ಶನಿವಾರ ರಾಶಿ ಭವಿಷ್ಯ – ಮೇ 03,2025

1 min read
Share it

ಮೇಷ ರಾಶಿ

ಇಂದು ಜೀವನಕ್ಕೆ ಉತ್ತಮವಾದ ತಿರುವು ಕೊಡುವ ಸಮಯವಿದು

ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ಸ್ಥಾನಮಾನ ಸಿಗುತ್ತದೆ

ದ್ರವ್ಯ ಲಾಭ ಆಗುವುದರಿಂದ ಭಯ ಉಂಟಾಗಬಹುದು

ಪ್ರೀತಿ ಪಾತ್ರರೊಂದಿಗೆ ಸಂತೋಷದ ಕ್ಷಣವನ್ನು ಕಳೆಯುತ್ತೀರಿ

ಬಂಧುಗಳಲ್ಲಿ ವಿಶೇಷವಾದ ಆಕರ್ಷಣೆ ಹೊಂದುತ್ತೀರಿ

ವಿದ್ಯಾರ್ಥಿಗಳಿಗೆ ಬಹುಮಾನ ಅಥವಾ ಉಡುಗೊರೆ ಸಿಗುವ ಸಾಧ್ಯತೆ

ಶಾರದಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

ವೃಷಭ ರಾಶಿ

ಇಂದು ಆರ್ಥಿಕವಾಗಿ ಸುಧಾರಣೆಯಾಗಲಿದೆ

ಮನಸ್ಸಿಗೆ ಮಾತ್ರ ಸಮಾಧಾನವಿಲ್ಲ

ಮಕ್ಕಳ ಬಗ್ಗೆ ಉತ್ತಮವಾದ ಅಭಿಪ್ರಾಯ ಇರಲಿದೆ

ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ತೋರುತ್ತಿರಾ

ಸತಿಪತಿಯರಲ್ಲಿ ಅನ್ಯೋನತೆ ಕಾಣಲಿದೆ

ಪ್ರಯಾಣ ಸಂಭವ ಶುಭವಾಗಲಿದೆ

ಕುಲದೇವತಾ ಆರಾಧನೆ ಮಾಡಬೇಕು

 

ಮಿಥುನ ರಾಶಿ 

ಇಂದು ಸಮಾಜದಲ್ಲಿ ಜವಾಬ್ದಾರಿಯ ಸ್ಥಾನವನ್ನು ಹೊಂದಿರುತ್ತೀರಿ

ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಶುಭವಿದೆ

ದೂರದ ಪ್ರಯಾಣ ಬೇಡ

ಶತ್ರು ಕಾಟ ನಿರಂತರವಾಗಿರುವುದರಿಂದ ಸಮಸ್ಯೆಯಾಗಬಹುದು

ತೀರ್ಥಕ್ಷೇತ್ರಗಳ ದರ್ಶನಕ್ಕೆ ಚಿಂತನೆಯನ್ನು ಮಾಡಿ

ರಾಜಕೀಯ ವ್ಯಕ್ತಿಗಳಿಗೆ ಹಳೆಯ ವಿಚಾರ ಸಮಸ್ಯೆಯಾಗಬಹುದು

ಪ್ರತ್ಯಂಗಿರಾದೇವಿಯನ್ನು ಪ್ರಾರ್ಥನೆ ಮಾಡಬೇಕು

ಕಟಕ ರಾಶಿ

ಇಂದು ವ್ಯಾವಹಾರವಾಗಿ ಯಶಸ್ಸನ್ನು ಹೊಂದುವುದರ ಜೊತೆಗೆ ಸವಾಲುಗಳನ್ನು ಎದುರಿಸುತ್ತೀರಿ

ಮಾತಿನಿಂದ ಕೆಲವು ಸಮಸ್ಯೆಗಳಾಗಬಹುದು

ದೂರದ ಸಂಬಂಧಿಕರಲ್ಲಿ ಜಗಳ ಆಗುವ ಸಾಧ್ಯತೆ ಇದೆ

ವೈಯಕ್ತಿಕ ವಿಚಾರಗಳಿಂದ ಅವಮಾನ ಆಗಬಹುದು

ಮುಚ್ಚಿಟ್ಟಿದ್ದ ವಿಚಾರಗಳು ಹೊರ ಬರಲಿದೆ

ತಾಳ್ಮೆಯಿಂದ ವರ್ತಿಸಿ ಅಶುಭವಾದ ದಿನ

ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ಇಂದು ಶತ್ರುಗಳಿಗೆ ಸರಿಯಾದ ಉತ್ತರವನ್ನು ನೀಡುವಿರಿ

ವ್ಯಾವಹಾರಿಕವಾಗಿ ಹೊಸ ತಿರುವು ಶುಭವಿದೆ

ವಿದ್ಯಾರ್ಥಿಗಳಲ್ಲಿ ಪ್ರವಾಸದ ವಿಚಾರವನ್ನು ಚರ್ಚೆ ಮಾಡುತ್ತೀರಿ

ಕಾರ್ಯಕ್ಷೇತ್ರದಲ್ಲಿ ಸಂತಸ ಆಗಲಿದೆ

ಮಂಗಳ ಕಾರ್ಯದಲ್ಲಿ ಭಾಗಿಗಳಾಗುತ್ತೀರಿ

ಹಲವಾರು ಜನರಲ್ಲಿ ನಿಮ್ಮ ವಿಚಾರ ಬರುತ್ತದೆ

ಮಹಾಗಣಪತಿಯನ್ನು ಆರಾಧನೆ ಮಾಡಬೇಕು

 

ಕನ್ಯಾ ರಾಶಿ

ಇಂದು ಪ್ರತಿಭೆಗೆ ತಕ್ಕ ಫಲವಿಲ್ಲ ಅದರಿಂದ ಬೇಸರ ಆಗಲಿದೆ

ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಬರಲಿದೆ

ಶೀತ ಸಂಬಂಧಿ ಸಮಸ್ಯೆ ಉಂಟಾಗಬಹುದು

ರೋಗಬಾಧೆ ಇರುತ್ತದೆ ಗಮನಿಸಿಕೊಳ್ಳಿ

ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಗಬಹುದು

ಮಕ್ಕಳ ಬಗ್ಗೆ ವಿಶ್ವಾಸವಿರಲಿ

ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ಇಂದು ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು

ನಿರುದ್ಯೋಗಿಗಳಿಗೆ ಸ್ವಲ್ಪ ನಿರಾಳ

ಅಧಿಕವಾದ ಖರ್ಚು ಆಗಲಿದೆ

ಮಕ್ಕಳ ವಿದ್ಯಾ ಪ್ರಗತಿ ನಿಮಗೆ ಸಮಾಧಾನ ಕೊಡಲಿದೆ

ಬೇರೆಯವರಿಗೆ ಸಹಾಯ ಮಾಡುತ್ತೀರಿ

ನಾಯಕತ್ವದ ಕೆಲಸದಲ್ಲಿ ಶ್ರಮ ಪಡುತ್ತೀರಿ

ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಬೇಕು

 

ವೃಶ್ಚಿಕ ರಾಶಿ

ಇಂದು ಮನೆಯಲ್ಲಿ ಹೊಂದಾಣಿಕೆ ಇರಲಿ

ಆತುರದ ನಿರ್ಧಾರದಿಂದ ಸಮಸ್ಯೆಯಾಗಬಹುದು

ಅವಕಾಶಗಳು ಕೈತಪ್ಪುವ ಸಾಧ್ಯತೆ ಇದೆ

ಎಲ್ಲಾ ರೀತಿಯಲ್ಲೂ ಎಚ್ಚರಿಕೆಯಿಂದಿರಿ

ಮಕ್ಕಳ ಜೊತೆಯಲ್ಲಿ ಪ್ರಯಾಣ ಮಾಡುತ್ತೀರಿ, ತೊಂದರೆಯಾಗಬಹುದು

ಶರಭೇಶ್ವರನನ್ನು ಪ್ರಾರ್ಥನೆ ಮಾಡಬೇಕು

 

ಧನಸ್ಸು ರಾಶಿ

ಇಂದು ವಿರೋಧಿಗಳಿಂದ ಕುತಂತ್ರ

ಅತಿಯಾದ ನಂಬಿಕೆಯಿಂದ ದ್ರೋಹ ಆಗಬಹುದು

ಆತ್ಮೀಯರ ಭೇಟಿ ಮಾಡುವುದರಿಂದ ಸಮಾಧಾನ ಆಗಲಿದೆ

ಇಷ್ಟವಾದ ಕೆಲಸಕ್ಕೆ ಅಡ್ಡಿಯಾಗಬಹುದು

ಹಲವಾರು ರೀತಿಯ ಯೋಜನೆಗಳಿಗೆ ಭಂಗವಾಗಲಿದೆ

ಮನೆಯಲ್ಲಿ ಭಿನ್ನಾಭಿಪ್ರಾಯಕ್ಕೆ ವಿರಾಮ ಹಾಕಿ

ಸಾಯಿಬಾಬಾರನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ

ಈ ದಿನ ನಂಬಿಕೆ ಕೆಲಸ ಮಾಡುವುದಿಲ್ಲ

ಇಂದು ವಿವಾದಗಳಿಂದ ದೂರವಿರಿ

ನಿಮ್ಮ ಕೆಲಸವನ್ನು ಬೇರೆಯವರಿಗೆ ಹೇಳಬೇಡಿ

ಮಾನಸಿಕವಾಗಿ ವ್ಯಥೆ ಪಡುತ್ತೀರಿ

ವ್ಯಾವಹಾರಿಕವಾಗಿ ಸ್ವಲ್ಪ ಸಾಧನೆಯನ್ನು ಮಾಡುತ್ತೀರಿ

ಆಸೆಗೆ ಮಿತಿ ಇಲ್ಲದ ಕಾರಣ ನಿರಾಸೆ ಹೊಂದುತ್ತೀರಿ

ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ

ಇಂದು ಮನೆಯಲ್ಲಿ ಸಂತಸವಾದ ಕ್ಷಣಗಳು ಇರಲಿದೆ

ಸಾಲದ ವಿಚಾರಕ್ಕೆ ನೀವು ಹೆದರುವುದಿಲ್ಲ ಆದರೆ ಅದು ಒಳ್ಳೆಯದಲ್ಲ

ಹಲವಾರು ವಿಚಾರಗಳಲ್ಲಿ ಆಸಕ್ತಿ ಆದರೆ ಗೊಂದಲ ಆಗಲಿದೆ

ಅನಾವಶ್ಯಕವಾದ ಖರ್ಚು ಅದರಿಂದ ಯೋಚನೆ

ಸ್ನೇಹಿತರ ಮಧ್ಯೆ ಜಗಳಕ್ಕೆ ಅವಕಾಶವಿದೆ

ಹಿರಿಯರ ಆಸ್ತಿಯ ವಿಚಾರದಲ್ಲಿ ಗೊಂದಲ ಆಗಬಹುದು

ಋಣಮೋಚನಾ ಮಂಗಳ ಸ್ತೋತ್ರವನ್ನು ಪಠಣೆ ಮಾಡಬೇಕು

 

ಮೀನ  ರಾಶಿ

ಇಂದು ಯತ್ನ ಕಾರ್ಯದಲ್ಲಿ ಜಯವಿದೆ ಆದರೆ ತುಂಬಾ ಶ್ರಮ ಪಡಬೇಕು

ಎಲ್ಲರ ಮನಸ್ಸಿನಲ್ಲಿ ನಿಮ್ಮ ದೌರ್ಬಲ್ಯದ ವಿಚಾರವನ್ನು ಮಾತನಾಡುತ್ತಾರೆ

ಸ್ತ್ರೀಯರಿಗೆ ವಸ್ತ್ರ ಮತ್ತು ಧನಲಾಭ

ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ಶುಭದಿನ

ಭೂ ವಿಚಾರದಲ್ಲಿ ಯಾವುದೇ ಕುತಂತ್ರಗಳು ಬೇಡ

ಹಿರಿಯರ ಆಸ್ತಿ, ಹಣದ ವಿಚಾರದಲ್ಲಿ ಮನಸ್ತಾಪ ಆಗಲಿದೆ

ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?