ಭಾರತ ಏಕಾಂಗಿಯಾಗಿ ನಿಲ್ಲುವಂತೆ ಮಾಡಿದೆ ಮೋದಿಯವರ ನೀತಿಗಳು-ಬಿಕೆ ಹರಿ ಪ್ರಸಾದ್
1 min read
ಬೆಂಗಳೂರು : ಪೆಹಲ್ಗಾಮ್ ಘಟನೆ ನಡೆದ ಬಳಿಕ ಹಲವು ಪ್ರಶ್ನೆಗಳಿಗೆ ಮೋದಿ ಉತ್ತರ ಕೊಡ್ತಾ ಇಲ್ಲ ಎಂದು ಬಿಕೆ ಹರಿ ಪ್ರಸಾದ್ ಹೇಳಿದರು.ನಗರದಲ್ಲಿ ಮಾತನಾಡಿದ ಅವರು ಸರ್ವ ಪಕ್ಷ ಸಭೆಗೆ ಮೋದಿ ಗೈರು ಹಾಜರಾಗ್ತಾರೆ, ಪಾಕಿಸ್ತಾನ ಉಗ್ರರ ತಾಣದ ಮೇಲೆ ದಾಳಿ ಮಾಡುವಾಗಲು ಮೋದಿ ಎಲ್ಲಿದ್ರು ಅಂತ ಯಾರಿಗೂ ಗೊತ್ತಿಲ್ಲ. ಡೊನಾಲ್ಟ್ ಟ್ರಂಪ್ ತಾನು ಕದನ ವಿರಾಮಕ್ಕೆ ತಾನೇ ಚಿತಾವಣೆ ಕೊಟ್ಟಿದ್ದೀನಿ ಅಂದಿದ್ದಾರೆ. ಭಾರತ ಯಾರ ಮುಂದೆ ಕೂಡ ಮೊದಲು ತಲೆ ತಗ್ಗಿಸಿರಲಿಲ್ಲ, ಭಾರತದ ಸಾರ್ವಭೌಮತೆಗೆ ಧಕ್ಕೆ ಆಗಿದೆ. ಪ್ರಧಾನಿ ತಮ್ಮ ಭಾಷಣಕ್ಕೂ ಮೊದಲು ಟ್ರಂಪ್ ಬೆದರಿಕೆ ಹಾಕಿದ ರೀತಿ ಇತ್ತು. ಎಲ್ಲ ವ್ಯಾಪಾರ ಸ್ಥಗಿತ ಮಾಡ್ತೀವಿ ಎಂದು ಟ್ರಂಪ್ ಬೆದರಿಕೆ ಹಾಕಿದಂತಿದೆ . ಭಾರತದ ಜನ ಮೋದಿ ಭಾಷಣದಲ್ಲಿ ಟ್ರಂಪ್ ಬಗ್ಗೆ ನಿಜಾನಾ ಸುಳ್ಳಾ ಎಂದು ಹೇಳ್ತಾರೆ ಎಂದುಕೊಂಡಿದ್ರು. ಅಸಲಿ ಯಾರೂ ನಕಲಿ ಯಾರು ಎಂದು ಭಾರತದ ಜನರಿಗೆ ಗೊತ್ತಾಗಬೇಕಿದೆ. ದೇಶದ ಗೌರವದ ಪ್ರಶ್ನೆ ಇದು ಎಂದು ಹೇಳಿದರು.
ಇಂದಿರಾಗಾಂಧಿ ಉಕ್ಕಿನ ಮಹಿಳೆ, ಅವರನ್ನು ನೆನಸಿಕೊಳ್ಳುವುದು ಸರಿಯಾಗಿದೆ. ಪಾಕಿಸ್ತಾನದ ಮೇಲೆ ಯುದ್ದ ಘೋಷಣೆ ಮೊದಲು ಇಂದಿರಾ ಗಾಂಧಿ ಎಲ್ಲ ಸ್ಥಿತಿ ಎಲ್ಲ ಒತ್ತಡ ಎದುರಿಸಿದ್ದರು. ಬಾಂಗ್ಲಾ ನರಮೇಧವನ್ನು ಇಂದಿರಾ ಗಾಂಧಿ ತಡೆದರು. ಇಂದಿರಾ ಗಾಂಧಿಯವರು ತೋರಿಸಿದ .೧% ಧೈರ್ಯವನ್ನೂ ಕೂಡ ಮೋದಿ ತೋರಿಸಿಲ್ಲ. ಈಗ ಉಗ್ರವಾದವನ್ನು ಹೊಡೆದು ಹಾಕಬೇಕು ಎಂದಾಗ ಯಾವ ನೆರೆ ದೇಶಗಳೂ ಕೂಡ ನಮ್ಮನ್ನು ಬೆಂಬಲಿಸಿಲ್ಲ. ವಿದೇಶಾಂಗ ನೀತಿಗಳು ಐಸೋಲೇಟ್ ಮಾಡಿವೆ ಭಾರತವನ್ನು ಭಾರತ ಏಕಾಂಗಿಯಾಗಿ ನಿಲ್ಲುವಂತೆ ಮಾಡಿದೆ ಮೋದಿಯವರ ನೀತಿಗಳು. ಅಮೇರಿಕದ ಅಧ್ಯಕ್ಷ ನಮಗೆ ಡಿಕ್ಟೇಟ್ ಮಾಡುವುದು ಬೇಕಿರಲಿಲ್ಲ. ಮೋದಿಯವರು ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಭಾಷಣ ಮಾಡಿದ್ದಾರೆ ಎಂದು ಹೇಳಿದರು.
