ಕಿಡಗೇಡಿಗಳಿಂದ ಮೇವಿನ ಬಣವೆಗೆ ಬೆಂಕಿ ..ಇಪ್ಪತ್ತಕ್ಕೂ ಅಧಿಕ ಬಣವೆ ಸುಟ್ಟು ಭಸ್ಮ
1 min read
ಬೆಳಗಾವಿ : ಕಿಡಗೇಡಿಗಳು ಮೇವಿನ ಬಣವೆಗೆ ಬೆಂಕಿ ಇಟ್ಟು ಸಂಗ್ರಹಿಸಿಟ್ಟಿದ್ದ ಬಣವೆಗೆ ಸುಟ್ಟು ಭಸ್ಮವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ದೊಡ್ಡಕೆರೆಯಲ್ಲಿ ನೆಡೆದಿದೆ. ಕಿಡಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಇಪ್ಪತ್ತಕ್ಕೂ ಅಧಿಕ ಬಣವೆ ಸುಟ್ಟು ಭಸ್ಮವಾಗಿದೆ. ಜಾನುವಾರುಗಳ ಮೇವಿಗಾಗಿ ಒಂದು ಕಡೆ ಸಂಗ್ರಹಿಸಿಟ್ಟಿದ್ದ ಬಣವೆಗೆ ಬೆಂಕಿ ಇಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು ಬೆಂಕಿ ನಂದಿಸುವ ಕಾರ್ಯ ನಡೆಸಿದರು. ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
