ರಸ್ತೆ ಅಪಘಾತದಲ್ಲಿ ವ್ಯಕ್ತಿ ಓರ್ವ ಸಾವು

ತುರುವೇಕೆರೆ : ವ್ಯಕ್ತಿ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಬಾಣಸಂದ್ರ ರಸ್ತೆಯಲ್ಲಿ ನಡೆದಿದೆ. ತಾವರೆಕೆರೆ ಬಡಾವಣೆ ವಾಸಿ ಸುರೇಶ್ 38 ವರ್ಷದ ವ್ಯಕ್ತಿ ಮೃತ ದುರ್ದೈವಿಯಾಗಿದ್ದು, ವ್ಯಕ್ತಿ ಗಾರೆ ಕೆಲಸ ಮಾಡುತ್ತಿದ್ದು ಪ್ರತಿನಿತ್ಯದಂತೆ ಕೆಲಸಕ್ಕೆ ತೆರಳಿ ಸಂಜೆ ವೇಳೆಗೆ ಮನೆಗೆ ವಾಪಸ್ ಆಗಿದ್ದಾನೆ. ನಿನ್ನೆ ರಾತ್ರಿ 8 ರ ಸಮಯದಲ್ಲಿ ಮೃತ ಸುರೇಶ್ ಮನೆಯಿಂದ ಹೊರಗೆ ಹೋಗಿದ್ದಗ ಈ ಘಟನೆ ಸಂಭವಿಸಿದೆ.
ಅಪಘಾತ ನಿನ್ನೆ ರಾತ್ರಿ ಅಥವಾ ಇಂದು ಬೆಳಿಗ್ಗೆ ಯಾವ ಸಮಯದಲ್ಲಿ ನಡೆದಿದೆ ಎಂಬುದು ಇನ್ನು ತಿಳಿದು ಬಂದಿಲ್ಲ , ಒಟ್ಟಾರೆ ಈ ಅಪಘಾತ ಬಹುಶಹ ನಾಲ್ಕು ಚಕ್ರದ ಕಾರಿನಿಂದ ಆಗಿದೆ ಎಂಬುದು ಸ್ಥಳದಲ್ಲಿ ಬಿದ್ದಿರುವ ಕೆಲವೊಂದು ವಸ್ತುಗಳಿಂದ ಮೇಲ್ನೋಟಕ್ಕೆ ಕಾಣುತ್ತಿದೆ . ಇನ್ನು ಸ್ಥಳಕ್ಕೆ ತುರುವೇಕೆರೆ ಸಿಪಿಐ ಲೋಹಿತ್ ಕುಮಾರ್ ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ಮೇಟಿ ಹಾಗೂ ಸಿಬ್ಬಂದಿ ವರ್ಗ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ,
ವರದಿ, ಮಂಜುನಾಥ್ ಕೆ ಎ ತುರುವೇಕೆರೆ
![]()