ಮಂಗಳೂರು ಹತ್ಯೆ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಹಲ್ಲೆಯ ವಿಡಿಯೋ ವೈರಲ್
1 min read
ಬಾಗಲಕೋಟೆ : ಮಂಗಳೂರು ಹತ್ಯೆ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಉಸ್ತುವಾರಿ ಸಚಿವ ತಿಮ್ಮಾಪೂರ ಕ್ಷೇತ್ರದಲ್ಲೇ ಹಾಡು ಹಗಲೇ ರೌಡಿಸಂ ನಡೆಸುತ್ತಿದ್ದಾರೆ. ಬೈಕ್‌ಗೆ ಪೆಟ್ರೋಲ್ ಹಾಕುವ ವಿಚಾರಕ್ಕೆ ಪೆಟ್ರೋಲ್ ಪಂಪ್ ಕೆಲಸಗಾರರ ಮೇಲೆ ಅನ್ಯ ಕೋಮಿನ ಯುವಕರಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಜೈ ಮಲ್ಹಾರ್ ಹೆಚ್‌ಪಿ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ. ಮೊದಲಿಗೆ ಸೇಲ್ಸ್‌ಮನ್ ಮಹಾದೇವ ಯಲನಾಯಕ್ ಜೊತೆ ಜಗಳವಾಡುತ್ತಿದ್ದು, ಜಗಳ ಬಿಡಿಸಲು ಹೋದ ಮ್ಯಾನೇಜರ್ ನಿಂಗಪ್ಪನಿಗೆ.ನಿ ಯಾರೋ ಕೇಳೋಕೆ ಎಂದು ಅವ್ಯಾಚ ಶಬ್ದದಿಂದ ನಿಂದಿಸಿದರು.
ಪೆಟ್ರೋಲ್ ಬಿಡಲು ವಿನಾ ಕಾರಣ ತಡ ಮಾಡ್ತಿದ್ದಾನೆ ಎಂದು ಆವಾಜ್ ಹಾಕಿದರು. ಸೇಲ್ಸಮನ್ ಮಹಾದೇವನನ್ನು ನೆಲಕ್ಕೆ ಕೆಡೆದು ಐದಾರು ಜನರಿಂದ ಹಲ್ಲೆ ಮಾಡಿದರು. ದೊನ್ನೆ, ಬೆಲ್ಟ್‌ನಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಜಗಳ ಬಿಡಿಸಲು ಹೋದ ಮ್ಯಾನೇಜರ್ ನಿಂಗಪ್ಪ ತಲೆಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿ ಗಂಭೀರ ಗಾಯವಾಗಿದೆ. ಮಹಾದೇವ ಹಾಗೂ ನಿಂಗಪ್ಪ ಮೇಲೆ ಹಲ್ಲೆ ನಡೆಸಿದವರೆಲ್ಲಾ ಅನ್ಯ ಕೋಮಿನ ಯುವಕರಾಗಿದ್ದಾರೆ. ಶಮಶುದ್ಧೀನ್ ಬೇಪಾರಿ(27),ಸಕ್ಲೈನ್ ಗಲಗಲಿ(22),ಮಕ್ತುಮ್ ಬೇಪಾರಿ(23), ಸೋಹೆಲ್ ಬೇಪಾರಿ(23) ವಿರುದ್ಧ ದೂರು ದಾಖಲಾಗಿದೆ.
