ಕಾಂಗ್ರೆಸ್ ಒಂದು ಟ್ವಿಟ್ ಮಾಡಿದೆ ಶಾಂತಿಯ ಬಗ್ಗೆ ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು-ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
1 min read
ಪೆಹಲ್ಗಾಮ್ ನಲ್ಲಿ 28 ಜನರ ಬಲಿದಾನ ಆಗಿತ್ತು ಎಂದು ಆಪರೇಷನ್ ಸಿಂಧೂರ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯಿಸಿದರು. ಉಗ್ರಗಾಮಿ ಗಳ ಅಟ್ಟಹಾಸಕ್ಕೆ ಭಾರತೀಯರು ಪ್ರಾಣ ಕಳೆದುಕೊಂಡಿದ್ರು.. ತದ ನಂತರ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.. ಘಟನೆ ಬಳಿಕ ಒಂದು ಪ್ರತಿಕಾರ ತೆಗೆದುಕೊಳ್ಳಬೇಕು.. ಉಗ್ರಗಾಮಿ ಗಳ ಪಾಕಿಸ್ತಾನಕ್ಕೂ ಬುದ್ದಿ ಕಲಿಸಬೇಕಿತ್ತು ಎಂಬ ಅಪೇಕ್ಚೆ ಇತ್ತು.. ಅದಕ್ಕೆ ಪೂರಕವಾಗಿ ಪ್ರಧಾನಿಗಳು ಹಲವು ಬಾರಿ ಹೇಳಿದ್ರು. ತಕ್ಕ ಶಾಸ್ತ್ಯ ಮಾಡುವ ಬಗ್ಗೆ ಹೇಳಿದ್ರು. ನಿನ್ನೆ ಮಧ್ಯ ರಾತ್ರಿ ಉಗ್ರಗಾಮಿ ಗಳ ತಾಣದ ಮೇಲೆ ಕಾರ್ಯಾಚರಣೆ ನಡೀತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರು ಸಂಭ್ರಮ ಪಡುತ್ತಿದ್ದಾರೆ. ನಾವು ಕೂಡ ಭಾರತಿಯ ಸೇನೆಯ ಜೊತೆ ನಿಲ್ಲಬೇಕು, ಹಾಗೂ ದೇವಸ್ಥಾನ ಗಳಲ್ಲಿ ನಮ್ಮ ಕಾರ್ಯಕರ್ತರು ಪೂಜೆ ಮಾಡಬೇಕು, ಇದರ ಸಂದರ್ಭದಲ್ಲಿ ಕಾಂಗ್ರೆಸ್ ಒಂದು ಟ್ವಿಟ್ ಮಾಡಿದೆ ಶಾಂತಿಯ ಬಗ್ಗೆ ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು..
ಇದರ ಬಗ್ಗೆ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ತಮ್ಮ ನಿಲುವು ಸ್ಪಷ್ಟ ಪಡಿಸಬೇಕು, ಭಾರತೀಯರ ಪರ ಇದ್ದಾರಾ ಅಥವಾ ಉಗ್ರಗಾಮಿ ಗಳ ಪರ ಇದ್ದಾರಾ ಸ್ಪಷ್ಟ ಪಡಿಸಬೇಕು, ತತಕ್ಷಣ ಈ ರಾಜ್ಯದ ಜನರಲ್ಲಿ ಕ್ಷಮೆ ಕೋರಬೇಕೆಂದು ಆಗ್ರಹ, ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ದ ನಡೀತ್ತಿರುವಾಗ ನಾವೆಲ್ಲರೂ ಒಂದಾಗಿ ನಿಲ್ಲಬೇಕು, ಅದಕ್ಕಾಗಿ ಇವತ್ತು ಕೋಲಾರ ಜನಾಕ್ರೋಶ ಯಾತ್ರೆ ಗೆ ತೆರಳುತ್ತಿದ್ದೇವೆ, ನಾಳೆಯಿಂದ ನಡೆಯಬೇಕಿದ್ದ ಜನಾಕ್ರೋಶ ಯಾತ್ರೆ ತಾತ್ಕಾಲಿಕ ವಾಗಿ ಮುಂದೂಡಿಕೆ ಮಾಡ್ತಿದ್ದೇವೆ ಎಂದರು.
ಮಾಕ್ ಡ್ರಿಲ್ ವಿಚಾರವಾಗಿ ಮಾತನಾಡಿದ ಅವರು ಬಹಳ ವರ್ಷಗಳ ಬಳಿಕ ಈ ಪರಿಸ್ಥಿತಿ ನಿರ್ಮಾಣ ಆಗಿದೆ..ಇವಾಗ್ಲಾದ್ರು ಪಾಕಿಸ್ತಾನ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದು ಕೊಳ್ಳಬೇಕು. ಯುದ್ದ ಆದರೂ ಪರವಾಗಿಲ್ಲ ಎಂಬ ಭಾವನೆ ಭಾರತಿಯರದ್ದು, ಮಾಕ್ ಡ್ರಿಲ್ ಸಹಜ, ಯುದ್ದದ ಸಂದರ್ಭದಲ್ಲಿ ನಾವೆಲ್ಲರೂ ಎಚ್ಚರಿಕೆ ಯಿಂದ ಇರಬೇಕು. ಇದಕ್ಕೆ ಎಲ್ಲರು ಸಹಕಾರ ಕೊಡ್ತಾರೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
