ಭಾರತದಿಂದ ಯುದ್ಧ ತಾಲೀಮು..ದೇಶಾದ್ಯಂತ ​​ನಾಳೆ 244 ಜಿಲ್ಲೆಗಳಲ್ಲಿ ಮಾಕ್​ ಡ್ರಿಲ್​ ನಡೆಸಲು ಕೇಂದ್ರ ಸೂಚನೆ

1 min read
Share it

ಭಾರತ-ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ದಟ್ಟವಾಗಿ ಆವರಿಸ್ತಿದೆ. ಉಗ್ರರು ಪಹಲ್ಗಾಮ್​ನಲ್ಲಿ 26 ಹಿಂದೂಗಳ ನರಮೇಧ ಮಾಡ್ತಿದ್ದಂತೆ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಸತತ 11ನೇ ರಾತ್ರಿಯೂ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸ್ಟೇಷನ್​ಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ಕೂಡ ನಡೆಸಿದೆ. ಈಗ ಮತ್ತೊಂದು ಲೆವೆಲ್​ಗೆ ಪ್ರತೀಕಾರವನ್ನು ಕೊಂಡೊಯ್ಯಲು ಭಾರತ ಸರ್ಕಾರ ಮುಂದಾಗಿದೆ.  ನಾಳೆ ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ನಾಗರಿಕರ ರಕ್ಷಣೆ ಸಂಬಂಧ ನಾಳೆ ದೇಶಾದ್ಯಂತ ಮಾಕ್​ ಡ್ರಿಲ್​ ಅಂದ್ರೆ ಅಣಕು ಪ್ರದರ್ಶನ ಮಾಡಿಸಲು ಸೂಚಿಸಿದೆ.

 

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕರಿಛಾಯೆ ಜೋರಾಗ್ತಿದೆ. ಹೀಗಾಗಿ ಮೊನ್ನೆ ಪಂಜಾಬ್​ ಗಡಿಯಲ್ಲಿ ಸೇನೆ ಮಾಕ್​ ಡ್ರಿಲ್ ಮಾಡಿದಂತೆ ದೇಶಾದ್ಯಂತ ಮಾಕ್​ ಡ್ರಿಲ್​​ ಮಾಡಲು ಸರ್ಕಾರ ಆಜ್ಞೆ ಹೊರಡಿಸಿದೆ. ಜಿಲ್ಲೆಗಳಿಂದ ಹಳ್ಳಿವರೆಗೂ ಈ ಕವಾಯತು ನಡೆಸಲು ಸೂಚಿಸಲಾಗಿದೆ. ಇದರ ಜೊತೆಗೆ ಸೇನೆಗೆ ಕಡಲಾಳದಲ್ಲಿನ ವೈರಿಗಳನ್ನು ಹೊಡೆದುರುಳಿಸುವ ರಣಧೀರನ ಎಂಟ್ರಿಯಾಗಿದೆ.ಪಹಲ್ಗಾಮ್‌ನಲ್ಲಿ ನರಮೇಧದ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ನಾಳೆ ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ನಾಗರಿಕರ ರಕ್ಷಣೆ ಸಂಬಂಧ ನಾಳೆ ದೇಶಾದ್ಯಂತ ಮಾಕ್​ ಡ್ರಿಲ್​ ಅಂದ್ರೆ ಅಣಕು ಪ್ರದರ್ಶನ ಮಾಡಿಸಲು ಸೂಚಿಸಿದೆ. ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್‌ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚಿಸಿದೆ. ದೇಶದ 244 ವರ್ಗೀಕೃತ ಜಿಲ್ಲೆಗಳಿಂದ ಗ್ರಾಮ ಮಟ್ಟದವರೆಗೂ ಮಾಕ್​ ಡ್ರಿಲ್​​ ಆಯೋಜಿಸಲು ಕೇಂದ್ರ ಆಜ್ಞೆ ಹೊರಡಿಸಿದೆ. ಗೃಹ ರಕ್ಷಕ ದಳ, NCC, NSS ವಿದ್ಯಾರ್ಥಿಗಳು ಭಾಗವಹಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆ ನಾಳೆ ಎಲ್ಲಾ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸುವ ರಕ್ಷಣಾ ಕಾರ್ಯದ ಮಾಕ್​ ಡ್ರಿಲ್ ನಡೆಯಲಿದೆ.

 

ಇನ್ನು ಮಾಕ್‌ ಡ್ರಿಲ್ ಘೋಷಣೆ ಬಳಿಕ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮತ್ತೊಂದು ಸಂದೇಶ ರವಾನಿಸಿದೆ. DRDO ಮತ್ತು ನೌಕಾ ಸೇನೆಯಿಂದ ಯಶಸ್ವಿ MIGM ಪರೀಕ್ಷೆ ನಡೆಸಲಾಗಿದೆ. ಅಂದ್ರೆ ಸಮುದ್ರದಲ್ಲಿ ಮಲ್ಟಿ ಇನ್‌ಫ್ಲುಯೆನ್ಸ್‌ ಗ್ರೌಂಡ್ ಮೈನ್ ಟೆಸ್ಟ್ ನಡೆಸಿದೆ. ಶತ್ರುವಿನ ಹಡಗು, ಸಬ್‌ಮರಿನ್ ಪತ್ತೆ ಹಚ್ಚೋ ಸಾಮರ್ಥ್ಯವನ್ನು ಇದು ಹೊಂದಿದ್ದಲ್ಲದೇ ಸಮುದ್ರದಾಳದಲ್ಲಿಯೇ ಶತ್ರುವನ್ನ ಹೊಡೆದುರುಳಿಸುತ್ತೆ. ಕೆಲವೇ ದಿನಗಳಲ್ಲಿ ನೌಕಾಸೇನೆಗೆ MIGM ಸೇರ್ಪಡೆಯಾಗಲಿದೆ.

 

ವಾಯು ದಾಳಿ ಎಚ್ಚರಿಕೆ ವ್ಯವಸ್ಥೆಗಳ ಪರಿಣಾಮಕಾರಿ ಮಾಹಿತಿ ನೀಡಲಿದೆ

 ವಾಯು ಪಡೆ ಜೊತೆ ಹಾಟ್‌ಲೈನ್/ರೇಡಿಯೋ ಸಂವಹನ ಕಾರ್ಯಾಚರಣೆ

 ನಿಯಂತ್ರಣ ಕೊಠಡಿಗಳ ಕಾರ್ಯವನ್ನು ಪರೀಕ್ಷಿಸಲು ಮಾಕ್​ ಡ್ರಿಲ್​​ ಅಗತ್ಯ

ಪ್ರತಿಕೂಲ ದಾಳಿ ಸಮಯ ತಮ್ಮನ್ನು ರಕ್ಷಿಸಿಕೊಳ್ಳಲು ಮಾಕ್​​​​ ಡ್ರಿಲ್​​ ಪಾಠ

 ನಾಗರಿಕ ರಕ್ಷಣಾ ಅಂಶಗಳ ಬಗ್ಗೆ ನಾಗರಿಕರು, ವಿದ್ಯಾರ್ಥಿಗಳಿಗೆ ತರಬೇತಿ

ಅಪಘಾತದ ಬ್ಲ್ಯಾಕ್ ಔಟ್ ಕ್ರಮಗಳು ಬಗ್ಗೆ ಮಾಹಿತಿ ಒದಗಿಸುವ ಡ್ರಿಲ್​​​

 ಪ್ರಮುಖ ಸ್ಥಾವರಗಳನ್ನ ಮರೆ ಮಾಚುವ ಅವಶ್ಯಕತೆಯ ಕಾರಣಕ್ಕೆ ಡ್ರಿಲ್​​

 ನಾಗರಿಕ ರಕ್ಷಣಾ ಸೇವೆಗಳ ಸಕ್ರಿಯಗೊಳಿಸುವಿಕೆ, ಪ್ರತಿಕ್ರಿಯೆ ಪರಿಶೀಲನೆ

 ಸೇವೆಗಳು, ಅಗ್ನಿಶಾಮಕ ದಳ, ರಕ್ಷಣಾ ಕಾರ್ಯಾಚರಣೆಗಳ ಅಧ್ಯಯನ

ಸ್ಥಳಾಂತರ ಯೋಜನೆ ಸಿದ್ಧತೆ, ಕಾರ್ಯಗತಗೊಳಿಸುವಿಕೆ ಮೌಲ್ಯಮಾಪನ

 

ಒಟ್ಟಾರೆ ರಾಷ್ಟ್ರವ್ಯಾಪಿ ಸ್ಥಳೀಯ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ನಾಗರಿಕ ರಕ್ಷಣಾ ಸಿಬ್ಬಂದಿಯಿಂದ ಸಂಘಟಿತ ಭಾಗವಹಿಸುವಿಕೆಯ ಮಹತ್ವವನ್ನು ಗೃಹ ಸಚಿವಾಲಯ ಒತ್ತಿ ಹೇಳಿದೆ. ಕೇಂದ್ರ ಸರ್ಕಾರದ ಈ ಆದೇಶ ಸದ್ಯ ಭಾರೀ ಮಹತ್ವ ಪಡೆದಿದೆ. ಈ ಹಿಂದೆ ಇದೇ ರೀತಿಯ ಮಾಕ್​ ಡ್ರಿಲ್​ನ್ನು 1971ರಲ್ಲಿ ನಡೆಸಲಾಗಿತ್ತು. ಆಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿತ್ತು. ಈಗ ಭಾರತ ಮತ್ತೆ ಮಾಕ್​ ಡ್ರಿಲ್​ಗೆ ಆದೇಶಿಸಿದ್ದು ಕುತೂಹಲ ಕೆರಳಿಸಿದೆ.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?