ನಮ್ಮ ಸಮುದಾಯ, ಲಿಂಗಾಯತ ಸಮುದಾಯದ ವಿರೋಧ ಇಲ್ಲ-ಸಚಿವ ಚಲುವರಾಯಸ್ವಾಮಿ
1 min read
ನಮ್ಮ ಸಮುದಾಯ, ಲಿಂಗಾಯತ ಸಮುದಾಯದ ವಿರೋಧ ಇಲ್ಲ. ಹತ್ತು ವರ್ಷಗಳಾಗಿರೋದ್ರಿಂದ ರಿವ್ಯೂ ಆಗಬೇಕು ಅಂತ ಬೇಡಿಕೆ ಇದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಎರಡು ವಿಚಾರ ಇದೆ.. ಕ್ಯಾಸ್ಟ್ ಸೆನ್ಸೆಸ್ ಆಗಬೇಕು ಅಂತ ಎಲ್ಲಾ ಸಮುದಾಯ ಒಪ್ಪಿದೆ. ನಮ್ಮ ಪಕ್ಷದಲ್ಲಿ ಕೂಡ ಯಾವುದೇ ವ್ಯತ್ಯಾಸ ಇಲ್ಲ. ಕ್ಯಾಬಿನೆಟ್ ನಲ್ಲಿ ಚರ್ಚೆಮಾಡಿ, ಸಬ್ ಕಮಿಟಿ ಮಾಡೋದಾ ಅಂತ ನೋಡಬೇಕು. ಇಲ್ಲ ಜನರ ಅಭಿಪ್ರಾಯಕ್ಕೆ ಬಿಡೋದಾ ನೋಡಬೇಕು. ಕ್ಯಾಬಿನೆಟ್ ನಲ್ಲಿ ಹೀಗೆ ಹೇಳ್ತೀನಿ, ಹಾಗೆ ಹೇಳ್ತೀನಿ ಅನ್ನಲ್ಲ. ಜವಾಬ್ದಾರಿ ಸಚಿವರಾಗಿ ಸಿಎಂ ಜೊತೆ ಚರ್ಚೆ ಮಾಡ್ತೀನಿ. ಅಭಿಪ್ರಾಯ ಬಗ್ಗೆ ಈಗಾಗಲೇ ಹೇಳಿದ್ದೇನೆ. ಯಾವುದೇ ಸಮುದಾಯಕ್ಕೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗೋದು ಕಾಂಗ್ರೆಸ್ ಎಂದು ಹೇಳಿದರು.
