ಒಳಚರಂಡಿ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಂ ಟಿ ಕೃಷ್ಣಪ್ಪ
1 min read
ತುರುವೇಕೆರೆ : ತುರುವೇಕೆರೆ ಪಟ್ಟಣದ ವರ ವಲಯದಲ್ಲಿರುವ ಪಟ್ಟಣ ಪಂಚಾಯಿತಿಗೆ ಒಳಪಡುವ ಮಲಿನ ನೀರು ಸಂಸ್ಕರಣ ಘಟಕ ಆವರಣದಲ್ಲಿ ಪಟ್ಟಣದಲ್ಲಿ ಎರಡನೇ ಹಂತದ ಒಳಚರಂಡಿ ಯೋಜನೆಗೆ ಶಾಸಕ ಎಂ ಟಿ ಕೃಷ್ಣಪ್ಪ ಅವರು ಗುದ್ದಲಿ ಪೂಜೆ ನೆರವೇರಿಸಿದರು, ಇದೆ ವೇಳೆ ಮಾತನಾಡಿದ ಅವರು ಸುಮಾರು 6:50 ಕೋಟಿ ರೂ ವೆಚ್ಚದಲ್ಲಿ ಮನೆ ಮನೆಗೆ ಒಳಚರಂಡಿ ಸಂಪರ್ಕ ಕಲ್ಪಿಸುವ ಸಲುವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ವೇಗವಾಗಿ ಈ ಕಾಮಗಾರಿಯನ್ನು ಮುಗಿಸಲಾಗುವುದು ಎಂದರು. ಇದೆ ವೇಳೆ ಹಿರಿಯರಾದ ತಿಮ್ಮಯ್ಯ ರವರಿಗೆ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಸ್ವಪ್ನ ನಟೇಶ್, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಆಶಾ ರಾಣಿ, ಎನ್ ಆರ್ ಸುರೇಶ್, ಮಧು, ರುದ್ರೇಶ್, ಸುನಿಲ್, ಪಟ್ಟಣ ಪಂಚಾಯಿತಿ ಆರ್ ಐ ಪ್ರಶಾಂತ್, ಶಾಸಕರ ಆಪ್ತ ಸಹಾಯಕ ರಾಘು, ಗುತ್ತಿಗೆದಾರ ಆನಂದ್ ಗೌಡ, ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗ ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ, ಮಂಜುನಾಥ್ ಕೆ ಎ ತುರುವೇಕೆರೆ
