[t4b-ticker]

ಭಾನುವಾರ ರಾಶಿ ಭವಿಷ್ಯ-ಏಪ್ರಿಲ್‌ -24,2025

1 min read
Share it

 

ಮೇಷ ರಾಶಿ

ಜೀವನದಲ್ಲಿ ಸಾಧನೆ ಮಾಡಲು ಬೇರೆಯವರ ಸಹಾಯದ ನಿರೀಕ್ಷೆಯಲ್ಲಿದ್ರೆ ಆ ನಿರೀಕ್ಷೆ ಹುಸಿಯಾಗಬಹುದು

ಸಹಾಯ ಮಾಡದೆ ಇದ್ದಾಗ ತಾಳ್ಮೆ ಕೆಡುತ್ತದೆ, ಸಿಟ್ಟು ಬರುತ್ತದೆ ಇದರಿಂದ ಕೆಲಸಕ್ಕೆ ಭಂಗ

ನಿಮ್ಮ ಮನಸ್ಸಿನ ಶಾಂತಿ ಭಂಗವಾಗದಂತೆ ಜಾಗ್ರತೆವಹಿಸಬೇಕು

ನಿಮ್ಮನ್ನ ಸೋಲಿಸಲು ಪ್ರತಿಸ್ಪರ್ಧಿಗಳು ಕಾಯ್ತಾ ಇರ್ತಾರೆ ಜಾಗ್ರತೆ

ನಿಮ್ಮ ಮಾತಿನ ಬಗ್ಗೆ ಗಮನವಿರಬೇಕು

ನಿಮ್ಮ ಕೆಲಸಕ್ಕೆ ಸಂಪೂರ್ಣವಾಗಿ ಬೇರೆಯವರ ಮೇಲೆ ಅವಲಂಬಿತರಾಗಬೇಡಿ

ಆಂಜನೇಯನಿಗೆ ಗಂಧದ ಸೇವೆ ಮಾಡಿಸಬೇಕು

 

ವೃಷಭ ರಾಶಿ

ಭೂ ಸಂಬಂಧಿ ವ್ಯವಹಾರಿಗಳಿಗೆ ರಿಯಲ್​ ಎಸ್ಟೇಟ್​ ಉದ್ಯೋಗಿಗಳಿಗೆ ಇಂದು ಅಷ್ಟೊಂದು ಒಳ್ಳೆಯ ದಿನವಲ್ಲ

ದಾಖಲಾತಿಗಳಲ್ಲಿ ವ್ಯತ್ಯಯಗಳಾಗಿ ಗ್ರಾಹಕರಿಂದ ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ

ಖರೀದಿಗೆ ಬಂದ ಗ್ರಾಹಕರು ವ್ಯವಹಾರವನ್ನು ಮಾಡದೆ ಹಿಂತಿರುಗುತ್ತಾರೆ ಜಾಗ್ರತೆವಹಿಸಿ

ನೀವು ಸರಿಯಾದ ಮಾಹಿತಿಯನ್ನು ದಾಖಲಾತಿಗಳನ್ನು ಇಟ್ಟುಕೊಂಡು ಗ್ರಾಹಕರೊಂದಿಗೆ ವ್ಯವಹರಿಸಿ

ಪೂಜೆ, ಜಪ, ಹೋಮ ಮಾಡುವುದರಿಂದ ಉತ್ತಮ ಫಲ ದೊರೆಯುತ್ತದೆ

ಭೂ ವ್ಯವಹಾರದಲ್ಲಿರುವ ದೋಷವು ನಿವಾರಣೆಯಾಗುತ್ತದೆ

ಲಕ್ಷ್ಮೀ, ಸರಸ್ವತಿಯರಿಬ್ಬರನ್ನು ಆರಾಧಿಸಬೇಕು

 

ಮಿಥುನ ರಾಶಿ

ಕುಟುಂಬದ ಸದಸ್ಯರಿಂದ ನಿಮಗೆ ಸಹಕಾರ ಸಿಗುವುದಿಲ್ಲ

ಮನೆಯಿಂದ ಹೊರಗೆ ಹೋದಾಗ ನಿಮಗೆ ಬೆಲೆ, ಗೌರವ ಸಿಗುತ್ತದೆ

ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬ ಮಾತನ್ನ ಕುಟುಂಬದ ಸದಸ್ಯರು ನಿಮಗೆ ಹೇಳ್ತಾರೆ

ಮನೆಯವರಿಗೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಬರೋ ಹಾಗೆ ಅವರ ಮನಸ್ಸನ್ನ ನೀವು ಗೆಲ್ಲಬೇಕು

ನಿಮ್ಮ ಕೂಗಾಟ, ಸಿಟ್ಟು, ಅಧಿಕಾರ ಇಲ್ಲಿ ಕೆಲಸಕ್ಕೆ ಬರೋದಿಲ್ಲ

ಕುಟುಂಬದ ಸದಸ್ಯರೆಲ್ಲರೂ ಕೂಡ ನಿಮ್ಮನ್ನ ಆಶ್ರಯ ಮಾಡೋ ಹಾಗೆ ನಡೆದುಕೊಳ್ಳಿ

ಅನುಮಾನದಿಂದ ನಿಮ್ಮ ವ್ಯವಹಾರ ಮಾಡೋಕೆ ಬರೋರ ಜೊತೆ ಸರಿಯಾಗಿ ವರ್ತಿಸಿ

ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳಬೇಡಿ

ಸಹೋದರರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಗಮನ ಹರಿಸಿ

ಕುಲದೇವತಾ ಪ್ರಾರ್ಥನೆ ಮಾಡಬೇಕು

 

ಕಟಕ ರಾಶಿ

ಮಕ್ಕಳ ವಿಚಾರದಲ್ಲಿ ಸ್ವಲ್ಪ ಬೇಸರವಾಗುವ ಸಾಧ್ಯತೆ ಹೆಚ್ಚು

ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯದಲ್ಲಿ ಅಸಮಾಧಾನ ಉಂಟಾಗುವ ಪರಿಸ್ಥಿತಿ

ಶಿಕ್ಷಕರು ಮಕ್ಕಳನ್ನ ನಿಂದಿಸುವುದು, ಹೊಡೆಯುವುದು ಮಾಡಬೇಡಿ

ಮಕ್ಕಳು ಕೂಡ ಶಿಕ್ಷಕರ ಮಧ್ಯದಲ್ಲಿ ಹೊಂದಾಣಿಕೆ ಇದ್ದರೆ ಒಳ್ಳೆಯದು

ನಿಮ್ಮ ಬಂಧುಗಳಿಂದ ನೋವಾಗಬಹುದು

ತಾಯಿ ಶಾರದೆಯನ್ನು ಪ್ರಾರ್ಥಿಸಬೇಕು

 

ಸಿಂಹ ರಾಶಿ

ಪದಾರ್ಥಗಳನ್ನು ಆಮದು ರಫ್ತು ಮಾಡುತ್ತಿರುವವರಿಗೆ ಇಂದು ಶುಭದಿನ

ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಬೇರೆಯವರಿಗೆ ಹೋಲಿಕೆ ಮಾಡಿ ಒತ್ತಡ ಹೇರಬೇಡಿ

ಹೊಸ ವಾಹನ ಖರೀದಿಯ ಯೋಗವಿದೆ

ದಿಢೀರ್​ ನಿರ್ಧಾರ ಬೇಡ

ಐಷಾರಾಮಿ ಜೀವನಕ್ಕೆ ಅವಕಾಶವಿದೆ ಅದನ್ನ ಸದುಪಯೋಗ ಪಡಿಸಿಕೊಳ್ಳಿ

ಯಾರಿಗೆ ಆಹಾರದ, ಸಹಾಯದ ಅಗತ್ಯವಿದೆಯೊ ಅವರಿಗೆ ಸಹಾಯವನ್ನು ಮಾಡಿ

ನಿಮ್ಮ ಮನೆದೇವರ  ದರ್ಶನ ಮಾಡಬೇಕು

 

ಕನ್ಯಾ ರಾಶಿ

ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡಬೇಡಿ

ವಿದ್ಯಾರ್ಥಿಗಳು ಓದು, ಬರಹದಿಂದ ತುಂಬಾ ಆಯಾಸಗೊಳ್ಳುವ ದಿನ

ಇಂದು ಓದುವುದರಿಂದ ಭವಿಷ್ಯದಲ್ಲಿ ಅನುಕೂಲವಾಗತ್ತೆ

ಇಂದು ವಿರಾಮ ತೆಗೆದುಕೊಂಡು ಬೇರೆ ವಿಚಾರಕ್ಕೆ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ

ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿರಬೇಕು

ಪವಮಾನ ಹೋಮ ಮಾಡಿಸುವುದು ಸೂಕ್ತ ಪರಿಹಾರ

 

ತುಲಾ ರಾಶಿ

ತುಲಾ ರಾಶಿಯ ಕ್ರೀಡಾಪಟುಗಳಿಗೆ ಹಿಂದೆ ಮಾಡಿದ ತಪ್ಪುಗಳಿಂದ ಇಂದು ಹಿನ್ನಡೆಯಾಗುತ್ತೆ

ಅವಕಾಶದಿಂದ ವಂಚಿತರಾಗುತ್ತೀರಿ ಎಚ್ಚರಿಕೆ

ಪ್ರಾಮಾಣಿಕವಾದ ಸ್ಪರ್ಧಾಳುಗಳಿಗೆ ಸದಾಕಾಲ ಜಯ

ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವುದು ನಿಮ್ಮ ಕರ್ತವ್ಯ

ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ

ನಿಮ್ಮ ಹೆತ್ತವರ ಆರ್ಶೀವಾದ ಪಡೆಯಿರಿ

ಶತ್ರುಗಳ ಮೇಲೆ ನಿಮ್ಮ ಹಿಡಿತ ಹೆಚ್ಚಾಗಲಿದೆ

ದಿನೇ ದಿನೇ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆ ಇರಲಿ

ರಾಜರಾಜೇಶ್ವರಿಯನ್ನು ಉಪಾಸನೆ ಮಾಡಬೇಕು

 

ವೃಶ್ಚಿಕ ರಾಶಿ

ಕಾರ್ಯಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹರಸಾಹಸ ಪಡಬೇಕಾಗುತ್ತದೆ

ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಬಹುದು

ಮನೆಯನ್ನು ನವೀಕರಿಸುವ ಯೋಗವಿದೆ

ಯಾವುದೇ ಒಪ್ಪಂದಗಳಿಗೆ ಸಹಿ ಹಾಕಬೇಡಿ

ಕಷ್ಟಕ್ಕೆ ಸಿಲುಕುತ್ತೀರಿ ಜಾಗ್ರತೆ ವಹಿಸಿ

ಕುಟುಂಬದಲ್ಲಿ ಸಂತೋಷ ನಿಮ್ಮದಾಗಲಿದೆ

ಯಾವುದೇ ವ್ಯವಹಾರದಲ್ಲಿ ಇಂದು ಮಧ್ಯಸ್ಥಿಕೆಯನ್ನು ವಹಿಸಬೇಡಿ

ಹನುಮಾನ್​ ಚಾಲೀಸ್​ ಪಠಿಸಿ ಅಥವಾ ಶ್ರವಣ ಮಾಡಬೇಕು

 

ಧನಸ್ಸು ರಾಶಿ

ವ್ಯವಹಾರದಲ್ಲಿ ಉತ್ತಮ ವ್ಯಕ್ತಿಗಳ ಸಂರ್ಪಕ ದೊರೆಯಬಹುದು

ಚೆನ್ನಾಗಿದ್ದ ಆರೋಗ್ಯವನ್ನ ನೀವೇ ಹಾಳು ಮಾಡಿಕೊಳ್ಳುತ್ತೀರಿ

ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ

ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಿಮ್ಮ ತೀರ್ಮಾನವನ್ನ ಕೈಗೊಳ್ಳಿ

ಮಧ್ಯಾಹ್ನದ ಹೊತ್ತಿಗೆ ಒಂದು ಕಹಿಸುದ್ದಿ ನಿಮಗೆ ಆಘಾತವನ್ನುಂಟು ಮಾಡುತ್ತೆ

IT ಕ್ಷೇತ್ರದವರಿಗೆ ಸಿಹಿಸುದ್ದಿ ವಿದೇಶದಲ್ಲಿ ಹಣ ಹೂಡಿಕೆ ಮಾಡ್ತೀರ

ಉದ್ಯೋಗದಲ್ಲಿ ನಿಮಗೆ ಬೋನಸ್ ಸಿಗಬಹುದು

ಗಣಪತಿಯ ಆರಾಧನೆ ಮಾಡಬೇಕು

 

ಮಕರ ರಾಶಿ

ಅವಿವಾಹಿತರು ಇಂದು ವಿವಾಹ ಮಂಗಳ ಕಾರ್ಯಕ್ಕೆ ಪ್ರಯತ್ನ ಪಡುತ್ತೀರಿ

ಸಂಬಂಧಿಕರು ಮಧ್ಯ ಮಾತಾಡಿ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ ಎಚ್ಚರಿಕೆ

ಇಂದು ಕೈ ಅಥವಾ ಕೈ ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆ ವಹಿಸಿ

ಕಬ್ಬಿಣದ ವಸ್ತುವನ್ನು ಉಪಯೋಗಿಸಬೇಡಿ

ಸಂಜೆಯ ವೇಳೆ ಮದುವೆಯ ವಿಚಾರದಲ್ಲಿ ಬೇಸರ ಪಡುತ್ತೀರಿ

ಶ್ರೀನಿವಾಸ ಕಲ್ಯಾಣ ಮಾಡಿಸಬೇಕು

 

ಕುಂಭ ರಾಶಿ

ವಕೀಲರಿಗೆ ಇಂದು ಶುಭದಿನ

ವಾದ ವಿವಾದಗಳ ವಿಷಯ ಇತ್ಯರ್ಥಗೊಳ್ಳುವ ದಿನ

ಹೊರಗಿನಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತದೆ

ನಿಮ್ಮ ಪ್ರಯತ್ನಗಳು ಸಾಪಲ್ಯವನ್ನ ಕಾಣುತ್ತೆ

ನಿಮ್ಮ ಕೆಲಸದಲ್ಲಿ ತೃಪ್ತಿ ಹೊಂದುತ್ತೀರಿ

ಪುಣ್ಯಕ್ಷೇತ್ರದಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಸಫಲತೆ ಕಾಣುತ್ತೀರಿ

ನಿಮಗೆ ಶತೃಗಳು ಹೆಚ್ಚಾಗಬಹುದು ಜಾಗ್ರತೆ ವಹಿಸಿ

ಜನಬಲ ಹಣಬಲ ಎರಡೂ ನಿಮ್ಮದಾಗಲಿದೆ

ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಿ

ಭವಾನಿಸ್ತೋತ್ರ ಪಠಿಸಬೇಕು

 

ಮೀನ ರಾಶಿ

ನೀವು ಮಾಡಿದ ಕೆಲಸದಿಂದ ಬೇರೆಯವರು ಅನುಕೂಲವನ್ನು ಪಡೆಯುತ್ತಾರೆ

ಕುಟುಂಬದವರಿಂದ ಮನಸಿಗೆ ಬೇಸರ ಉಂಟಾಗಬಹುದು

ನಿಮಗೆ ಮೋಸ ಮಾಡಿದವರ ಜೊತೆ ಬಾಂಧವ್ಯ ದೂರ ಆಗಬಹುದು

ನಿಮ್ಮ ಪ್ರತಿಭೆ ಬೇರೆಯವರಿಗೆ ಮಾದರಿಯಾಗುತ್ತೆ

ನಿಮ್ಮ ಪ್ರತಿಭೆಗೆ ಸದಾ ಕಾಲ ಬೆಲೆ ಇರುತ್ತದೆ

ಗೌರೀ ದೇವಿಯನ್ನು ಪ್ರಾರ್ಥಿಸಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?