ಬೆನ್ನು ನೋವು ಅಂತಾ ನೆಪ ಹೇಳಿ ಕೋರ್ಟ್‌ಗೆ ದರ್ಶನ್ ಬಂಕ್!ಬೆನ್ನು ನೋವಿದ್ರೂ ಆಪ್ತ ಧನ್ವೀರ್ ಸಿನಿಮಾ ನೋಡಿದ ದಾಸ!
1 min read
ಬೆಂಗಳೂರು : ನಟ ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಅಭಿನಯದ ವಾಮನ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗ್ತಿದೆ. ಗೆಳೆಯನ ಸಿನಿಮಾ ದರ್ಶನ್ ಸಾಥ್ ನೀಡಿದ್ದು, ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ರು. ಆದ್ರೆ ಮೊನ್ನೆ ಕೋರ್ಟ್‌ಗೆ ಹಾಜರಾಗದ ದರ್ಶನ್ ನಿನ್ನೆ ಸಿನಿಮಾ ನೋಡಲು ಬಂದಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ದರ್ಶನ್ ಮತ್ತು ಸಂಗಡಿಗರ ವಿರುದ್ಧ ಗಂಭೀರ ಆರೋಪ ಇದೆ. ರೇಣುಕಾಸ್ವಾಮಿ ಕೇಸ್ ಸಂಬಂಧ ಏಪ್ರಿಲ್ 8 ರಂದು ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿತ್ತು. ಕೋರ್ಟ್‌ಗೆ ಹಾಜರಾಗದ ನಟ ದರ್ಶನ್, ನಿನ್ನೆ ಪ್ರಾಣ ಸ್ನೇಹಿತನ ಸಿನಿಮಾ ನೋಡಕ್ಕೆ ಬಂದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೊಲೆ ಕೇಸ್ನಲ್ಲಿ ಬೆಂಗಳೂರು ನಗರ ಸಿಸಿಎಚ್ 57ನೇ ನ್ಯಾಯಾಲಯ ಡೇಟ್ ಕೊಟ್ಟಿತ್ತು. ಆ ದಿನ ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿ ಪವಿತ್ರಾ ಗೌಡ ಸೇರಿ ಇತರೆ 16 ಹಾಜರಾಗಿದ್ರು. ಈ ಕೇಸ್ನ ಎ2 ಆರೋಪಿ ನಟ ದರ್ಶನ್ ಮಾತ್ರ ಬಂದಿರಲಿಲ್ಲ.. ಶೂಟಿಂಗ್ ಒತ್ತಡ.. ಬೆನ್ನು ನೋವು.. ಅಂತಾ ನೆಪ ಹೇಳಿದರು.. ನಟ ದರ್ಶನ್ ಗೈರನ್ನ ಗಮನಿಸಿದ ನ್ಯಾಯಾಧೀಶರು ದರ್ಶನ್ ವಕೀಲರಿಗೆ ಎಚ್ಚರಿಕೆ ನೀಡಿದರು.. ಪ್ರಕರಣದ ವಿಚಾರಣೆ ಇದ್ದ ದಿನ ಕೋರ್ಟ್‌ಗೆ ಹಾಜರಾಗಬೇಕು ಅಂತಾ ಗರಂ ಆಗಿ ಹೇಳಿದರು.
ಮೊನ್ನೆ ಕೋರ್ಟ್‌ಗೆ ಹಾಜರಾಗದ ದರ್ಶನ್, ನಿನ್ನೆ ಸೆಲೆಬ್ರಿಟಿಗಳಿಗೆ ಅಂತಾನೇ ಆಯೋಜಿಸಿದ್ದ ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ಹಾಜರಿ ಹಾಕಿದ್ದಾರೆ. ಇದು ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ನಟನೆಯ ಸಿನಿಮಾ. ಆದ್ದರಿಂದ ದಾಸ ಸಪೋರ್ಟ್ ಮಾಡಲು ಬಂದಿದ್ದರು. ಇನ್ನು ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದು, ದರ್ಶನ್ ಅವರು ಬಂದ ಕೂಡಲೇ ಅಭಿಮಾನಿಗಳು ಮುತ್ತಿಕೊಂಡ್ರು. ಡಿ ಬಾಸ್ ಎಂದು ಜೈಕಾರ ಕೂಗಲು ಆರಂಭಿಸಿದ್ರು. ಕುಂಟುತ್ತಲೇ ಸಾಗಿದ ದರ್ಶನ್, ಚಿತ್ರತಂಡದ ಜೊತೆ ಕುಳಿತು ವಾಮನ ಸಿನಿಮಾ ನೋಡಿದರು..
