ಕದನ ವಿರಾಮ ಘೋಷಣೆಯ ನಂತರ ಪೂರ್ಣಗೊಂಡಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ – ಸಚಿವ ಕ್ರಷ್ಣ ಬೈರೇಗೌಡ
1 min read
ವಿಜಯಪುರ : ಯಾವ ಉದ್ದೇಶದಿಂದ ಕದನ ಆರಂಭ ಮಾಡಿದ್ದು ಆ ಉದ್ದೇಶ ಕದನ ವಿರಾಮ ಘೋಷಣೆಯ ನಂತರ ಪೂರ್ಣಗೊಂಡಿದೆಯಾ ಎನ್ನುವ ಪ್ರಕಾರ ಪ್ರಶ್ನೆಗೆ ಉತ್ತರ ಇನ್ನು ಸಿಕ್ಕಿಲ್ಲ ಎಂದು ಸಚಿವ ಕ್ರಷ್ಣ ಬೈರೇಗೌಡ ಕೇಂದ್ರ ಸರ್ಕಾರದ ವಿರುದ್ದ ವಾಕ್ದಾಳಿ ನಡೆಸಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು ಅವರು ನಮ್ಮ ಸರ್ಕಾರದಿಂದ ನಾವು ಕೇಂದ್ರ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಿದ್ದೆವೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಇನ್ನೂಮ್ಮೆ ಪಾಕಿಸ್ತಾನ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಹೇಳಿದರು.
ಆದರೆ ಯಾವ ಉದ್ದೇಶದಿಂದ ಕದನ ಆರಂಭ ಮಾಡಿದ್ದು ಅದು ಕದನ ವಿರಾಮದ ಘೋಷಣೆಯ ನಂತರ ಆ ಉದ್ದೇಶ ಪೂರ್ಣ ಆಗಿದೆಯಾ ಎನ್ನುವ ಪ್ರಶ್ನೆಗೆ ಉತ್ಯರ ಸಿಗದಾಗಿದೆ ಎಂದರು..ಇನ್ನು ಪಾಕಿಸ್ತಾನಕ್ಕೆ ಯಾವದೆ ಪಾಠ ಕಲಿಸದೆ ಇದ್ದರೆ ಅದು ಇನ್ನೂಮ್ಮೆ ಇಂತಹ ಸಾಹಸಕ್ಕೆ ಕೈ ಹಾಕುವದಕ್ಕೆ ಇಂಬು ಕೊಟ್ಟಂತೆ ಆಗಲಿಲ್ಲವೆ ಎನ್ನುವ ಅನುಮಾನ ಕಾಡುತ್ತಿದೆ ಎಂದರು..
