ಬೆಸ್ಕಾಂ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿ
1 min read
ತುಮಕೂರು : ಬೆಸ್ಕಾಂ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಗೋರಘಟ್ಟ ಗ್ರಾಮದಲ್ಲಿ ನಡೆದಿದೆ. ಚಂದ್ರಯ್ಯ ಎಂಬುವರ ಮಗ ಪೋಷಕ ಶೆಟ್ಟಿ(5) ಮೃತ ಬಾಲಕನಾಗಿದ್ದು, ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ವಿದ್ಯುತ್ ತಂತಿ ತುಂಡಾಗಿ ಮನೆ ಮುಂದಿನ ತಂತಿ ಬೇಲಿ ಮೇಲೆ ಬಿದ್ದಿತ್ತು..ಆಟವಾಡುತ್ತಿದ್ದ ಮಗು ತಂತಿಬೇಲಿ ಮುಟ್ಟಿದ್ದರಿಂದ ವಿದ್ಯುತ್ ಪ್ರವಹಿಸಿ ಸಾವನಪ್ಪಿದ್ದಾನೆ. ವಿದ್ಯುತ್ ಸ್ಥಗಿತಗೊಳಿಸದೇ ಇರುವುದೇ ಘಟನೆಗೆ ಕಾರಣ ಎಂದು ಗ್ರಾಮಸ್ಥರ ಆಕ್ರೋಶಗೊಂಡರು. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಗ್ರಾಮಸ್ಥರ ಹಿಡಿಶಾಪ ಹಾಕುತ್ತಿದ್ದಾರೆ. ದಂಡಿನ ಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
