[t4b-ticker]

ಹುಂಜ ವಾಕಿಂಗ್ ಅಪರೂಪದ ದೃಶ್ಯ.. ಮಾಲೀಕನ ಜೊತೆ ವಾಕಿಂಗ್ ಮಾಡುತ್ತೆ ಪ್ರೀತಿಯ ಹುಂಜ..!

1 min read
Share it

ಚಿತ್ರದುರ್ಗ :   ಮುಂಜಾನೆಯ  ಎದ್ದು ಜಾಗಿಂಗ್ ,  ವಾಕಿಂಗ್   ಹೋಗೋ ಮಾಲೀಕರು, ತಮ್ಮ ಸಾಕು ಪ್ರಾಣಿ ನಾಯಿಯೊಂದಿಗೆ ವಾಕಿಂಗ್ ಹೋಗುತ್ತಾರೆ.  ಆದರೆ ಚಿತ್ರದುರ್ಗದಲ್ಲಿ ಒಬ್ಬ ವ್ಯಕ್ತಿ ತಮ್ಮ ಪ್ರೀತಿ ಪಾತ್ರದ ಹುಂಜ ಜೊತೆ ವಾಕಿಂಗ್​ ಬಂದಿದ್ದು, ಅಚ್ಚರಿಗೆ ಕಾರಣವಾಗಿದೆ. ಚಿತ್ರದುರ್ಗ ಜಿಲ್ಲೆ  ಚಳ್ಳಕೆರೆ ನಗರದ ಡಿ.ಸುಧಾಕರ್ ಕ್ರೀಡಾಂಗಣಕ್ಕೆ ಪ್ರತಿನಿತ್ಯ ನೂರಾರು ಜನ ವಾಕಿಂಗ್ ಬರುತ್ತಾರೆ.  ಅದೇ ರೀತಿ ಚಳ್ಳಕೆರೆ ನಗರದ ವ್ಯಾಪಾರಿ ಆಯುಬ್, ತಮ್ಮ ಹುಂಜದೊಂದಿಗೆ ವಾಕಿಂಗ್ ಬಂದಿದ್ದರು. ಮಾಲೀಕ ಆಯುಬ್ ಜೊತೆ ಹುಂಜ ಕೂಡ ವಾಕಿಂಗ್​ ಮಾಡಿದ್ದು, ಕ್ರೀಡಾಂಗಣದಲ್ಲಿದ್ದ ಎಲ್ಲರ ಗಮನ ಸೆಳೆದಿದೆ. ಕೋಳಿ ತನ್ನ ಮಾಲೀಕನ ಜೊತೆ ಮೈದಾನದಲ್ಲಿ ಹೆಜ್ಜೆ ಹಾಕುವ ದೃಶ್ಯ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಪ್ರಾಣಿಗಳು ಮಾಲೀಕರ ಜೊತೆ ವಾಕಿಂಗ್ ಬರುತ್ತವೆ.ಆದರಿಲ್ಲಿ ಪಕ್ಷಿಯೊಂದು ತನ್ನ ನಂಬುಗೆಯ ಮಾಲೀಕನೊಂದಿಗೆ ವಾಕಿಂಗ್ ಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೆಲ್ಲ ಹರಿದಾಡುತ್ತಿದೆ.

Loading

More Stories

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?