ಹುಬ್ಬಳ್ಳಿಯಲ್ಲಿ ಮಗುವಿನ ಹತ್ಯೆ ಮಾಡಿ ಪೊಲೀಸ್ ಗುಂಡಿಗೆ ಬಲಿಯಾದ ಬಿಹಾರಿ ರಿತೇಶ ಪತ್ತೆಗೆ ಮುಂದಾದ ಪೊಲೀಸ್ ಇಲಾಖೆ
1 min read
ಬಾಲಕಿ ಹತ್ಯೆಗೈದು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಹಂತಕನ ಪೋಟೋವನ್ನು ಹುಬ್ಬಳ್ಳಿ ಪೋಲೀಸರು ರಿಲೀಸ್ ಮಾಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಶವಗಾರದಲ್ಲಿ ಇಲ್ಲಿಯವರೆಗೂ ಅನಾಥವಾಗಿ ಬಿದ್ದಿರುವ ಹಂತಕನ ಶವ ಗುರುತಿಸಲು ಅವರ ಸಂಬಂಧಿಕರಾಗಲಿ,ಪರಿಚಯಸ್ಥರಾಗಲಿ ಯಾರೂ ಬಾರದ ಕಾರಣ ಪೋಟೋ ರಿಲೀಸ್ ಮಾಡಿದ್ದಾರೆ. ಕಾಮುಕ ರಿತೇಶಕುಮಾರನ (35) ಭಾವಚಿತ್ರ ಬಿಡುಗಡೆ ಮಾಡಿದ್ದು.ಕುಟುಂಬಸ್ಥರ ಪತ್ತೆಗೆ ಭಾವಚಿತ್ರ ಸಹಿತ ಅಶೋಕ ನಗರ ಪೋಲೀಸರುಪ್ರಕಟಣೆ ಹೊರಡಿಸಿದ್ದಾರೆ. ಈತ ಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, 5.3 ಎತ್ತರ, ಅಗಲ ಹಣೆ ಹೊಂದಿದ್ದಾನೆ.ಅಲ್ಲದೆ, ಈತನ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ಓಂ ನಮಃ ಶಿವಾಯ ಜಯ ಸಂಜಯ ಎಂಬ ಟ್ಯಾಟೋ ಗುರುತು ಸಹ ಇದೆ. ಈತನ ಗುರುತು ಪರಿಚಯ ಇದ್ದವರು ಕೂಡಲೇ 0836-2233490 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
