ಯುದ್ಧಕ್ಕೆ ನಾವೆಲ್ಲರೂ ಸನ್ನದವಾಗಿದ್ದೇವೆ, ನಮ್ಮ ದೇಶದ ಮೇಲೆ ಕೆಂಗಣ್ಣು ತೆಗೆದ್ರೆ, ಅದನ್ನು ನಾವು ಸಹಿಸುವುದಿಲ್ಲ-ಸಚಿವ ಎಚ್ ಕೆ ಪಾಟೀಲ್
1 min read
ಗದಗ : ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಹಿನ್ನೆಲೆ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಸಿದರು. ಗದಗನಲ್ಲಿ ಮಾತನಾಡಿದ ಅವರು ಮಾಕ್ ಡ್ರೀಲ್ ಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಅನಿವಾರ್ಯ, ಭಾರತ್ ಸಿದ್ದತೆ ಮಾಡಿಕೊಳ್ತಾಯಿದೆ, ಯುದ್ಧಕ್ಕೆ ನಾವೆಲ್ಲರೂ ಸನ್ನದವಾಗಿದ್ದೇವೆ, ನಮ್ಮ ದೇಶದ ಮೇಲೆ ಕೆಂಗಣ್ಣು ತೆಗೆದ್ರೆ, ಅದನ್ನು ನಾವು ಸಹಿಸೂದಿಲ್ಲ, ತಕ್ಕ ಉತ್ತರವನ್ನು ಪಾಕಿಸ್ತಾನಕ್ಕೆ ಮಾಡುತ್ತೇವೆ ಎನ್ನುವ ಸಂದೇಶ ಕಳಿಸಿದ್ದೇವೆ. ದೇಶ ಒಂದಾಗಿದೆ, ಒಗ್ಗಟಿನಿಂದ ಪಾಕಿಸ್ತಾನಕ್ಕೆ ಬುದ್ದಿ ಕಲಿಸೋಣ, ಜಗತ್ತಿನಲ್ಲಿ ಭಾರತದತಂಹ ಶಿಸ್ತು ಹಾಗೂ ಸೌಹಾರ್ದಮಯ ದೇಶ ಇಲ್ಲ ಎನ್ನುವ ಕೀರ್ತಿ ಪತಾಕೆ ಹಾರಿಸಬೇಕು. ಈ ಹಿಂದೆ ಬಾಂಗ್ಲಾದೇಶ ಪ್ರತ್ಯೇಕಗೊಳಿಸುವ ವೇಳೆ ಸನ್ನಿವೇಶ, ಆಗ ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಯಾವ ರೀತಿ ವಾತಾವರಣ ಸೃಷ್ಟಿಯಾಗಿತ್ತೋ, ಅದೇ ರೀತಿ ವಾತಾವರಣ ಈವಾಗ ಸೃಷ್ಟಿ ಆಗುತ್ತೇ ಎಂದು ಹೇಳಿದರು .
ಯುದ್ಧ ಪ್ರಾರಂಭವಾಗಲಿ ಪ್ರಾರಂಭವಾಗದೆ ಇರಲಿ, ಇಂತಹ ಸಂದರ್ಭದಲ್ಲಿ ನಾವೆಲ್ಲರೂ ದೇಶದ ಧ್ವನಿಯಾಗಿ, ಒಂದಾಗಿ ಮಾತನಾಡುತ್ತಿದ್ದೇವೆ, ದೇಶದ ಪ್ರಶ್ನೇ ಬಂದಾಗ 140 ಕೋಟಿ ಜನ ನಾವು ಒಂದಾಗಿದ್ದೇವೆ ಎನ್ನುವ ಸಂದೇಶವನ್ನು ಈಗಾಲೇ ರಮಾನಿಸಿದ್ದೇವೆ. ಪಾಕಿಸ್ತಾನಕ್ಕೆ ಸರಿಯಾದ ಬುದ್ದಿಯನ್ನು ಕಲಿಸುತ್ತೇವೆ. ಜಗತ್ತಿನಲ್ಲಿ ಭಾರತದಂತಹ ಒಗ್ಗಟಿನ ದೇಶ ಇನ್ನೊಂದು ಇಲ್ಲ ಎಂದು ಮತ್ತೊಮ್ಮೆ ಸಾಬೀತು ಮಾಡಲು ಕಾಲ ಸನ್ನಿಧಿಯಲ್ಲಿದೆ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
