ಧಾರವಾಡದಲ್ಲಿ ಹಣ್ಣುಗಳ ರಾಜನೆಂದು ಕರೆಯುವ ಮಾವು ಹಣ್ಣಿನ ದರ್ಬಾರ್..
1 min read
ಧಾರವಾಡ : ಧಾರವಾಡದಲ್ಲಿ ಈಗೇನಿದ್ದರೂ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನ ದರ್ಬಾರ್ ಜೋರಾಗಿದೆ. ವಿವಿಧ ಬಗೆಯ ಮಾವಿನ ಹಣ್ಣುಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇದರ ಮಧ್ಯೆ ಧಾರವಾಡದ ತೋಟಗಾರಿಕಾ ಇಲಾಖೆಯು ಇಲಾಖೆಯ ಮಾವು ಮೇಳ ಹಮ್ಮಿಕೊಂಡಿದೆ.
ಧಾರವಾಡ ತೋಟಗಾರಿಕೆ ಇಲಾಖೆಯ ನೇತೃತ್ವದಲ್ಲಿ ಮಾವು ಮೇಳವನ್ನು ಇಲಾಖೆ ಆವರಣದಲ್ಲಿಯೇ ನಡೆಸಲಾಗುತ್ತಿದ್ದು, ಧಾರವಾಡ ಜಿಲ್ಲೆಯ ವಿವಿಧ ತಾಲೂಕಿನ ಮಾವು ಬೆಳೆಗಾರರು ತಾವು ಬೆಳೆದ ಮಾವಿನ ಹಣ್ಣನ್ನು ಇಲ್ಲಿ ಮಾರಾಟಕ್ಕೆ ತಂದಿದ್ದಾರೆ. ಮಾವು ಮೇಳಕ್ಕೆ ಆಪೂಸ್, ರಸಪೂರಿ, ನೀಲಂ, ಮಲಗೋವಾ, ಶುಗರ್ ಬೇಬಿ, ದಿಲಪಸಂದ್, ಕಿಶನ್ ಬಾಗ್, ತೋತಾಪುರಿ, ಸುಂದರಶಾ, ಪೈರಿ, ಸುವರ್ಣರೇಖಾ, ಸಿಂಧು ನಿರಂಜನ ಸೇರಿದಂತೆ ಅನೇಕ ತಳಿಯ ಮಾವಿನ ಹಣ್ಣು ಮತ್ತು ಉಪ್ಪಿನ ಕಾಯಿ ಹಾಕುವ ತಳಿಗಳು ಮಾವು ಮೇಳದಲ್ಲಿ ಮಾರಾಟಕ್ಕೆ ಬಂದಿದ್ದವು. ಇನ್ನೂ ಮಾವು ಮೇಳದಲ್ಲಿ ಸಾರ್ವಜನಿಕರು ಹಣ್ಣು ಖರೀದಿಯಲ್ಲಿ ಬ್ಯೂಸಿಯಾಗಿರುವ ದೃಶ್ಯ ಕಂಡುಬಂದವು.
