ತುಮಕೂರು ರೈಲು ನಿಲ್ದಾಣಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು: ಸಿಎಂ ಜೊತೆ ಚರ್ಚಿಸಿ ನಿರ್ಧಾರ- ಜಿ.ಪರಮೇಶ್ವರ
1 min read
ತುಮಕೂರು : ಶಿವಕುಮಾರ ಸ್ವಾಮೀಜಿಗಳ ಜನ್ಮದಿನಾಚರಣೆಗೆ ಬರಲು ಆಗಿರಲಿಲ್ಲ, ಇವತ್ತು ಸ್ವಾಮೀಜಿಗೆ ಗೌರವ ಸಮರ್ಪಣೆ ಮಾಡಲು ಬಂದಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಅವರು ಸಿದ್ದಲಿಂಗಸ್ವಾಮೀಜಿಗೆ ನಮನ ಸಲ್ಲಿಸಿದ್ದೇನೆ.. ನಮ್ಮ ಕುಟುಂಬಕ್ಕೂ ಮಠಕ್ಕೂ ಅವಿನಾಭವ ಸಂಬಂಧವಿದೆ. ನಮ್ಮ ತಂದೆ ಹಾಗೂ ಹಿರಿಯ ಸ್ವಾಮೀಜಿ ಜೊತೆಗೆ ಇದ್ದಂತಹ ಸಂಬಂಧ ಯಾವಾಗಲೂ ಇರುತ್ತದೆ. ನಾವು ಈ ಸಂಬಂಧವನ್ನು ನಾವು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ತುಮಕೂರು ರೈಲ್ವೇ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡುವ ವಿಚಾರಕ್ಕೆ ಮಾತನಾಡಿದ ಅವರು ಸ್ವಾಮೀಜಿ ಹೆಸರಿಡುವ ಪ್ರಸ್ತಾವನೆ ಸರ್ಕಾರಕ್ಕೆ ಬಂದಿತ್ತು.. ಈ ಬಗ್ಗೆ ಸಿಎಂ ಜೊತೆಗೆ ಮಾತನಾಡಿ, ಒಪ್ಪಿಗೆ ಪಡೆದು ಆದೇಶ ಹೊರಡಿಸುತ್ತಾರೆ.. ತುಮಕೂರು ರೈಲ್ವೇ ನಿಲ್ದಾಣ ಸ್ವಾಮೀಜಿ ಅವರ ಹೆಸರಿನಲ್ಲಿ ಶಾಶ್ವತವಾಗಿ ಇರುತ್ತದೆ..ಅದು ನಾವು ಅವರಿಗೆ ಕೊಡುವ ಗೌರವ. ಸೋಮಣ್ಣನವರು ಒತ್ತಾಯ ಮಾಡಿದ್ದಾರೆ. ಅವರ ಇಲಾಖೆಯಿಂದ ಕೇಂದ್ರದಲ್ಲಿ ಮಂಜೂರು ಮಾಡಿಸಿದ್ದಾರೆ. ಲೇಟಾಗಿಲ್ಲ, ಸರ್ಕಾರದಲ್ಲಿ ಪ್ರಕ್ರಿಯೆ ಇರುತ್ತದೆ. ರಸ್ತೆ, ಸರ್ಕಲ್, ಕಟ್ಟಡಕ್ಕೆ ಹೆಸರಿಡಬೇಕಾದ್ರೆ ಪ್ರೊಸಿಜರ್ ಇರುತ್ತೆ. ಪ್ರಸ್ತಾವನೆಗಳು ಬಂದಾಗ ಪರಿಶೀಲನೆ ಮಾಡಿ, ಸಾಧಕ ಭಾದಕಗಳನ್ನ ನೋಡಿ ಸರ್ಕಾರ ಅನುಮತಿ ಕೊಡುತ್ತದೆ. ಪ್ರೊಸಿಜರ್ ಆಗಬೇಕಲ್ಲ ಅದಕ್ಕೆ ತಡವಾಗುತ್ತದೆ ಎಂದು ಹೇಳಿದರು.
ಭದ್ರಮೇಲ್ದಂಡೆ ಯೋಜನೆಗೆ ಕೇಂದ್ರಕ್ಕೆ ಒತ್ತಾಯ ಮಾಡಿದ್ವು. ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಲಾಗಿತ್ತು. ಎರಡು ವರ್ಷದ ಹಿಂದೆ 5300 ಕೋಟಿ ರೂಪಾಯಿಯನ್ನ ಅನುದಾನ ಕೊಡ್ತೀವಿ ಅಂತ ಬಜೆಟ್ ನಲ್ಲಿ ಹೇಳಿದ್ರು. ಬಹಳ ಸಂತೋಷದಲ್ಲಿ ಇದ್ದೆವು. ಬಹಳ ದೊಡ್ಡ ಯೋಜನೆ ಬಹಳ ತಾಲ್ಲೂಕುಗಳಿಗೆ ಅನುಕೂಲವಾಗಲಿದೆ ಅಂತ. ಕಾರಣಾಂತರಗಳಿಂದ ಹಣ ಅವರು ಕೊಡಲು ಆಗಿರಲಿಲ್ಲ. ಆದ್ರೂ ಯೋಜನೆ ನಿಲ್ಲುವ ಆಗಿಲ್ಲ, ಕಾಮಗಾರಿಗಳನ್ನ ಬೇಗ ಬೇಗ ಮಾಡಬೇಕು ಅಂತ ಹೊರಟಿದ್ದೇವೆ. ಕೆಲ ಕಡೆ ಫಾರೆಸ್ಟ್ ಬರುವುದರಿಂದ ತಡವಾಗಿದೆ.. ಕೊರಟಗೆರೆ ಬರೋದು ಡೌಟು, ಮಧುಗಿರಿ ಕೆಲ ಭಾಗಕ್ಕೆ ನೀರು ಬರಲಿದೆ.. ಪಾವಗಡಕ್ಕೆ ನೀರು ಬರುತ್ತಿದೆ.. 2300 ಕೋಟಿ ರೂಪಾಯಿಯ ಕುಡಿಯುವ ನೀರಿನ ಯೋಜನೆ ಮಾಡಿದ್ವು..ಚಳ್ಳಕೆರೆ, ಕೂಡ್ಲಗಿ, ಹಿರಿಯೂರು ಎಲ್ಲಾ ಕಡೆಗೂ ನೀರು ಬರಲಿದೆ. ಪಾವಗಡಕ್ಕೆ ಈಗಾಗ್ಲೆ 328 ಹಳ್ಳಿಗಳಲ್ಲಿ 270 ಹಳಿಗಳಿಗೆ ನೀರು ಕೊಡ್ತಿದ್ದೀವಿ. ಸಿಎಂ ಸದ್ಯದಲ್ಲೇ ಉದ್ಘಾಟನೆ ಮಾಡಲಿದ್ದಾರೆ. ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದೆ. ಹಣ ಬಿಡುಗಡೆ ಮಾಡ್ತಿದ್ದೇವೆ. ಆರ್ಥಿಕ ವ್ಯವಸ್ಥೆ ಯಲ್ಲಿ ಹಣ ನೀಡುತ್ತಿದ್ದೇವೆ. ಬರುವ ಜೂನ್‌ಗೆ ಅರಸಿಕೆರೆಗೆ ನೀರು ತಲುಪಲಿದೆ. ದಿನ ವರ್ಷ ಜೂನ್ ಗೆ ತುಮಕೂರಿಗೆ ನೀರು ಬರಬಹುದು. ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಮೇ ನಲ್ಲಿ ಹೇಮಾವತಿಯಿಂದ ಒಂದೇರಡು ಟಿಎಂಸಿ ನೀರು ಬಿಡಿಸುವಂತೆ ಹಾಸನ ಉಸ್ತುವಾರಿ ರಾಜಣ್ಣ ಜೊತೆಗೆ ಮಾತನಾಡುತ್ತೇವೆ ಎಂದು ಹೇಳಿದರು.
ಎಐಸಿಸಿ ಅಧಿವೇಶನಕ್ಕೆ ಗೈರಾದ ವಿಚಾರವಾಗಿ ಮಾತನಾಡಿದ ಅವರು ಎಐಸಿಸಿ ಅಧಿವೇಶನಕ್ಕೆ ಆಹ್ವಾನ ಇರುತ್ತೆ. ನಾವೆಲ್ಲಾ ಎಐಸಿಸಿ ಸದಸ್ಯರಿದ್ದೇವೆ. ಕಾರಣಾಂತರಗಳಿಂದ ಹೋಗಲು ಆಗಿಲ್ಲ ಎಂದು ಹೇಳಿದರು. ಶಿರಾ ಬಳಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು ಜಯಚಂದ್ರ ಸೇರಿ 35 ಜನ ಶಾಸಕರು ಪತ್ರ ವಿಚಾರ ಅದನ್ನ ಕೇಂದ್ರ ಸರ್ಕಾರ ಪರಿಗಣಿಸಬೇಕು. ಶಿರಾ ಭಾಗದಲ್ಲಿ ಆದ್ರೆ ನಮಗೆ ಸಂತೋಷವಾಗುತ್ತೆ. ಎರಡು ಕಡೆ ಸರ್ವೆ ಮಾಡಿದ್ದಾರೆ. ಒಂದು ನೆಲಮಂಗಲ, ಕನಕಪುರ ಭಾಗದಲ್ಲಿ ಸರ್ವೆ ಮಾಡಿದ್ದಾರೆ. ಅವರದ್ದೇ ಆದ ಪ್ಯಾರಮೀಟರ್ಸ್ ಇದೆ. ಪ್ಯಾರಮೀಟರ್ಸ್ ಅಡಿಯಲ್ಲೇ ರೆಕಮೆಂಡೇಷನ್ ಮಾಡ್ತಾರೆ. ಶಿರಾಗೆ ಸರ್ವೆಗೆ ಬಂದಿಲ್ಲ, ಬಂದ್ರೆ ಸಂತೋಷವಾಗುತ್ತದೆ. ಶಿರಾದಲ್ಲಿ ಆದ್ರೆ 20 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಏರ್ಪೋರ್ಟ್ ಪ್ರಾಜೆಕ್ಟ್ ಹೈಜಾಕ್ ಆಗಿಲ್ಲ, ಟೆಕ್ನಿಕಲ್ ಆಗಿ ಮಾಡ್ತಾರೆ ಎಂದು ಹೇಳಿದರು.
