಾಟಾಗಬಹುದು

ವ್ಯವಹಾರದಲ್ಲಿ ಒಪ್ಪಂದಗಳಾಗಬಹುದು ಅಥವಾ ಮಾತುಕತೆಗಳು ನಡೆಯಬಹುದು

ವಸ್ತುಗಳ ವಿತಕರಿಗೆ ತುಂಬಾ ಲಾಭದ ದಿನ

ಮನೆಗೆ ಬಂದ ಅತಿಥಿಗಳಿಂದ ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ

ಮಹಾವಿಷ್ಣುವಿನ ಆರಾಧನೆ ಮಾಡಬೇಕು

 

ಮಕರ ರಾಶಿ

ಇಂದು ನಿಮ್ಮ ಹದಗೆಟ್ಟ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದೇ ತುರ್ತು ಚಿಕಿತ್ಸೆಯನ್ನು ಪಡೆದು ಮುಂದುವರಿಯಿರಿ.

ಬೆಲೆ ಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ

ಅನುಭವಿಗಳ ಉಚಿತವಾದ ಸಲಹೆ ಧೈರ್ಯವನ್ನು ತರಬಹುದು

ಕುಟುಂಬದಲ್ಲಿ ಸಂತಸದ ವಾತಾವರಣ ಇದ್ದರೂ ಸಮಾಧಾನವಿರುವುದಿಲ್ಲ

ವಿದೇಶದಲ್ಲಿರುವವರಿಂದ ಮನೆಗೆ ಶುಭವಾರ್ತೆ ಬರಬಹುದು

ಆಸ್ತಿ ಖರೀದಿಸಲು ಸಹಾಯಕವಾದ ಹಣ ಕೈ ಸೇರುತ್ತದೆ

ಮನೆಯಲ್ಲಿ ಎಲ್ಲವೂ ಶುಭ ಆದರೂ ಮಾನಸಿಕವಾಗಿ ಸಮಾಧಾನವಿರುವುದಿಲ್ಲ

ಮನಸ್ಸು ದಿನಪೂರ್ತಿ ಅಧೈರ್ಯದಿಂದ ಕೆಲಸ ಮಾಡುವ ಸಾಧ್ಯತೆಯಿದೆ

ಮಹಾಲಕ್ಷ್ಮೀಯನ್ನು ತಾವರೆ ಹೂವಿನಿಂದ ಅರ್ಚನೆ ಮಾಡ]ಬೇಕು

 

ಕುಂಭ ರಾಶಿ

ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಲ್ಲೊಂದು ಕಿರಿಕಿರಿ ಇರುವುದು.

ನಿರೀಕ್ಷಿತ ಕೆಲಸದ ವಿರುದ್ಧವಾಗಿ ಅಸಮಾಧಾನವಾಗುತ್ತದೆ

ನಿಮ್ಮ ಆಸೆಗಳಿಗೆ ಹಿನ್ನಡೆ ಆಗಬಹುದು

ಉತ್ತಮ ಅಧಿಕಾರಿಗಳು ನಿಮ್ಮ ಮೇಲೆ ಸಿಡಿದೇಳಬಹುದು

ಪ್ರಯಾಣ, ಪ್ರವಾಸಗಳು ರದ್ದಾಗಬಹುದು ಇದರಿಂದ ಮಾನಸಿಕ ಬೇಸರ ಕಾಡಬಹುದು

ಇತರರನ್ನು ಅವಲಂಭಿಸಿ ಕೆಲಸಗಳನ್ನು ಮಾಡಬೇಕಾದ ಸಂದರ್ಭಗಳು ಹೆಚ್ಚಾಗಿ ಕಾಣುತ್ತದೆ

ದೈನಂದಿನ ಶಿಸ್ತು ಅಸ್ತವ್ಯಸ್ತವಾಗುತ್ತದೆ ಮನಸ್ಸಿನಲ್ಲಿ ಗಾಬರಿ ಉಂಟಾಗಬಹುದು

ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥಿಸಬೇಕು

 

ಮೀನ  ರಾಶಿ

ಕೆಟ್ಟ ಸ್ನೇಹಿತರ ಸಹವಾಸದಿಂದ ಅಪಕೀರ್ತಿ ನಿಮಗೆ ಸಿಗುವುದು.

ಈ ದಿನ ಕೆಲವು ಕೆಲಸಗಳು ಬೇಸರದಿಂದ ಮುಕ್ತಾಯವಾಗಬಹುದು

ಮನಸ್ಸಿನ ತೊಳಲಾಟ ಧೈರ್ಯಗೆಡಿಸುತ್ತದೆ

ಸಹೋದ್ಯೋಗಿಗಳು, ಮಿತ್ರರು, ಬಂಧುಗಳು ನಿಮ್ಮ ವರ್ತನೆಯಲ್ಲಿ ತಪ್ಪು ಹುಡುಕುತ್ತಾರೆ

ಸಣ್ಣ ಸಣ್ಣ ವಿಷಯಗಳಿಗೆ ಮಿತಿ ಮೀರಿ ಮಾತಾಡಬಾರದು

ಕೆಲವು ಕಾನೂನು ತೊಡಕುಗಳು ನಿಮ್ಮ ನೌಕರಿಯಲ್ಲಿ ಎದುರಾಗಬಹುದು

ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ

ಬೆನ್ನು ಮೂಳೆಗೆ ತೊಂದರೆ ಆಗಬಹುದು ವೈದ್ಯರ ಸಲಹೆ ಪಡೆಯಿರಿ

ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?