ಭರ್ಜರಿ ಬಿರುಗಾಳಿ ಮಳೆ ಸೃಷ್ಟಿಸಿದ ಅವಾಂತರ.. ಸಿಡಿಲಿಗೆ ಇಬ್ಬರ ಸಾವು
1 min read
ಕೊಪ್ಪಳ : ನಿನ್ನೆ ಕೊಪ್ಪಳ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಹೊಲಕ್ಕೆ ತೆರಳಿದ್ದ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಕೊಪ್ಪಳದ ಗೌರಿಅಂಗಳದ ನಿವಾಸಿಗಳಾದ ಮಂಜುನಾಥ್ ರಾಮಲಿಂಗಪ್ಪ ಗಾಳಿ (48),ಗೋವಿಂದಪ್ಪ ಮ್ಯಾಗಲಮನಿ (62) ಮೃತಪಟ್ಟ ಮೃತಪಟ್ಟ ದುರ್ದೈವಿಯಾಗಿದ್ದು, ಹೊಲದಲ್ಲಿ ಇರುವ ಮನೆಯೊಳಗೆ ಹೋಗಿ ಕಿಟಕಿ ಬಳಿ ನಿಂತಿದ್ದರು. ಆ ಸಂರ್ಭದಲ್ಲಿ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಮೃತಪಟಿದ್ದಾರೆ. ಮಳೆಗೆ ಭತ್ತ ನೆಲಕಚ್ಚಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಜಿಲ್ಲೆಯ ವಿವಿಧಡೆ ಬೆಳೆದಿದ್ದ ತೋಟಗಾರಿಕೆ ಬೆಳೆಗಳು ಸಹ ನೆಲಕಚ್ಚಿ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ರೈತರ ಕೈಗೆ ಬಂದ ತುತ್ತು ಬಾಯಿಗೆ ಬರೆದಂತಾಗಿದೆ .
