ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಹೊರಟ ಸಿದ್ದರಾಮಯ್ಯ.. ವಿಷ ಬೀಜ ಬಿತ್ತುತ್ತಿದ್ದಾರೆ ಜಾತಿ ಜಾತಿಗಳ ನಡುವೆ – ಆರ್ ಅಶೋಕ್
1 min read
ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯ ಹೊರಟಿದ್ದಾರೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರ್ ಅಶೋಕ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಇದು ಬಹಳ ದುರಾದೃಷ್ಟವಶಾತ್, ವೈಜ್ಞಾನಿಕ ಸಮೀಕ್ಷೆ ಆಗಿಲ್ಲ. ಎಲ್ಲ ಮನೆಗಳಿಗೂ ಬಂದು ಸಮೀಕ್ಷೆ ಮಾಡಿಲ್ಲ.. ನಾವೇನೂ ಜಾತಿ ಜನಗಣತಿ ವಿರೋಧ ಇಲ್ಲ, ಆದ್ರೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ, ಕಾಂಗ್ತೆಸ್‌ನವ್ರು ದುರುಳರು, ಏನು ಮಾಡ್ತಾರೆ ನೋಡಬೇಕು ಎಂದು ಹೇಳಿದರು.
ಗುತ್ತಿಗೆದಾರರು ಮತ್ತೆ ಆಪಾದನೆ ಮಾಡಿದ್ದಾರೆ. ಇಷ್ಟಾದರೂ ಸಿದ್ದರಾಮಯ್ಯ ಸರ್ಕಾರಕ್ಕೆ ನಾಚಿಕೆ ಇಲ್ಲ.. ನಮ್ದು ಕ್ಲೀನ್ ಸರ್ಕಾರ ಅಂತ ಸಮರ್ಥಿಸಿಕೊಳ್ತಾರೆ. ಕ್ಲೀನ್ ಸರ್ಕಾರ ಅಲ್ಲ ಎಲ್ಲವನ್ನೂ ತೊಳೆದು ಲೂಟಿ ಮಾಡೋ ಸರ್ಕಾರ, ನವೆಂಬರ್ ನಲ್ಲಿ ಕರಿಮಣಿ ಮಾಲೀಕ ಯಾರು ಅನ್ನೋದು ನಿರ್ಧಾರ ಆಗುತ್ತೆ. ಆ ಸಂದರ್ಭದಲ್ಲಿ ಕೊಡೋದಿಕ್ಕೆ ಮಂತ್ರಿಗಳು ಲೂಟಿ ಮಾಡ್ತಿದ್ದಾರೆ. ಸಚಿವರ ಇಲಾಖೆಗಳು ಕಲೆಕ್ಷನ್ ಸೆಂಟರ್ ಆಗಿವೆ. ಅಲಿಬಾಬ ಮತ್ತು ನಲವತ್ತು ಕಳ್ಳರು ತಪ್ಪಿಸಿಕೊಂಡು ಇಲ್ಲಿಗೆ ಬಂದಿದ್ದಾರೆ ಎಂದರು.
ನಾಳೆಯ ಜೆಡಿಎಸ್ ಹೋರಾಟಕ್ಕೆ ಅಶೋಕ್ ಸ್ವಾಗತ ಕೋರಿದರು. ಜೆಡಿಎಸ್‌ನವ್ರು ಹೋರಾಟ ಮಾಡ್ತಿರೋದು ಸ್ವಾಗತ ಅವರು ಸಹ ಹೋರಾಟ ಮಾಡಲಿ, ನಾವು ಸ್ವಾಗತ ಮಾಡ್ತೇವೆ. ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಸಮನ್ವಯ ಸಮಿತಿ ರಚನೆ ಬಗ್ಗೆ ನಾವು ಕುಮಾರಸ್ವಾಮಿ ಅವರ ಜತೆ ಚರ್ಚೆ ಮಾಡ್ತೇವೆ. ನಮ್ಮ ಕುಮಾರಸ್ವಾಮಿ ಬಂಧ ಗಟ್ಟಿಯಾಗಿದೆ, ಯಾರೂ ಹುಳಿ ಹಿಂಡಲು ಸಾಧ್ಯವಿಲ್ಲ ಎಂದು ಹೇಳಿದರು.
