ನಿಪ್ಪಾಣಿಗೆ ಅಂಬೇಡ್ಕರ್ ಬಂದು ನೂರು ವರ್ಷ ಆಗಿರುವುದಕ್ಕೆ ಭೀಮ ಹೆಜ್ಜೆ ಕಾರ್ಯಕ್ರಮ – ಸಚಿವ ಪ್ರಹ್ಲಾದ್ ಜೋಶಿ
1 min read
ನಿಪ್ಪಾಣಿಗೆ ಅಂಬೇಡ್ಕರ್ ಅವರು ಬಂದು ನೂರು ವರ್ಷ ಆಗಿರುವ ಕಾರಣಕ್ಕೆ. ಭೀಮ ಹೆಜ್ಜೆ ಎನ್ನುವ ಕಾರ್ಯಕ್ರಮ ಮಾಡ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಗ್ರೆಸ್ ಅಂಬೇಡ್ಕರ್ ಅವರಿಗೆ ಹೇಗೆ ಅಪಮಾನ ಮಾಡಿದ್ರು, ರಿಸರ್ವೇಶನ್‌ಗೆ ನೆಹರು, ರಾಜೀವ್ ಗಾಂಧಿ ಹೇಗೆ ವಿರೋಧಿಸಿದ್ರು. ಇದೆಲ್ಲಾ ವಿಚಾರವನ್ನ ನಾವು ಜನರ ಮುಂದಿಡುತ್ತೇವೆ. ಅಂಬೇಡ್ಕರ್ ನಿಪ್ಪಾಣಿ ಬಂದು 100ವರ್ಷವಾಗಿದೆ. ಗಾಂಧಿಯವರು ಬಂದು ನೂರು ವರ್ಷ ಆಗಿರುವ ಕಾರ್ಯಕ್ರಮ ಮಾಡಿದ್ರು. ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಅಂಬೇಡ್ಕರ್ ಅವರದ್ದು ಕಾರ್ಯಕ್ರಮ ಮಾಡ ಬೇಕಿತ್ತು. ಅವರು ಮಾಡಿಲ್ಲ ನಾವು ಮಾಡ್ತಿದ್ದೇವೆ ಎಂದು ಹೇಳಿದರು.
