[t4b-ticker]

ಗುರುವಾರ ರಾಶಿ ಭವಿಷ್ಯ-ಮಾರ್ಚ್‌,10,2025

1 min read
Share it

ಮೇಷ ರಾಶಿ

ಅಗತ್ಯವಿದ್ದರೆ ಮಾತ್ರ ವಾಹನ ಚಾಲನೆ ಮಾಡಿ ಆದಷ್ಟು ದೂರದೂರಿಗೆ ಪ್ರಯಾಣ ಮಾಡಬೇಡಿ

ನಿಮ್ಮ ಬುದ್ಧಿವಂತಿಕೆ ಮತ್ತು ತತ್ವ ಸಿದ್ಧಾಂತಗಳಿಂದ ಜನರನ್ನು ಪ್ರಭಾವಶಾಲಿಗಳನ್ನಾಗಿ ಮಾಡಬಹುದು

ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತೀರಾ

ಅವಶ್ಯವಿರುವ ಬಡ ವಿದ್ಯಾರ್ಥಿಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿರಿ

ನಿಮ್ಮ ಮಾನಸಿಕ ಒತ್ತಡವನ್ನು ಸರಿಯಾಗಿ ನಿಭಾಯಿಸಿ

ಮಹಾಗಣಪತಿ ಆರಾಧನೆ ಮಾಡಬೇಕು

 

ವೃಷಭ ರಾಶಿ

ನಿಮ್ಮ ಎಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿಕೊಳ್ಳಿ

ಕುಟುಂಬ, ಸ್ನೇಹಿತರು, ಬಂಧುಗಳಿಂದ ಆದಷ್ಟು ನಿರೀಕ್ಷೆಗಳು ಕಡಿಮೆಯಿರಲಿ

ಸಂಗಾತಿ, ಸ್ನೇಹಿತರು, ಬಂಧುಗಳಿಂದ ನಿಮ್ಮ ಕೆಲಸಕ್ಕೆ ಉತ್ತಮ ಬೆಂಬಲ ಸಿಗುತ್ತದೆ

ಭೂಮಿ, ಆಭರಣಗಳ ಖರೀದಿಗೆ ಉತ್ತಮವಾದ ದಿನವಿದು

ಬಾಣಲಿಂಗವನ್ನು ಆರಾಧಿಸಬೇಕು

 

ಮಿಥುನ ರಾಶಿ

ದಿಢೀರ್​ ಶೀತ, ತಲೆ ನೋವು, ಆಯಾಸ ನಿಮ್ಮನ್ನ ಕಾಡಬಹುದು

ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ

ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಯಶಸ್ಸು ಕಾಣುವ ದಿನವಿದು

ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಉತ್ತಮವಾಗಿ ತೊಡಗಿಸಿಕೊಳ್ಳಿ

ನಿಮ್ಮ ಕೆಲಸದ ಒತ್ತಡಗಳನ್ನು ಬೇರೆಯವರ ಮೇಲೆ ಹಾಕಬೇಡಿ

ಯಜ್ಞೇಶ್ವರನನ್ನು ಪ್ರಾರ್ಥನೆ ಮಾಡಬೇಕು

 

ಕಟಕ ರಾಶಿ

ಮನಸ್ಸಿನಲ್ಲಿ ಭಯ ಕಾಡಬಹುದು ಆದರೆ ಯಾವುದೇ ವಿಚಾರಗಳಿಗೆ ಭಯ ಬೇಡ

ಮನೆಯಲ್ಲಿ ಏನೇ ಸಮಸ್ಯೆಗಳಿದ್ದರು ಜಗಳ ಮಾಡಬೇಡಿ

ಮನೆಯಿಂದ ಹೊರಗಡೆ ಹೊರಡುವಾಗ ಶಾಂತವಾಗಿರಿ

ಬೇರೆಯವರ ಸಲಹೆ, ಹೆಚ್ಚಿನ ಮಾನ್ಯತೆ ಬೇಡ ಪ್ರೇಮಿಗಳಿಗೆ ಆಘಾತದ ದಿನವಿದು

ಹೊಸ ಹೊಸ ಒಪ್ಪಂದಗಳನ್ನು ಮುಂದೂಡಿದರೆ ಒಳ್ಳೆಯದು

ಕಾಲಭೈರವನನ್ನು ಪ್ರಾರ್ಥನೆ ಮಾಡಬೇಕು

 

ಸಿಂಹ ರಾಶಿ

ಮಕ್ಕಳಿಂದ ಉತ್ತಮ ಫಲಿತಾಂಶ, ವಿಶೇಷವಾದ ಗೌರವ ಸಿಗುತ್ತದೆ

ನಿಮ್ಮ ಇಷ್ಟಾರ್ಥಗಳು ನೆರವೇರುವ ದಿನ, ಸರಿಯಾಗಿ ಬಳಸಿಕೊಳ್ಳಿ

ನಿಮ್ಮ ಉದ್ಯೋಗದಲ್ಲಿ ನಿಮಗೆ ವಿಶೇಷವಾದ ಮಾನ್ಯತೆ ದೊರೆಯುವ ಸಾಧ್ಯತೆ

ಇಂದು ಯಾರ ಜೊತೆಗೂ ವಾದ-ವಿವಾದ ಮಾಡಬೇಡಿ

ತುಳಿಸಿಗೆ ಎರಡು ತುಪ್ಪದ ದೀಪಗಳನ್ನು ಹಚ್ಚಿ ಪ್ರಾರ್ಥನೆ ಮಾಡಬೇಕು

ಸಾಯಂಕಾಲ ಪ್ರಾರ್ಥನೆ ಮಾಡಿದರೆ ಹೆಚ್ಚು ಶ್ರೇಷ್ಠವಾಗಿರುತ್ತೆ

 

ಕನ್ಯಾ ರಾಶಿ

ಮನೆಯಲ್ಲಿರುವ ವಸ್ತು ಉಪಯೋಗಕ್ಕೆ ಬರದೆ ಹಣ ನಷ್ಟವಾಗಬಹುದು

ಕೆಟ್ಟ ಸುದ್ದಿಗಳಿಂದ ಮಾನಸಿಕ ತಲ್ಲಣ ಉಂಟಾಗುವ ಸಾಧ್ಯತೆ

ನಿಮ್ಮ ವೈಯಕ್ತಿತ ವಿಚಾರಗಳು ಕುಟುಂಬದಲ್ಲೇ ಇರಲಿ ಹೊರಬಂದರೆ ಅವಮಾನ ಸಾಧ್ಯತೆ

ಅರ್ಧಕ್ಕೆ ನಿಂತ ಕೆಲಸದಿಂದ ಹಣ ನಷ್ಟವಾಗುವ ಸಾಧ್ಯತೆ

ನಿಮ್ಮ ಕೆಲಸಕ್ಕಾಗಿ ಬೇರೆಯವರನ್ನು ಅವಲಂಬಿಸಬೇಡಿ

ಗಜಲಕ್ಷ್ಮಿಯನ್ನು ಪ್ರಾರ್ಥನೆ ಮಾಡಬೇಕು

 

ತುಲಾ ರಾಶಿ

ಕಿರಿಯರಿಗೆ ನಿಮ್ಮ ಬಗ್ಗೆ ಹೆದರಿಕೆ, ಗೌರವ ಹೆಚ್ಚಾಗಬಹುದು

ಮೇಲಾಧಿಕಾರಿಗಳಿಂದ ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ಸಾಧ್ಯತೆ

ಹಳೆಯ ಸಾಲದ ಬಾಕಿಗೆ ಇವತ್ತು ಮೂಹೂರ್ತ ಒದಗಿ ಬರಬಹುದು

ಇಂದು ವಿಶೇಷವಾದ ವ್ಯಕ್ತಿಗಳ ಸಂಪರ್ಕ ದೊರೆಯುವ ಸಾಧ್ಯತೆ ಇದೆ

ಬೂದಗುಂಬಳಕಾಯಿ ದಾನ ಮಾಡಬೇಕು

 

ವೃಶ್ಚಿಕ ರಾಶಿ

ದೊಡ್ಡವರ ಜೊತೆ ವಾದ-ವಿವಾದಗಳನ್ನ ಮಾಡಬೇಡಿ ಸೋಲಾಗಬಹುದು

ನಿಮಗೆ ಇಂದು ಅರ್ಜೀಣ ಸಮಸ್ಯೆ ಕಾಡಬಹುದು

ಇಂದು ಅನಿರೀಕ್ಷಿತ ಪ್ರಯಾಣ ಸಾಧ್ಯತೆಯಿದೆ

ವೃತ್ತಿಯಲ್ಲಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಬದಲಾವಣೆಗಳನ್ನು ಕಾಣಬಹುದು

ನಿಮ್ಮ ನಿರ್ಧಾರಗಳನ್ನು ಬಹಳ ಯೋಚನೆ ಮಾಡಿ ತೆಗೆದುಕೊಳ್ಳಿ

ಬಲಿಷ್ಠರ ಜೊತೆ ಸೆಣಸಾಟಕ್ಕೆ ಹೋಗದೆ ಇದ್ದರೆ ಒಳ್ಳೆಯದು

ಬೆಟ್ಟದ ಮೇಲಿರುವ ನರಸಿಂಹನನ್ನು ಆರಾಧಿಸಬೇಕು

 

ಧನಸ್ಸು ರಾಶಿ

ನಿಮ್ಮ ಕೆಲಸಗಳಲ್ಲಿ ಸಂಪೂರ್ಣ ಯಶಸ್ಸು ಸಿಗುವುದು ಕಷ್ಟ

ಈ ದಿನ ಬಹಳ ಓಡಾಟವನ್ನು ಮಾಡಬಹುದು

ಸಾಯಂಕಾಲ ಕುಟುಂಬದವರ ಜೊತೆ ಹೊರಗೆ ಹೋಗಬಹುದು

ಇಂದು ಹೆಚ್ಚು ಹಣ ಖರ್ಚಾಗುವ ದಿನ

ನಿಮ್ಮ ಕೆಲಸದಲ್ಲಿ ನಿಮಗೆ ತೃಪ್ತಿ ಸಿಗುವ ದಿನ

ರಾತ್ರಿ ಮನೆಗೆ ಮರಳುವಾಗ ಜಾಗ್ರತೆವಹಿಸಬೇಕು

ತಾಪಸಮನ್ಯುವನ್ನು ಪ್ರಾರ್ಥನೆ ಮಾಡಬೇಕು

 

ಮಕರ ರಾಶಿ

ಈ ರಾಶಿಯವರಿಗೆ ಉತ್ತಮ ದಿನ, ಆದರೆ ವಿದ್ಯಾರ್ಥಿಗಳಿಗೆ ಅಶುಭ ದಿನ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗದೇ ಬೇಸರ ಸಾಧ್ಯತೆ

ನಿಮ್ಮ ಬಂಧುಗಳು ನಿಮಗೆ ವಿನಾಕಾರಣ ಕಿರಿಕಿರಿ ಉಂಟು ಮಾಡಬಹುದು

ಮಾತು ಬಾರದ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ, ಸಹಾಯ ಮಾಡಿದರೆ ಪ್ರಗತಿ ಕಾಣಬಹುದು

ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು

 

ಕುಂಭ ರಾಶಿ

ಮಾರುಕಟ್ಟೆಯ ಬೆಲೆಗಿಂತ ಹೆಚ್ಚು ಹಣಕೊಟ್ಟು ಭೂಮಿಯನ್ನ ಖರೀದಿಸುವ ಸಾಧ್ಯತೆ

ಇಂದು ಆಸ್ತಿ ಖರೀದಿಸುವಾಗ ದಾಖಲೆಗಳ ಬಗ್ಗೆ ಹೆಚ್ಚು ಗಮನ ನೀಡಿ

ಷೇರು ಪೇಟೆಯಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಬಹುದು

ಆಸ್ತಿ ಖರೀದಿಯನ್ನು ಬೇರೆಯವರ ಹೊಟ್ಟೆಕಿಚ್ಚಿಗೋಸ್ಕರ ಮಾಡಬಹುದು

ಆಸ್ತಿಗಾಗಿ ಹೆಚ್ಚು ಹಣವ್ಯಯ ಸಾಧ್ಯತೆ ಎಚ್ಚರಿಕೆ ಇರಲಿ

ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ ಯಶಸ್ಸು ಸಿಗುತ್ತದೆ

ಹಳದಿ ಹೂಗಳಿಂದ ಭೂವರಾಹ ಸ್ವಾಮಿಯನ್ನು ಆರ್ಚನೆ ಮಾಡಬೇಕು

 

ಮೀನ  ರಾಶಿ

ಆಹಾರ ಸೇವನೆಯಲ್ಲಿ ವ್ಯತ್ಯಯವಾಗಿ ಆರೋಗ್ಯದಲ್ಲಿ ತೊಂದರೆಯಾಗಬಹುದು

ನಿಮ್ಮ ಆಲೋಚನೆಗಳಿಂದ ಯಾರ ಮೇಲೂ ಒತ್ತಡ ಹೇರಬೇಡಿ

ವ್ಯಾಪಾರದ ದೃಷ್ಟಿಯಿಂದ, ಬಂಧುಗಳ ಭೇಟಿಗಾಗಿ ತಕ್ಷಣ ಪ್ರಯಾಣ ಮಾಡುವ ಸಾಧ್ಯತೆ

ಕುಟುಂಬದ ಸದಸ್ಯರ ಮಾರ್ಗದರ್ಶನ, ಅವರ ಜೊತೆಗಿನ ವ್ಯವಹಾರ ಜಯಪ್ರದವಾಗುವ ದಿನ

ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚು ಒತ್ತಡ, ಕಿರಿಕಿರಿ ಸಾಧ್ಯತೆ ತಾಳ್ಮೆ ಇರಲಿ

ಶ್ರೀ ರಾಮಚಂದ್ರನನ್ನು ಪ್ರಾರ್ಥನೆ ಮಾಡಬೇಕು

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?