ಅದ್ದೂರಿಯಾಗಿ ನಡೆದ ಐತಿಹಾಸಿಕ ಭೇಟಿ ಉತ್ಸವ

ಚಿತ್ರದುರ್ಗ: ಪಾಳೇಗಾರರ ಕಾಲದಿಂದಲೂ ನಡೆಯುತ್ತಿರುವ ಐತಿಹಾಸಿಕ ಅಕ್ಕ ತಂಗಿ,ಭೇಟಿ ಉತ್ಸವ ಅದ್ದೂರಿ ಸಡಗರ ಸಂಭ್ರಮದಿಂದ ಮಂಗಳವಾರ ನಡೆಯಿತು. ಚಿತ್ರದುರ್ಗದ ದೊಡ್ಡ ಪೇಟೆಯಲ್ಲಿ ವರ್ಷಕ್ಕೊಮ್ಮೆ ನಡೆವ ಅಕ್ಕತಂಗಿ ಭೇಟಿ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಜಮಾಯಿಸಿದ್ದರು.ತಂಗಿ ತಿಪ್ಪಿನಘಟ್ಟಮ್ಮ ರಂಗಯ್ಯನಬಾಗಿಲಿಂದ ಬಂದರೆ ಅಕ್ಕ ಬರಗೇರಮ್ಮ, ಇನ್ನೊಂದೆಡೆಯಿಂದ ಕುಣಿಯುತ್ತಾ ಓಡಿ ಬರುತ್ತಾರೆ.ಇಬ್ಬರು ಸಡಗರದಿಂದ ಒಬ್ಬರನ್ನೊಬ್ಬರು ಭೇಟಿಯಾಗಿ ತಬ್ಬಿಕೊಳ್ಳುತ್ತಾರೆ.ಇದನ್ನುಭಕ್ತರು ಕಣ್ತುಂಬಿಕೊಳ್ಳುತ್ತಾರೆ.
![]()