ಕೋರ್ಟ್ ಆದೇಶದಂತೆ ಮುಖ್ಯರಸ್ತೆಯ ಜಾಹಿರಾತು ಹೋಲ್ಡಿಂಗ್ಸ್ ತೆರವು.
1 min read
ಕೋರ್ಟ್ ಆದೇಶದಂತೆ ಮುಖ್ಯರಸ್ತೆಯ ಜಾಹಿರಾತು ಹೋಲ್ಡಿಂಗ್ಸ್ ತೆರವು.
ಬೆಂ,ಆನೇಕಲ್,ಮೇ,14: ಚಂದಾಪುರ – ಆನೇಕಲ್ ಮುಖ್ಯ ರಸ್ತೆಯ ಸೂರ್ಯ ಸಿಟಿ (ಕರ್ನಾಟಕ ಗೃಹ ಮಂಡಳಿ) ಮುಂಭಾಗ ಇದ್ದಂತಹ ಅನಧೀಕೃತ ಜಾಹೀರಾತು ಫಲಕ ತೆರವುಗೊಳಿಸುವಲ್ಲಿ ಅಧಿಕಾರೀ ವರ್ಗ ಮುನ್ನುಗ್ಗಿದ್ದಾರೆ.
ಬಿರುಗಾಳಿ-ಮಳೆಗೆ ರಸ್ತೆ ಸಂಚಾರಿಗಳಿಗೆ ಪ್ರಾಣಾಂತಕವಾಗಿದ್ದ ಎತ್ತರದ ಬೃಹತ್ ಹೋಲ್ಡಿಂಗ್ಸ್ ಕುರಿತು ಆಗಾಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೀ ಜಾಣ ಕಿವುಡು ಪ್ರದರ್ಶಿಸುತ್ತಿದ್ದ ಇಲಾಖಾಧಿಕಾರಿಗಳಿಗೆ ಕೋರ್ಟ್ ಆದೇಶದ ಚಾಟಿ ಬೀಸಿದ್ದರ ಪರಿಣಾಮ ಹೋಲ್ಡಿಂಗ್ಸ್ ತೆರವಿಗೆ ಮುಂದಾಗಿದ್ದಾರೆ.
ಪೊಲೀಸರ ಭದ್ರತೆ ಪಡೆದು ತೆರವು ಕಾರ್ಯಾಚರಣೆ
ಚಂದಾಪುರದಿಂದ ಆನೇಕಲ್ ವರೆಗೆ ಒಟ್ಟು 10 ರಿಂದ 12 ಬೃಹತ್ ಗಾತ್ರದ ಬೋರ್ಡ್ ಗಳು ನೆಳಕ್ಕುರುಳಿಸಿದ್ದಾರೆ.
ಹೋಲ್ಡಿಂಗ್ಸ್ ಪರ ಹೈಕೋರ್ಟ್ ಮೆಟ್ಟಿಲೇರಿದ್ದ ಜಾಹೀರಾತುದಾರರ ವಾದ ಆಲಿಸಿದ್ದ ಕೋರ್ಟ್ ಸಾರ್ವಜನಿಕರ ಪರ ಆದೇಶ ಹೊರಡಿಸಿದ್ದು ಸಂಚಾರಿಗಳ ಹಿತ ಎತ್ತಿ ಹಿಡಿದಿತ್ತು
ಉಳಿದಂತೆ ಸರ್ಜಾಪುರ ದೊಮ್ಮಸಂದ್ರ ಭಾಗದಲ್ಲೂ ಇಂತಹ ಕಾರ್ಯಾಚರಣೆಗೆ ಸಂಬಂದಪಟ್ಟ ಗ್ರಾಮ ಪಂಚಾಯಿತಿಗಳು ಮುಂದಾಗಿದ್ದು ಸಂಚಾರಿಗಳಿಗೆ ತಲೆ ನೋವಾಗಿದ್ದ ಹೋಲ್ಡಿಂಗ್ಸ್ ತೆರವಿನಿಂದ ಸಮಾಧಾನ ತಂದಿದೆ.
ರಸ್ತೆ ವಾಹನ ಸಂಚಾರಿಗಳು ಈ ಕಾರ್ಯಚರಣೆಗೆ ಸಾಥ್ ನೀಡಿದ್ದು ನಿಟ್ಟಿಸಿರು ಬಿಟ್ಟಿದ್ದಾರೆ.
