ಅಂಬೇಡ್ಕರ್ ಪ್ರತಿಮೆ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು
1 min read
ಆನೇಕಲ್ : ಪೋಷಕರ ವಿರೋಧದ ನಡುವೆ ಪ್ರೇಮಿಗಳಿಬ್ಬರು ಆನೇಕಲ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪರಸ್ಪರ ಸಂವಿಧಾನ ಪೀಠಿಕೆ ಓದುವ ಮೂಲಕ ಮದುವೆಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಮೈಸೂರಿನ ಟಿ.ನರಸೀಪುರ ಮೂಲದ ಕಿರಣ್ ಮತ್ತು ಪ್ರಿಯಾಂಕ ಮದುವೆಯಾದ ಜೋಡಿಯಾಗಿದ್ದು ಸತತ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರೆಂದು ತಿಳಿದುಬಂದಿದೆ.ಅವರಿಬ್ಬರೂ ಒಂದೇ ಊರಿನವರು, 4 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು, ಆದ್ರೆ ಪ್ರೀತಿ ವಿಚಾರ ಮನೆಗೆ ತಿಳಿಸಿದ್ರು ಹುಡುಗಿ ಮನೆಯವರು ಒಪ್ಪದ ಕಾರಣಕ್ಕೆ ಇಂದು ಮೈಸೂರಿನಿಂದ ಬಂದು ಆನೇಕಲ್ ನಲ್ಲಿ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಅದಲ್ಲದೆ ಸಂವಿಧಾನದ ಪೀಠಿಕೆ ಮತ್ತು ಬುದ್ಧ ಪಂಚಶೀಲ ಪಡೆದು ಸರಳ ಮದುವೆಗೆ ಸಾಕ್ಷಿಯಾಗಿದ್ದಾರೆ…ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ, ಹೀಗೆ ಮದುವೆ ಮಾಡಿಕೊಂಡು ಸಂಭ್ರಮಡ್ತಿರುವ ಪ್ರೇಮಿಗಳ ಹೆಸರು ಮತ್ತು ಕಿರಣ್ ಮತ್ತು ಪ್ರಿಯಾಂಕಾ ಅಂತ ಮೈಸೂರು ಟಿ ನರಸೀಪುರದ ಗ್ರಾಮದ ಪ್ರೇಮಿಗಳು ಇನ್ನು ಪ್ರೇಮಿಗಳು 4 ವರ್ಷಗಳಿಂದ ಕಿರಣ್ ಮತ್ತು ಪ್ರಿಯಾಂಕ ಪ್ರೀತಿ ಮಾಡುತ್ತಿದ್ದರು ಒಂದೇ ಊರಿನಲ್ಲಿ ವಾಸವಾಗಿದ್ದರು ಒಂದೇ ಸಮುದಾಯವಾದವರಾಗಿದ್ದು ಮನೆಯಲ್ಲಿ ಪ್ರೀತಿ ವಿಚಾರ ಗೊತ್ತಾಗಿತ್ತು ಪ್ರಿಯಾಂಕಾ ಮನೆಯವರು ಪ್ರೀತಿಗೆ ನಿರಾಕರಣೆ ಮಾಡಿದ್ದರು. ಬಳಿಕ ಮನೆಯಿಂದ ಹೊರಬಂದು ಇಂದು ಆನೇಕಲ್ ಅಂಬೇಡ್ಕರ್ ಪ್ರತಿಮೆ ಎದರು ಸಂವಿಧಾನ ಪೀಠಿಕೆ ಮತ್ತು ಬುದ್ಧನ ಪಂಚಶೀಲ ಪಡೆದು ತಾಳಿ ಕಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
![]()

