ಗೋಲ್ಡ್ ಬೆಲೆ ಲಕ್ಷದತ್ತ.. ಒಂದೇ ದಿನದಲ್ಲಿ 6 ಸಾವಿರ ರೂಪಾಯಿ ಹೆಚ್ಚಳ..!
1 min read
ಚಿನ್ನದ ಬೆಲೆಯಲ್ಲಿನ ನಿರಂತರ ಏರಿಕೆ. ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿ ಹತ್ತಿರ ತಲುಪಿದೆ. ಶುಕ್ರವಾರ ಸಂಜೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 96,540 ರೂಪಾಯಿ ತಲುಪಿದೆ. ಅಂದರೆ ಕೇವಲ ಒಂದೇ ದಿನದಲ್ಲಿ 6 ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ.ಅಮೆರಿಕ ಅಧ್ಯಕ್ಷ ಟ್ರಂಪ್ ಹೊಸ ಸುಂಕ ನೀತಿ ಘೋಷಿಸುತ್ತಿದ್ದಂತೆ ಚಿನ್ನ ಸುರಕ್ಷಿತ ಹೂಡಿಕೆ ಆಗಿದೆ.
ಹೂಡಿಕೆಗೆ ಅದೊಂದೇ ದಾರಿ ಅಂತಾ ಪರಿಗಣಿಸಿದ ಜನ, ಚಿನ್ನದ ಮೇಲೆ ಹೂಡಿಕೆ ಹೆಚ್ಚು ಮಾಡಿದ್ದಾರೆ. ಪರಿಣಾಮ ಅದರ ಬೆಲೆ ಕೂಡ ಹೆಚ್ಚಾಗಿದೆ. ಕೇವಲ ದೇಸಿಯ ಮಾರುಕಟ್ಟೆಯಲ್ಲಿ ಮಾತ್ರಲ್ಲದೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಗರಿಷ್ಠ ಮಟ್ಟವನ್ನು ತಲುಪಿದೆ. ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ ತೀವ್ರವಾಗಿ ಏರುತ್ತಿದೆ. ಇದಕ್ಕೆ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಯುದ್ಧ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದರಲ್ಲೂ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ಉತ್ತುಂಗಕ್ಕೇರಿದೆ. ಹೂಡಿಕೆದಾರರು ಅಪಾಯ ರಹಿತ ಚಿನ್ನದತ್ತ ಮುಖ ಮಾಡುವುದರಿಂದ ಬೆಲೆ ಏರಿಕೆ ಆಗುತ್ತಿದೆ.
