ಮಂಗಳವಾರ ರಾಶಿ ಭವಿಷ್ಯ-ಮೇ,13,2025
1 min read
ಮೇಷ ರಾಶಿ
ಕೆಲಸ ಕಾರ್ಯಗಳು ವಿಳಂಬ ಆಗಲು ನಿಮ್ಮ ಬೇಜವಾಬ್ದಾರಿ ಕಾರಣವಾಗುತ್ತೆ
ಅಲಂಕಾರಿಕ ವಸ್ತುಗಳಿಗೆ ಖರ್ಚು ಮಾಡುತ್ತೀರಿ
ಇಂದು ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ
ಮಿಶ್ರಫಲವಿರುವ ಈ ದಿನ ಅಷ್ಟೊಂದು ಚೆನ್ನಾಗಿಲ್ಲ
ತಂದೆಯವರಿಂದ ನಿಂದನೆಗೆ ಒಳಗಾಗುತ್ತೀರಿ
ತಪ್ಪು ನಿರ್ಧಾರಗಳು ತೆಗೆದುಕೊಳ್ಳಬೇಡಿ
ಕುಲದೇವತಾ ಆರಾಧನೆ ಮಾಡಬೇಕು
ವೃಷಭ ರಾಶಿ
ವ್ಯಾವಹಾರಿಕವಾಗಿ ಇಂದು ಲಾಭವಿದೆ
ಶತ್ರುಭಾದೆ ದೂರ ಆಗುತ್ತದೆ
ಬೇರೆಯವರ ಕೆಟ್ಟ ದೃಷ್ಟಿಯಿಂದ ಬೇಸರವಾಗುತ್ತದೆ
ಕುಟುಂಬದವರೇ ಆ ರೀತಿ ಯೋಚನೆ ಮಾಡುತ್ತಾರೆ
ಮುಖ್ಯವಾದ ಕೆಲಸದಲ್ಲಿ ಪ್ರಗತಿಯಿದೆ
ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಮಿಥುನ ರಾಶಿ
ಉದ್ಯೋಗದಲ್ಲಿ ಬಡ್ತಿ ಸಿಗಲಿದೆ
ಉತ್ತಮವಾದ ಸ್ಥಾನಮಾನ ದೊರೆಯುತ್ತದೆ
ಗೌರವ ಮತ್ತು ಪ್ರಶಸ್ತಿಗಳಿಗೆ ಅವಕಾಶವಿರುತ್ತದೆ
ಶರೀರದಲ್ಲಿ ಆಲಸ್ಯ ಉಂಟಾಗಬಹುದು
ಪರಸ್ಥಳ ವಾಸ ಸಂಭವವಿದೆ
ಮನೆಯಲ್ಲಿ ಹೊಂದಾಣಿಕೆ ಇರಬೇಕು
ಗಣಪತಿಯನ್ನು ಪ್ರಾರ್ಥನೆ ಮಾಡಬೇಕು
ಕಟಕ ರಾಶಿ
ಅನಿರೀಕ್ಷಿತವಾದ ಖರ್ಚು ಆಗಲಿದೆ
ಮಾನಸಿಕ ಒತ್ತಡ ಇರಬಹುದು
ಆಕಸ್ಮಿಕ ದುಃಖ ಉಂಟಾಗಬಹುದು
ವೈಯಕ್ತಿಕವಾದ ವಿಚಾರದಲ್ಲಿ ಹಿನ್ನಡೆಯಾಗಬಹುದು
ಮನೆಯಲ್ಲಿ ಹೊಂದಾಣಿಕೆಯ ಕೊರತೆ ಕಾಣಬಹುದು
ತಂದೆ ಮಕ್ಕಳ ವಾಗ್ವಾದ ತಾರಕಕ್ಕೇರಬಹುದು
ದುರ್ಗಾರಾಧನೆ ಮಾಡಬೇಕು
ಸಿಂಹ ರಾಶಿ
ಮಾತುಗಳಿಂದ ಸ್ನೇಹಿತರ ಮಧ್ಯೆ ಬಿರುಕು ಉಂಟಾಗಬಹುದು
ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ
ಸರ್ಕಾರಿ ಅಧಿಕಾರಿಗಳಿಗೆ ದೊಡ್ಡ ತೊಂದರೆಯಾಗಬಹುದು
ರಾಜಕಾರಣಿಗಳಿಗೆ ಉತ್ತಮವಾದ ದಿನ
ಮಾತೆಯರಿಗೆ ವಸ್ತ್ರಾಭರಣ ಪ್ರಾಪ್ತಿ
ತಂದೆಯವರ ವ್ಯವಹಾರದಲ್ಲಿ ಪ್ರಗತಿಯಿಂದ ಸಂತಸ
ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಕನ್ಯಾ ರಾಶಿ
ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ
ಬೇರೆಯವರಲ್ಲಿ ವಿಶ್ವಾಸವಿರಿಸಿಕೊಳ್ಳಿ
ಮಾನಸಿಕವಾದ ನೆಮ್ಮದಿ ಕಡಿಮೆ
ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಬೇಕು
ನಿಮ್ಮ ಯಾವುದೇ ರೀತಿಯ ನೋವು ಬೇರೆಯವರಿಗೆ ಗೊತ್ತಾಗೋದು ಬೇಡ
ಮಕ್ಕಳಿಂದ ಬಹಳ ಹಿಂಸೆ ಪಡುತ್ತೀರಿ
ಈಶ್ವರನ ಆರಾಧನೆ ಮಾಡಬೇಕು
ತುಲಾ ರಾಶಿ
ಮಾತಿನಿಂದ ಹಲವಾರು ಜನ ಆಕರ್ಷಿತರಾಗುತ್ತಾರೆ
ಬೇರೆಯವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ
ತಾಯಿಯವರಿಗೆ ತೊಂದರೆಯಾಗಬಹುದು
ದಂಪತಿಗಳಲ್ಲಿ ಹೊಂದಾಣಿಕೆ ಇರಲಿ
ವಾಹನ ವಿಚಾರವಾಗಿ ಚರ್ಚೆ ನಡೆಯಲಿದೆ
ಇಂದು ಕಾರ್ಯ ನಿಮಿತ್ತ ಓಡಾಟವನ್ನು ಮಾಡಬೇಕಾಗತ್ತೆ
ಶರಭೇಶ್ವರನನ್ನು ಪ್ರಾರ್ಥನೆ ಮಾಡಬೇಕು
ವೃಶ್ಚಿಕ ರಾಶಿ
ಆಸ್ತಿ ವಿಚಾರಕ್ಕೆ ಕಲಹ ಆಗಬಹುದು
ನಿಮ್ಮ ಸ್ವಭಾವ ತಿದ್ದಬೇಕು ಅಂದರೆ ಬಹಳ ಕಷ್ಟ ಆಗಲಿದೆ
ವಿವಾಹ ವಿಚಾರದಲ್ಲಿ ಮರೀಚಿಕೆಯಾಗಬಹುದು
ಉದ್ಯೋಗ, ವಿದ್ಯೆ ಇದು ಯಾವುದು ಪ್ರಯೋಜನವಿಲ್ಲ
ಆದಾಯವಿಲ್ಲ ಸಣ್ಣ ಪುಟ್ಟ ಖರ್ಚಿಗೂ ಕೂಡ ಕೈ ಚಾಚಿ ನಿಲ್ಲುವ ಸ್ಥಿತಿ
ಮಹಿಳೆಯರು ಉದ್ಯೋಗದಲ್ಲಿದ್ದರೆ ಅವರಿಗೆ ಬಡ್ತಿ ಇದೆ
ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಬೇಕು
ಧನಸ್ಸು ರಾಶಿ
ದ್ರವ್ಯ ಲಾಭದ ಸೂಚನೆ ಇದೆ
ಕಾರ್ಯದಲ್ಲಿ ವಿಳಂಬ ಆಗಬಹುದು
ರೋಗಬಾಧೆ ಕಾಡಬಹುದು
ಪ್ರಿಯ ಜನರು ದೂರವಾಗುತ್ತಾರೆ
ಸ್ತ್ರೀಯರಿಗೆ ಸ್ವಲ್ಪ ಸಮಸ್ಯೆ ಇರಲಿದೆ
ಮನೆಯಲ್ಲಿ ಹೊಂದಾಣಿಕೆ ಇರಬೇಕು ತಾಳ್ಮೆಗೆಡಬಾರದು
ಸಾಯಿಬಾಬರನ್ನು ಪ್ರಾರ್ಥನೆ ಮಾಡಬೇಕು
ಮಕರ ರಾಶಿ
ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುತ್ತೀರಿ
ಕೋರ್ಟು ವ್ಯವಹಾರದಲ್ಲಿ ಅಪಜಯ
ನೆಮ್ಮದಿ ಇಲ್ಲದ ಜೀವನ ಮಾಡುತ್ತೀರಿ
ಅನಾರೋಗ್ಯದಿಂದ ಬೇಸರ ಉಂಟಾಗಬಹುದು
ಮಗ ಅಥವಾ ಮಗಳಿಂದ ತೊಂದರೆ ಆಗಬಹುದು
ಸತಿ ಪತಿ ಕಲಹ ಮಿತಿ ಮೀರಬಹುದು
ನವಗ್ರಹರನ್ನು ಆರಾಧನೆ ಮಾಡಬೇಕು
ಕುಂಭ ರಾಶಿ
ಸಂಪಾದನೆಗೆ ಹಲವಾರು ಮಾರ್ಗವಿದೆ
ನಿಮ್ಮ ಜಾಣ್ಮೆ ಕೆಲಸ ಮಾಡಬೇಕು
ವಿಪರೀತವಾದ ಖರ್ಚಿದೆ ಆಲೋಚನೆಯನ್ನು ಮಾಡಿ
ವಿಷಾಹಾರದ ಭೀತಿ ಕಾಡಬಹುದು
ಕುಟುಂಬದ ಸೌಖ್ಯವಿಲ್ಲ
ದೇವತಾ ಕಾರ್ಯಕ್ಕೆ ವಿಘ್ನ ಆಗಬಹುದು
ಪ್ರಯಾಣದಿಂದ ಆಪತ್ತಿದೆ ಎಚ್ಚರಿಕೆ ಇರಲಿ
ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು
ಮೀನ ರಾಶಿ
ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು
ಲೆಕ್ಕಾಚಾರದ ವ್ಯವಹಾರ ಒಳ್ಳೆಯದು ಆದರೆ ಸಂಸಾರವಲ್ಲ
ಸ್ವಂತ ಪರಿಶ್ರಮದಿಂದ ಸಂಪಾದನೆ ಆಗಲಿದೆ
ಗುರು ಹಿರಿಯರನ್ನು ಸಂದರ್ಶಿಸಿ ಶುಭವಿದೆ
ಉತ್ತಮವಾದ ಗೌರವ ಪಡೆಯಲು ಅವಕಾಶವಿದೆ
ಚಿಕ್ಕವರಿಂದ ಬುದ್ಧಿ ಹೇಳಿಸಿಕೊಳ್ಳುವಂತಹ ಪರಿಸ್ಥಿತಿ ಬರಬಹುದು
ಋಣಮೋಚನ ಮಂಗಳ ಸ್ತೋತ್ರವನ್ನು ಶ್ರವಣ ಮಾಡಬೆಕು
