ಎರಡು ಬೈಕ್ ಗಳ ನಡುವೇ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು, ಮತ್ತೋಬ್ಬರಿಗೆ ಗಂಭೀರ ಗಾಯ
1 min read
ಚಿಂತಾಮಣಿ : ಎರಡು ದ್ವಿಚಕ್ರ ವಾಹನಗಳ ನಡುವೇ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಚಿಂತಾಮಣಿ ಮದನಪಲ್ಲಿ ರಸ್ತೆ ಮಾರ್ಗದ ನಂದಿಗಾನಹಳ್ಳಿ ಕ್ರಾಸ್ ನಲ್ಲಿ ಬಳಿ ಮಂಗಳವಾರ ರಾತ್ರಿ 7-30 ರ ಸಮಯದಲ್ಲಿ ನಡೆದಿದೆ. ಎರಡು ಬೈಕ್ ಗಳ ನಡುವೇ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಸಾವನ್ನಪಿರುವವರು ಚಿಂತಾಮಣಿ ತಾಲೂಕು ಕುರುಬೂರು ಗ್ರಾಮದ 70 ವರ್ಷದ ಚಂದ್ರೇಗೌಡ ಹಾಗೂ ಕೈವಾರ ಗ್ರಾಮದ 27 ವರ್ಷದ ಆಶೋಕ್ ರವರಾಗಿದ್ದಾರೆ, ಇನ್ನೂ ಮೃತ ಆಶೋಕ್ ರವರ ಜೊತೆಗಿದ್ದ ಓಂಕಾರ್ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಇನ್ನೂ ಅಪಘಾತ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಟ್ಲಹಳ್ಳಿ ಪೊಲಿಸರು ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
