ಒಂದೇ ಗ್ರಾಮದ ಎಂಟು ಜನರಿಗೆ ಕಚ್ಚಿದ ಬೀದಿ ನಾಯಿ…ದೇಹದ ವಿವಿಧ ಭಾಗಗಳ ಮೇಲೆ ಹುಚ್ಚು ನಾಯಿ ದಾಳಿ
1 min read
ಬೆಳಗಾವಿ : ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದೇ ಗ್ರಾಮದ ಎಂಟು ಜನರು ನಾಯಿ ಕಡಿತದಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಗಾವಿ ತಾಲೂಕಿನ ಕುದ್ರೆಮನಿ ಗ್ರಾಮದಲ್ಲಿ ನಡೆದಿದೆ. ಕೈ, ಕಾಲು, ಹೊಟ್ಟೆ ಭಾಗ ಸೇರಿ ದೇಹದ ವಿವಿಧ ಭಾಗಗಳ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ವಿಠ್ಠಲ್ ದೇವಸ್ಥಾನದಲ್ಲಿ ಸಂಜೆ ಗ್ರಾಮಸ್ಥರು ಕುಳಿತಿದ್ದರು. ಈ ವೇಳೆ ದೇವಸ್ಥಾನದ ಒಳಗೆ ಹುಚ್ಚು ನಾಯಿ ನುಗ್ಗಿ ದಾಳಿ ಮಾಡಿದೆ. ಓರ್ವ ಮಹಿಳೆ ಸೇರಿ ಏಳು ಜನ ಪುರುಷರ ಮೇಲೆ ಬೀದಿ ನಾಯಿ ದಾಳಿ ಮಾಡಿದೆ.ಮಲಪ್ರಭಾ ಪಾಟೀಲ್, ನೀಲಕಂಠ ಸಾಕರೆ, ವಿಠ್ಠಲ‌್ ಮಾಂಡೇಕರ್ ಸೇರಿ ಹಲವರ ಮೇಲೆ ನಾಯಿ ದಾಳಿ ನಡೆಸಿದ್ದು, ಸದ್ಯ ಬಿಮ್ಸ್ ಆಸ್ಪತ್ರೆಯಲ್ಲಿ ಎಂಟು ಜನ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ, ರೊಚ್ಚಿಗೆದ್ದ ಗ್ರಾಮಸ್ಥರಿಂದ ನಾಯಿಯ ಮೇಲೆ ಮರುದಾಳಿ ಮಾಡಿ ಹುಚ್ಚು ನಾಯಿಯನ್ನು ಗ್ರಾಮಸ್ಥರು ಹೊಡೆದು ಕೊಂದರು.ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
