ಉಪಜಾತಿ ಜನಗಣತಿ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ‘ಮಾದಿಗ’ ಎಂದು ನಮೂದಿಸಿ, – ಎ ನಾರಾಯಣಸ್ವಾಮಿ.
1 min read

ಉಪಜಾತಿ ಜನಗಣತಿ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ‘ಮಾದಿಗ’ ಎಂದು ನಮೂದಿಸಿ, – ಎ ನಾರಾಯಣಸ್ವಾಮಿ.
ಬೆಂ,ಆನೇಕಲ್,ಮೇ,05: ಇಂದು ಉಪಜಾತಿಗಣತಿ ಆರಂಭಿಸುತ್ತಿರುವ ಹಿನ್ನಲೆ ಮನೆ ಬಾಗಿಲಿಗೆ ಅಧಿಕಾರಿಗಳು ಬಂದಾಗ ಎಕೆ,ಎಡಿ ಮತ್ತು ಆದಿಆಂದ್ರ ಬದಲಿಗೆ ‘ಮಾದಿಗ’ ಎಂದು ನಮೂದಿಸಿ ಎಂದು ಮಾಜಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಕರೆ ನೀಡಿದ್ದಾರೆ.
ಆನೇಕಲ್ ಭಾಗದಲ್ಲಿನ ತನ್ನ ಮನೆಗೆ ಬರುವ ಅಧಿಕಾರಿಗಳಿಗೆ ಆರತಿ ಎತ್ತಿ ಬರಮಾಡಿಕೊಳ್ಳುವ ಮೂಲಕ ಸ್ವಾಗತಿಸಿದ ಕೇಂದ್ರ ಸಚಿವ ಕುಟುಂಬ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
‘ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಒಳಮೀಸಲಾತಿ ಜಾರಿಗೆ ಪರಿಶಿಷ್ಟ ಜಾತಿಗಳಲ್ಲಿನ ಮೂಲಜಾತಿಗಳ ಸಮೀಕ್ಷೆಗಾಗಿ ಮನೆ ಬಾಗಿಲಿಗೆ ಆಗಮಿಸುವ ಅಧಿಕಾರಿಗಳಿಗೆ ನಿಮ್ಮ ನಿಮ್ಮ ಮೂಲ ಜಾತಿಗಳನ್ನ ತಿಳಿಸಿ ನಮೂದಿಸಿ’ ಎಂದು ಕರೆ ನೀಡಿದರು. ಅದರಲ್ಲೂ ತಮ್ಮದೇ ಉಪಜಾತಿಗೆ ಸೇರಿದ ಆದಿದ್ರಾವಿಡ ಸಮಾಜ ‘ಮಾದಿಗ’ ಎಂದು ನಮೂದಿಸಿ ಎಂದು ಕರೆ ನೀಡಿದರು.
ಆನೇಕಲ್ ಪಟ್ಟಣದ ವಿನಾಯಕ ನಗರದ ಎ ನಾರಾಯಣಸ್ವಾಮಿ ಮನೆ ಬೀದಿಗೆ ಆಗಮಿಸಿದ ಅಧಿಕಾರಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
![]()

