ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ 18ಮಂದಿ ಅರಣ್ಯಾಧಿಕಾರಿಗಳ ವಶ
1 min read
ತುಮಕೂರು : ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 18 ಮಂದಿ ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಬಂಧಿತರಿಂದ ವಾಹನ, ಬಲೆ, ಮರದ ದೊಣ್ಣೆ, ಭರ್ಜಿಗಳನ್ನು ವಶಪಡಿಸಿಕೊಳ್ಳಲಾಗಿದೆ. ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಬುಕ್ಕಾಪಟ್ಟಣ ವಲಯದ ಚಿಂಕಾರ ವನ್ಯಜೀವಿಧಾಮದಲ್ಲಿ ನಡೆದಿದ್ದು, ಆರೋಪಿಗಳು ತಂದಿದ್ದ ಅತ್ಯಾಧುನಿಕ ಬಲೆ, ಮರದ ದೊಣ್ಣೆ, ಭರ್ಜಿಗಳು ವಾಹನವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.ಮಧುಗಿರಿ ತಾಲ್ಲೂಕಿನ ತಿಪ್ಪನಹಳ್ಳಿ, ಬಡವನಹಳ್ಳಿ, ಶಿರಾ ತಾಲ್ಲೂಕಿನ ಕಳ್ಳಿಪಾಳ್ಯ ಹಾಗೂ ತುಮಕೂರು ತಾಲ್ಲೂಕಿನ ಕೆಂಚಯ್ಯನಪಾಳ್ಯ ಗ್ರಾಮಕ್ಕೆ 18 ಮಂದಿ ಸೇರಿದ್ದಾರೆ. ಹಲವು ದಿನಗಳಿಂದ ಬೇಟೆಗಾರರ ಚಟುವಟಿಕೆ ಹೆಚ್ಚಾಗಿತ್ತು.. ಇದರ ಮಾಹಿತಿ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ವಲಯ ಅರಣ್ಯಾಧಿಕಾರಿ ಚಂದನ್ ಕುಮಾರ್, ಉಪ ವಲಯಾಧಿಕಾರಿ ಕಿರಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು.
