ಸುಡುವ ಬಿಸಿಲಿನ ಬೇಗೆಯಿಂದ ರಾಜ್ಯದ ಜನ ಈಗಾಗಲೇ ತತ್ತರಿಸಿ ಹೋದರೆ ಒಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರು
1 min read
ಧಾರವಾಡ : ಸೂರ್ಯ ನಿಗಿ ನಿಗಿ ಬೆಂಕಿ ಕಾರುತ್ತಿದ್ದಾನೆ. ಮನೆಯಿಂದ ಹೊರಗೆ ಕಾಲಿಟ್ಟರೂ ಕಷ್ಟ, ಮನೆಯಲ್ಲಿದ್ದರೂ ಕಷ್ಟ ಎನ್ನುವ ಸ್ಥಿತಿ ಉಂಟಾಗಿದೆ. ಸುಡುವ ಬಿಸಿಲಿನ ಬೇಗೆಯಿಂದ ರಾಜ್ಯದ ಜನ ಈಗಾಗಲೇ ತತ್ತರಿಸಿಹೋಗಿದ್ದಾರೆ. ಈ ವರ್ಷ ಸರಿಯಾಗಿ ಮಳೆಯಾಗದೆ ಇದ್ದದ್ದರಿಂದ ಜಲಾಶಯಗಳು, ಕೆರೆಗಳು ಬಹುಪಾಲು ಖಾಲಿಯಾಗಿವೆ. ಅಂತರ್ಜಲ ಬತ್ತಿ ಹೋಗಿ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿಲ್ಲ.ಧಾರವಾಡದ ವಾರ್ಡ್ ನಂಬರ್ 17ರಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ಧಾರೆ.
ಕಳೆದ ನಾಲ್ಕೈದು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದೇ ಧಾರವಾಡ ವಾರ್ಡ್ ನಂಬರ್ 17ರ ಜನ ಪರದಾಡುವಂತಾಗಿದೆ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆ ಮಹಾನಗರ ಪಾಲಿಕೆ ವತಿಯಿಂದ ವಾರ್ಡ್‌ಗೆ ಒಂದು ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿತ್ತು.ಒಂದು ಟ್ಯಾಂಕರ್ ಎಂದು ಹೇಳಿ ಕೇವಲ ಅರ್ಧ ಟ್ಯಾಂಕರ್ ನೀರನ್ನು ಮಾತ್ರ ಅಲ್ಲಿ ಪೂರೈಕೆ ಮಾಡಲಾಗಿದ್ದರಿಂದ ಜನ ನೀರಿಗಾಗಿ ನಾ ಮುಂದು ತಾ ಮುಂದು ಎಂದು ನೀರಿನ ಟ್ಯಾಂಕರ್‌ಗೆ ಮುಗಿ ಬಿದ್ದಿದ್ದಾರೆ.ಜಾನುವಾರುಗಳಿಗೂ ಕುಡಿಯುವ ನೀರು ಇಲ್ಲದೇ ಕಾಲಿ ಬುಟ್ಟಿ ಹಾಗೂ ಬಕೆಟ್‌ಗಳನ್ನೇ ಜಾನುವಾರುಗಳು ಬಾಯಿಯಿಂದ ಸವರುತ್ತಿದ್ದ ದೃಶ್ಯ ಕಂಡು ಬಂತು ಜನರಂತೂ ನೀರಿಗಾಗಿ ಟ್ಯಾಂಕರ್ ಮುಂದೆ ಬುಟ್ಟಿ ಬಕೆಟ್‌ಗಳನ್ನು ಸರತಿ ಸಾಲಿನಲ್ಲಿ ಇಟ್ಟಿದ್ದು ಕಂಡು ಬಂತು. ಇದು ಸದ್ಯದ ಸ್ಮಾರ್ಟ್ ಸಿಟಿ ಕಥೆಯಾಗಿದೆ.
