ವ್ಯಕ್ತಿಯ ಭೀಕರ ಹತ್ಯೆ..ಮನಸೋ ಇಚ್ಚೆ ಚಾಕು ಇರಿದು ಕೊಲೆ
1 min read
ತುಮಕೂರು : ವ್ಯಕ್ತಿಗೆ ಮನಸೋ ಇಚ್ಛೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ವೀರಚಿನ್ನೇನಹಳ್ಳಿಯಲ್ಲಿ ನಡೆದಿದೆ,ರಾಜು (40) ಕೊಲೆಯಾದ ವ್ಯಕ್ತಿಯಾಗಿದ್ದು, ಇಂದು ಬೆಳಗಿನಜಾವ 4.30ರ ವೇಳೆಯಲ್ಲಿ ಘಟನೆ ನಡೆದಿದ್ದು, ಕಾಲಿಗೆ ಟವೆಲ್ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಚಾಕುವಿನಿಂದ ದುಷ್ಕರ್ಮಿಗಳು ಇರಿದಿದ್ದಾರೆ.ರಾಜುನ ಸಂಬಂಧಿಯೊಬ್ಬರ ಮನೆ ಬಳಿ ಈ ಘಟನೆ ನಡೆದಿದೆ. ಮೂರು ಜನರಿಂದ ನಡೆದಿರುವ ಕೃತ್ಯ ಎನ್ನಲಾಗಿದೆ.. ಯಾವ ಕಾರಣಕ್ಕೆ ಕೊಲೆ ನಡೆದಿದೆ, ಕೊಲೆ ಮಾಡಿದವರ್ಯಾರು ಎಂದು ತಿಳಿದು ಬಂದಿಲ್ಲ.. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
