ಹಳೆ ದ್ವೇಷ ಹಿನ್ನೆಲೆ ತಲೆಯ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ಯಿಯ ಕೊಲೆ
1 min read
ವಿಜಯನಗರ : ಹಳೆ ದ್ವೇಷ ಹಿನ್ನೆಲೆ ತಲೆಯ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ಯಿಯನ್ನು ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರ 4 ನೇ ಕ್ರಾಸ್ ನಲ್ಲಿ ನಡೆದಿದೆ. ಹೊನ್ನೂರ ಅಲಿಯಾಸ್ ಹೊನ್ನೂರ್ವಸ್ವಾಮಿ( 30) ಕೊಲೆಯಾದ ದುರ್ದೈವಿಯಾಗಿದ್ದು, ಹಳೆ ದ್ವೇಷದ ಹಿನ್ನೆಲೆ ಕೊಲೆ ಮಾಡಲಾಗಿದೆ ಎನ್ನಲಾಗಿದೆ. 6 ವರ್ಷದ ಹಿಂದೆ ಕೊಲೆಗೆ ಯತ್ನ ನಡೆದಿತ್ತು. ಕಾಳಿ ಅಲಿಯಾಸ್ ಹುಚ್ಚ ಕಾಳಿ( 36) ಕೊಲೆ ಮಾಡಿರೋ ವ್ಯಕ್ಯಿಯಾಗಿದ್ದು, ಮೊದಲು ಚಾಕುವಿನಿಂದ ಚುಚ್ಚಲು ಪ್ರಯತ್ನ, ಎರಡು ಚಾಕುಗಳು ತುಂಡಾಗಿ ಬಿದ್ದಿವೆ.
ಕೊಲೆಯಾದ ಹೊನ್ನೂರ ದಾವಣಗೆರೆಯಲ್ಲಿರ್ತಿದ್ದ, ನಾಳೆ ಜಂಬುನಾಥ ಜಾತ್ರೆ ಹಿನ್ನಲೆ ಹೊಸಪೇಟೆಗೆ ಆಗಮಿಸಿದ್ದ. ಕೊಲೆ ಆರೋಪಿ ಕಾಳಿ ಅಲಿಯಾಸ್ ಹುಚ್ಚಕಾಳಿ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ. ಹೊಸಪೇಟೆ ಡಿವೈಎಸ್ಪಿ ಡಾ ಮಂಜುನಾಥ್ ತಳವಾರ್ , ಸಿಪಿಐ ಹುಲುಗಪ್ಪ ಸೇರಿದಂತೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದರು. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
