ಜಾತಿ ಗಣತಿ ವರದಿ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ವರದಿ ಎಲ್ಲಿಯೂ ಬಹಿರಂಗ ಆಗಿಲ್ಲ-ಸಚಿವ ಶಿವರಾಜ್ ತಂಗಡಗಿ
1 min read
ಜಾತಿ ಗಣತಿ ವರದಿ ಸರ್ಕಾರಕ್ಕೆ ಕೊಟ್ಟ ಬಳಿಕ ಟ್ರಜೋರಿಯಲ್ಲಿ ಇಟ್ಟಿದ್ದೇವು ಇವತ್ತು ಕ್ಯಾಬಿನೆಟ್ ಗೆ ತರುತ್ತಿದ್ದೇವೆ ಗೌಪ್ಯತೆ ಕಾಪಾಡಬೇಕು . ಕ್ಯಾಬಿನೆಟ್ ನಲ್ಲಿ ಚರ್ಚೆಯಾದ ಬಳಿಕ ಮಾತನಾಡುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ವರದಿ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ವರದಿ ಎಲ್ಲಿಯೂ ಬಹಿರಂಗ ಆಗಿಲ್ಲ, ಈಗ ಬರುತ್ತಿರುವ ಅಂಕಿ ಸಂಖ್ಯೆ ಊಹಾಪೋಹಗಳು, ವರದಿಯಲ್ಲಿ ಏನಿದೆ ಅಂತ ಯಾರಿಗೂ ಗೊತ್ತಿಲ್ಲ. ಇದು ಜಾತಿಗಣತಿ ಅಲ್ಲ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ. ಇದಕ್ಕೆ ಯಾರು ಆತಂಕಪಡುವ ಅವಶ್ಯಕತೆ ಇಲ್ಲ, ಜನರ ಸಮೀಕ್ಷೆ ಬಿಟ್ಟು ಜಾತಿ ಸಮೀಕ್ಷೆ ಅಲ್ಲ ಎಂದು ಹೇಳಿದರು.
