ನಮ್ಮ ದೇಶದಲ್ಲಿ ಸಿನಿಮಾ ಆಗುತ್ತಾ ಆಪರೇಷನ್ ಸಿಂಧೂರ? ಒಂದೊಳ್ಳೆ ರೋಚಕ ಕಥೆ

1 min read
Share it

ಜಸ್ಟ್ 23 ನಿಮಿಷದಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಏಕಕಾಲಕ್ಕೆ ಧ್ವಂಸ ಮಾಡಿರೋ ಕಾರ್ಯಾಚರಣೆ ಮೈ ಜುಮ್ಮೆನ್ನುತ್ತಿದೆ.  ಭಾರತೀಯ ಸೇನೆಯ ಈ ಯಶಸ್ವಿ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಅನ್ನೋ ಹೆಸರಿಟ್ಟಿರೋದೇ ವಿಶೇಷವಾಗಿದೆ. ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ.

 

ಆಪರೇಷನ್ ಸಿಂಧೂರ ಪಹಲ್ಗಾಮ್‌ನಲ್ಲಿ ಸಿಂಧೂರ ಅಳಿಸಿದ ಉಗ್ರರ ಸಂಹಾರದ ಪ್ರತೀಕವಾಗಿದೆ. ಕಣ್ಣ ಮುಂದೆಯೇ ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ನ್ಯಾಯ ನೀಡುವ ಭಾರತದ ಹೋರಾಟವಾಗಿದೆ. ಭಯೋತ್ಪಾದಕರ ಬುಡಕ್ಕೆ ಬೆಂಕಿ ಇಟ್ಟಿರುವ ಅಪರೇಷನ್ ಸಿಂಧೂರ ಭಾರತದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯೋದರಲ್ಲೂ ಅನುಮಾನವೇ ಇಲ್ಲ, ಆಪರೇಷನ್ ಸಿಂಧೂರದ ಬಗ್ಗೆ ಎಲ್ಲೆಲ್ಲೂ ಚರ್ಚೆಯಾಗುತ್ತಿರುವಾಗಲೇ ಆಪರೇಷನ್ ಸಿಂಧೂರ ಸಿನಿಮಾ ಆಗುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.

 

ಇಂದು ನಿಜಕ್ಕೂ ರೋಮಾಂಚನವಾಗುತ್ತಿದೆ. ಭಯೋತ್ಪಾದಕರು ಸತ್ತಿದ್ರೆ, ನಿಜಕ್ಕೂ ಖುಷಿಯ ವಿಚಾರ ಇಂತಹದೊಂದು ಪ್ರತೀಕಾರದ ದಾಳಿಯನ್ನ ನಾವು ಎದುರು ನೋಡುತ್ತಾ ಇದ್ವಿ.  ಉಗ್ರರಿಗೆ ಭಾರತೀಯ ಸೇನೆ ತಕ್ಕ ಉತ್ತರ ಕೊಟ್ಟಿದೆ ಎಂದು ನಮ್ಮ C24Kannada ವಾಹಿನಿಯ ಅನಿಸಿಕೆಯಾಗಿದೆ. ಆಪರೇಷನ್ ಸಿಂಧೂರ ಹೆಸರಲ್ಲೇ ಒಂದು ಎಮೋಷನ್ ಇದೆ. ಸಿನಿಮಾ ಮಾಡೋಕೆ ನಿಜಕ್ಕೂ ಒಂದೊಳ್ಳೆ ಘಟನೆ ಇದು‌.  ಯಾರಾದ್ರೂ ಈ ಸಿನಿಮಾ ಮಾಡೋರಿಗೆ ಒಳ್ಳೆಯದಾಗಲಿ

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?