ಮೆಟ್ರೋ ಸಿಬ್ಬಂದಿಯ ಯಡವಟ್ಟಿಗೆ ಸ್ಥಳದಲ್ಲೇ ಪ್ರಾಣಬಿಟ್ಟ ಆಟೋ ಚಾಲಕ
1 min read
ಬೆಂಗಳೂರು: ಮೆಟ್ರೋ ಕಾಮಗಾರಿ ವೇಳೆ ಮೆಟ್ರೋ ಸಿಬ್ಬಂದಿಯ ಎಡವಟ್ಟಿಗೆ ಆಟೋ ಚಾಲಕ ಬಲಿಯಾಗಿದ್ದಾನೆ. ಮೃತ ದುರ್ದೈವಿಯೂ ಹೆಗ್ಗಡೆನಗರ ನಿವಾಸಿ ಆಟೋ ಚಾಲಕ ಖಾಸೀಂ ಎಂದು ಗುರುತಿಸಲಾಗಿದೆ. ಯಲಹಂಕ ಬಳಿಕ ಕೋಗಿಲು ಕ್ರಾಸ್ ಬಳಿ ಭೀಕರ ದುರಂತ ಸಂಭವಿಸಿದೆ.ನಿನ್ನೆ ರಾತ್ರಿ 12.30ರ ಸುಮಾರಿಗೆ ಮೆಟ್ರೋ ಪಿಲ್ಲರ್ಗೆ ತಡೆಗೋಡೆಯಾಗಿ ನಿಲ್ಲಿಸುವ ವಯಾಡಕ್ಟ್ ಅನ್ನು ಲಾರಿಯಲ್ಲಿ ತಗೊಂಡು ಹೋಗಲಾಗಿತ್ತು. ಇದೇ ವೇಳೆ ಲಾರಿ ಟರ್ನ್ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ, ವಯಾಡಿಕ್ಟ್ ಚಾರ್ಜಿಗೆ ತಾಕಿ ಘಟನೆ ಸಂಭವಿಸಿದೆ. ಲಾರಿ ಚಾಲಕ ಕೋಗಿಲು ಕ್ರಾಸ್ ಮೂಲಕ ವೇಗವಾಗಿ ಸಾಗುತ್ತಿದ್ದಾಗ ವಯಾಡೆಕ್ಟ್ ಪಿಲ್ಲರ್ ಏಕಾಏಕಿ ಉರುಳಿದಿದೆ. ಅದೇ ವೇಳೆ ಲಾರಿ ಪಕ್ಕದಲ್ಲೇ ಆಟೋ ಕೂಡ ನಿಂತಿತ್ತು. ಆಟೋದಲ್ಲಿದ್ದ ಪ್ರಯಾಣಿಕರು ಲಾರಿ ಕಂಡ ತಕ್ಷಣ ಇಳಿದಿದ್ದಾರೆ. ಆದ್ರೆ, ಆಟೋ ಚಾಲಕ ಇಳಿಯುವಷ್ಟರಲ್ಲಿ ವಯಾಡೆಕ್ಟ್ ಆಟೋ ಮೇಲೆಯೇ ಉರುಳಿದೆ. ಈ ದುರಂತದಲ್ಲಿ ಆಟೋ ನುಜ್ಜುಗುಜ್ಜಾಗಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಾಲು ಸಾಲು ದುರಂತಗಳು ಸಂಭವಿಸಿದ್ದರು ಗುತ್ತಿಗೆ ಪಡೆದ ಎನ್ಸಿಸಿ ಸಂಸ್ಥೆ ಎಚ್ಚೆತ್ತುಕೊಳ್ಳುತ್ತಿಲ್ಲ. ಆದ್ರೆ ಇದೀಗ ಸಂಸ್ಥೆಯ ಯಡವಟ್ಟಿಗೆ ಅಮಾಯಕ ಆಟೋ ಚಾಲಕ ಬಲಿಯಾಗಿದ್ದಾನೆ. ಕಾಮಗಾರಿಗೆ ವಸ್ತುಗಳು ಸಾಗಿಸುವಾಗ ನಿರ್ಲಕ್ಷ್ಯ ವಹಿಸಿದ್ದಾರೆ. ಎನ್ಸಿಸಿ ಯಡವಟ್ಟಿಗೆ ಈ ಹಿಂದೆಯೂ ಎರಡು ಬಲಿಯಾಗಿದ್ವು. ರಸ್ತೆಯಲ್ಲಿ ಬೃಹತ್ ಕಾಮಗಾರಿಗೆ ಮುನ್ನೆಚ್ಚರಿಕೆ ವಹಿಸಬೇಕು. ಆದ್ರೂ ಅಗತ್ಯ ಕ್ರಮವಿಲ್ಲದೆ ವಯಾಡಕ್ಟ್ ಸಾಗಣೆ ಮಾಡ್ತಿದ್ರು. ಬೃಹತ್ ವಸ್ತು ಸಾಗಿಸುವ ವಾಹನದ ಜೊತೆ ವಾಹನಗಳಿರಬೇಕು. ಹಿಂದೊಂದು, ಮುಂದೊಂದು ವಾಹನಗಳಿರುವುದು ಕಡ್ಡಾಯವಾಗಿದೆ. ಆದ್ರೆ ನಿನ್ನೆ ಒಂದೇ ವಾಹನವಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
2023ರ ಜನವರಿಯಲ್ಲಿ ನಾಗವಾರ ಮುಖ್ಯರಸ್ತೆಯಲ್ಲೂ ಬೈಕ್ನಲ್ಲಿ ಹೋಗ್ತಿದ್ದವರ ಮೇಲೆ ಪಿಲ್ಲರ್ ಬಿದ್ದಿತ್ತು. ಈ ದುರ್ಘಟನೆಯಲ್ಲಿ ತಾಯಿ ಹಾಗೂ ಮಗು ಮೃತಪಟ್ಟಿದ್ದರು. ಜೊತೆಯಲ್ಲಿದ್ದ ಪತಿ, ಇನ್ನೊಂದು ಹೆಣ್ಣು ಮಗು ಬಚಾವ್ ಆಗಿದ್ರು. ಮತ್ತೊಂದು ಘಟನೆಯಲ್ಲಿ ಕೆ.ಆರ್. ಪುರಂನಲ್ಲೂ ಸಾವಾಗಿತ್ತು. ದಂಪತಿ, ಮಕ್ಕಳು ಹೆಬ್ಬಾಳದ ಕಡೆಗೆ ಹೋಗುವಾಗ ದುರಂತ ಸಂಭವಿಸಿತ್ತು. ಈಗಲೂ ಮತ್ತೆ ಎನ್ಸಿಸಿ ಸಂಸ್ಥೆಯ ನಿರ್ಲಕ್ಷ್ಯದಿಂದಲೇ ಮತ್ತೊಂದು ದುರಂತ ಸಂಭವಿಸಿದೆ.
