ಮಂಗಳವಾರ ರಾಶಿ ಭವಿಷ್ಯ -ಏಪ್ರಿಲ್,15,2025
1 min read
ಮೇಷ ರಾಶಿ
ಹಣಕಾಸಿನ ವಿಚಾರದಲ್ಲಿ ಚೆನ್ನಾಗಿರುತ್ತೆ
ಎಲ್ಲ ವಿಚಾರದಲ್ಲಿ ಲಾಭ ಹೆಚ್ಚಾಗುತ್ತದೆ
ವಿದ್ಯಾರ್ಥಿಗಳು ಅಧ್ಯಯನದ ದೃಷ್ಟಿಯಿಂದ ತುಂಬಾ ಗಂಭೀರ ಚಿಂತನೆಗಳನ್ನ ನಡೆಸಬೇಕು
ಪದವೀಧರರಿಗೆ ಉತ್ತಮ ನೌಕರಿಗೆ ಅವಕಾಶವಿದೆ
ಮಧ್ಯಾಹ್ನದ ನಂತರ ಹಲವಾರು ಕೆಲಸಗಳು ಶುಭವಾಗುತ್ತದೆ
ಇಂದು ಹಳೆ ನೆನಪುಗಳು ಕಾಡಬಹುದು
ಹಸಿದವರಿಗೆ ಅನ್ನದಾನ ಮಾಡಬೇಕು
ವೃಷಭ ರಾಶಿ
ಇಂದು ಮಾನಸಿಕವಾಗಿ ತುಂಬಾ ಬೇಸರವಾಗುತ್ತದೆ
ಯಾರನ್ನು ಕೂಡ ಪರಿಪೂರ್ಣವಾಗಿ ತಿಳಿದುಕೊಳ್ಳದೆ ನಂಬಬೇಡಿ ವಂಚನೆಗೆ ಒಳಗಾಗಬಹುದು
ಸ್ನೇಹಿತರು, ಸಹೋದ್ಯೋಗಿಗಳು ನಿಮಗೆ ಮೋಸ ಮಾಡಬಹುದು ಎಚ್ಚರವಾಗಿರಿ
ಮನೆಯಲ್ಲಿ ಎಲ್ಲರೂ ಆತಂಕಕ್ಕೆ ಒಳಗಾಗಬಹುದು
ಲಾಭದ ದೃಷ್ಟಿಯಿಂದ ಹಣ ಹೂಡಿಕೆಗೆ ಮುಂದಾಗಬಹುದು
ಮನಸ್ಸು ಎಲ್ಲದಕ್ಕೂ ಒಪ್ಪಿಗೆ ಸೂಚಿಸದೇ ಅವಕಾಶ ವಂಚಿತರಾಗಬಹುದು
ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಮಿಥುನ ರಾಶಿ
ಇಂದು ನಿಮ್ಮ ಕುಟುಂಬ ಸದಸ್ಯರ ನಡುವಳಿಕೆಯಿಂದ ನಿಮ್ಮ ಪರಿವಾರದವರೆಲ್ಲರೂ ನಿಮ್ಮನ್ನ ಮೆಚ್ಚಿಕೊಳ್ಳುತ್ತಾರೆ
ನಿಮ್ಮ ಚುರುಕುತನ, ಬುದ್ಧಿವಂತಿಕೆ ನಿಮಗೆ ಗೌರವವನ್ನು ತರುತ್ತದೆ
ಕೆಲಸದ ಸ್ಥಳದಲ್ಲಿ ತುಂಬಾ ಶ್ರಮ ಪಡುತ್ತೀರಿ
ರಾಜಕೀಯ ವ್ಯಕ್ತಿಗಳಿಗೆ ರಾಜಕಾರಣಿಗಳಿಗೆ ಉತ್ತಮವಾದ ದಿನ
ನಿಮ್ಮ ಬದಲಾವಣೆಗಳನ್ನು ಜನರು ಒಪ್ಪುತ್ತಾರೆ
ನವದುರ್ಗೆಯರನ್ನು ಪ್ರಾರ್ಥನೆ ಮಾಡಬೇಕು
ಕಟಕ ರಾಶಿ
ಇಂದು ನಿಮ್ಮ ಬಗ್ಗೆ ನಿಮಗೆ ಗಟ್ಟಿಯಾದ, ದೃಢವಾದ ನಂಬಿಕೆ ಇರಬೇಕು
ನಿಮ್ಮ ಪ್ರಾಮಾಣಿಕ, ಧೈರ್ಯಯುತವಾದ ತೀರ್ಮಾನಕ್ಕೆ ಆಕರ್ಷಕರಾಗುತ್ತಾರೆ
ಹಿರಿಯರ ಬಗ್ಗೆ ಅಗತ್ಯವಾದ ಸೇವಾ ಮನೋಭಾವನೆ ಇರಬೇಕಾಗುತ್ತದೆ
ನಿಮ್ಮ ವಿರೋಧಿಗಳೆಲ್ಲರೂ ನಿಮ್ಮ ಕೆಲಸದ ವೈಖರಿಯನ್ನು ನೋಡಿ ತಟಸ್ಥರಾಗುತ್ತಾರೆ
ಸಮಾಜದಲ್ಲಿ ವಿಶೇಷವಾದ ಗೌರವಕ್ಕೆ ಪಾತ್ರರಾಗುತ್ತೀರಿ
ಸಾಯಂಕಾಲ ಅಶುಭ ವಾರ್ತೆ ಕೇಳಬಹುದು, ಮನಸ್ಸಿಗೆ ಬೇಸರವಾಗುತ್ತದೆ
ಗುರು ಪ್ರಾರ್ಥನೆಯನ್ನು ಮಾಡಬೇಕು
ಸಿಂಹ ರಾಶಿ
ಬಹಳ ವಿರಾಮವಾಗಿ ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಬೇಕೆಂಬ ಮನಸ್ಸು ಬರಬಹುದು ಆದರೆ ಕೆಲಸದ ಒತ್ತಡ ನಿಮಗೆ ಅವಕಾಶ ಮಾಡಿಕೊಡುವುದಿಲ್ಲ
ನಿಮಗೆ ಅವಕಾಶಗಳು ಬಹಳ ಕಡಿಮೆ ಇದೆ ಅನಿಸುತ್ತದೆ
ಆಸ್ತಿ ವಿಚಾರವಾಗಿ ಸ್ವಲ್ಪ ಮಾತುಕತೆಗಳು ನಡೆಯಬಹುದು
ನಿಮ್ಮ ಯೋಜನೆಗಳೆಲ್ಲವೂ ಫಲಪ್ರದವಾಗುವ ದಿನವಿದು
ಬೇರೆಯವರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಒಳಗಾಗಬಹುದು
ಕುಲದೇವತಾ ಪ್ರಾರ್ಥನೆ ಮಾಡಬೇಕು
ಕನ್ಯಾ ರಾಶಿ
ಯಾವುದೇ ಸೂಚನೆಗಳಿಲ್ಲದೆ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು, ವೈದ್ಯರ ಸಲಹೆ ಪಡೆದುಕೊಳ್ಳಿ
ಆರೋಗ್ಯ ಸಮಸ್ಯೆಗಳಿಗೆ ದೇವರಿಗೆ ಹರಕೆ ಮಾಡಿಕೊಂಡಿದ್ದರೆ ತಕ್ಷಣ ತೀರಿಸಿರಿ
ದೇವರ ಬಗ್ಗೆ ಇರುವ ದಿವ್ಯವಾದ ನಂಬಿಕೆಯನ್ನು ಉಳಿಸಿಕೊಳ್ಳಿ
ಕಷ್ಟ ಬಂದಾಗ ದೇವರ ಸ್ಮರಣೆ ಮಾಡುವುದು ತಪ್ಪಾಗಬಹುದು
ಇಂದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುತ್ತದೆ
ಇಷ್ಟದೇವತಾ ಪ್ರಾರ್ಥನೆ ಮಾಡಬೇಕು
ತುಲಾ ರಾಶಿ
ಯೋಗ್ಯವಲ್ಲದ ಕೆಲಸಗಳಲ್ಲಿ ಭಾಗವಹಿಸಬೇಡಿ,ಇಂದು ಯೋಚನೆ ಮಾಡಿ ಮಾತನಾಡಿ
ನೀವು ಯಾರನ್ನು ಕೂಡ ನಂಬಿ ಮೋಸ ಹೋಗಬೇಡಿ
ನಿಮ್ಮ ಹಣವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿರಿ
ನೀವು ಮಾಡುತ್ತಿರುವ ಕೆಲಸ ನಿಮಗೆ ಸಮಾಧಾನ ಇರುವುದಿಲ್ಲ
ಬೇರೆ ಬೇರೆ ಕೆಲಸಗಳಿಗೆ ಇಂದು ಪ್ರಯತ್ನ ಮಾಡಬಹುದು
ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಕೆಲಸದಲ್ಲಿ ನಿಯಮಗಳು ಹೆಚ್ಚಾಗಬಹುದು
ರಾತ್ರಿ ಹೊತ್ತು ಹುಟ್ಟಿದವರಿಗೆ ಸಂಪತ್ತಿನ ಕನಸು ಬೀಳಬಹುದು
ಕುಬೇರಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು
ವೃಶ್ಚಿಕ ರಾಶಿ
ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ ಬೇಸರವಾಗಬಹುದು
ವ್ಯಾಪಾರಸ್ಥರು ಸರಿಯಾದ ಶಿಸ್ತನ್ನು ಅನುಸರಿಸದೆ ತೊಂದರೆಗೆ ಒಳಗಾಗಬಹುದು
ಸರಿಯಾದ ಅನುಭವಿಗಳ ಸಹಾಯವನ್ನು ಪಡೆಯಿರಿ
ಅಸ್ತಮಾ ರೋಗಿಗಳಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಚ್ಚರವಾಗಿರಿ
ಸರಿಯಾದ ಔಷೋದೋಪಚಾರ ಮಾಡಲಿಲ್ಲ ಅಂದ್ರೆ ಜೀವಕ್ಕೆ ತೊಂದರೆಯಾಗಬಹುದು
ಕೋಪವನ್ನು ಕಡಿಮೆ ಮಾಡಿಕೊಳ್ಳಿರಿ
ಅಧಿಕಾರಕ್ಕೆ ಪ್ರಯತ್ನವನ್ನು ಮಾಡಬಹುದು ಆದರೆ ಪ್ರಯೋಜನವಾಗುವುದಿಲ್ಲ
ಇಂದ್ರನನ್ನು ಪ್ರಾರ್ಥನೆ ಮಾಡಬೇಕು
ಧನಸ್ಸು ರಾಶಿ
ಉದ್ಯೋಗದಲ್ಲಿ ಸಮಾಧಾನ,ಸುಖ ಆತ್ಮತೃಪ್ತಿ ಇದೆ ಅನ್ನೋದನ್ನ ತಿಳಿದುಕೊಳ್ಳುವ ದಿನವಿದು
ನೀವು ಮಾಡುವ ಉದ್ಯೋಗ, ವೃತ್ತಿ, ವ್ಯವಹಾರ, ವ್ಯಾಪಾರದಲ್ಲಿ ನೆಮ್ಮದಿ ಸಿಗಬಹುದು
ಇಂದು ನಿಮ್ಮ ಸಂಬಳ, ಆದಾಯ ಹೆಚ್ಚಾಗುತ್ತದೆ
ಪ್ರೇಮಿಗಳು ಬಹಳ ಜಾಗೃತರಾಗಿರಬೇಕಾದ ದಿನ ತೊಂದರೆ ಆಗಬಹುದು
ವಿದ್ಯಾರ್ಥಿಗಳಿಗೆ ಶುಭವಾದ ದಿನ
ಓದಿನ ಜೊತೆಗೆ ಬೇರೆ ಬೇರೆ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಿ
ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಸಿಗಲಿದೆ
ಕೈಗೆ ಪೆಟ್ಟಾಗುವ, ಗಾಯವಾಗುವ ಸೂಚನೆಯಿದೆ ಎಚ್ಚರವಾಗಿರಿ
ನಿಮ್ಮ ರಕ್ತದ ಬಗ್ಗೆ ಗಮನಹರಿಸಿ
ಮೃತ್ಯುಂಜಯನನ್ನು ಆರಾಧನೆ ಮಾಡಬೇಕು
ಮಕರ ರಾಶಿ
ವ್ಯಾವಹಾರಿಕ ಅಥವಾ ವೈಯಕ್ತಿಕವಾಗಿ ಯಾರ ಮೇಲೆ ಅನುಮಾನಗಳಿದ್ದರೆ ಅಂತಹ ವ್ಯಕ್ತಿಗಳಿಂದ ದೂರವಿರಿ
ಕಷ್ಟಪಟ್ಟು ಮಾಡಿದ ಕೆಲಸಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಯನ್ನು ಮಾಡಿಕೊಳ್ಳಬೇಡಿ
ನಿಮ್ಮ ಸ್ವಭಾವದಿಂದ ಹಲವಾರು ಜನ ಸಿಟ್ಟಿಗೆ ಏಳುತ್ತಾರೆ
ಮನೆಯಲ್ಲಿ ಅನೇಕ ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು
ಕೋರ್ಟ್ ಕೇಸ್‌ಗಳಲ್ಲಿ ಹಿನ್ನಡೆಯಾಗಬಹುದು
ಈ ರಾಶಿಯ ಚಿಕ್ಕಮಕ್ಕಳಿಗೆ ತೊಂದರೆಯಾಗಬಹುದು ಎಚ್ಚರಿಕೆ
ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಬೇಕು
ಕುಂಭ ರಾಶಿ
ಇಂದು ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ
ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ಶುಭ ಕಾಣುವ ಅವಕಾಶವಿದೆ
ನಿಮಗಿರುವ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸಿ ಜಯಶೀಲರಾಗುವ ಯೋಗವಿದೆ
ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು
ಕುಟುಂಬದ ಹಿರಿಯರ ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಕಾಣಬಹುದು
ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ ಲಾಭ ಬರಬಹುದು
ಅಲ್ಪ ಸಂತೋಷವಿರುವ ದಿನ ಬೇಸರ ಮಾಡಿಕೊಳ್ಳಬೇಡಿ
ಏಕಾಗ್ರತೆಯಿಂದ ವಿದ್ಯಾರ್ಥಿಗಳು ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಿ
ಈಶ್ವರನನ್ನು ಪ್ರಾರ್ಥನೆ ಮಾಡಬೇಕು
ಮೀನ ರಾಶಿ
ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗಬಹುದು
ನಿಮ್ಮ ಮಧ್ಯಸ್ಥಿಕೆಯಿಂದ ನಡೆಯುವ ವ್ಯವಹಾರವು ಸುಖಾಂತ್ಯ ಕಾಣಲಿದೆ
ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಅಡೆತಡೆಗಳು ನಿವಾರಣೆಯಾಗುತ್ತವೆ
ವ್ಯಾಪಾರ, ವ್ಯವಹಾರದಲ್ಲಿ ಅಧಿಕವಾದ ಲಾಭಕ್ಕೆ ಅವಕಾಶವಿದೆ
ಹಲವಾರು ಜನ ನಿಮಗೆ ಧನ್ಯವಾದಗಳು ಹೇಳುತ್ತಾರೆ
ನಿಮ್ಮ ಉಪಕಾರ ಸ್ಮರಣೆಯನ್ನು ಮಾಡುತ್ತಾರೆ
ಯಾವುದೇ ನಿರೀಕ್ಷೆಯಿಲ್ಲದೇ ಬೇರೆಯವರಿಗೆ ಮಾಡಿದ ಸಹಾಯಕ್ಕೆ ಹೆಚ್ಚು ಗೌರವ ಸಿಗುತ್ತದೆ
ಗಣಪತಿಯನ್ನು ಪ್ರಾರ್ಥನೆ ಮಾಡಬೇಕು
