ಆನೇಕಲ್ ಕರಗ ಹೊರುವ ಜವಾಬ್ದಾರಿ ಅರ್ಚಕ ರಮೇಶ್ ಹೆಗಲಿಗೆ, ಹೈಕೋರ್ಟ್ ಆದೇಶ.
1 min read
ಆನೇಕಲ್ ಕರಗ-2025 ವಿವಾದ: ಕರಗ ಹೊರುವ ಜವಾಬ್ದಾರಿ ಅರ್ಚಕ ಕುಟುಂಬದ ರಮೇಶ್ ಹೆಗಲಿಗೆ ಆದೇಶ ಹೊರಡಿಸಿದ ಹೈಕೋರ್ಟ್.
ದಶಕಗಳ ಆನೇಕಲ್ ಕರಗದ ವಿವಾದಕ್ಕೆ ಸಂಬಂದಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಆನೇಕಲ್ ದಂಡಾಧಿಕಾರಿಗಳ ಆದೇಶದಂತೆ ಇದೇ ಏ4ರಂದು ಕುಲಸ್ಥ ಚಂದ್ರಪ್ಪ ಕರಗ ಹೊರುವಂತೆ ಆದೇಶ ನೀಡಿದ್ದರು. ಅದೇ ಆದೇಶದಲ್ಲಿ ಹೈಕೋರ್ಟ್ ಆದೇಶದ ತೀರ್ಪಿಗೆ ಒಳಪಟ್ಟು ಈ ಆದೇಶ ಜಾರಿಯಲ್ಲಿರುತ್ತದೆ ಎಂದು ತೀರ್ಪಿತ್ತಿದ್ದರು. ಅನಂತರ ಬುಧವಾರ ಸಂಜೆಗೆ ಅರ್ಚಕ ಹಾಗು ಕುಲಸ್ಥರ ಪರವಾಗಿ ವಾದ-ಪ್ರತಿವಾದ ಆಲಿಸಿದ ಉಚ್ಚ ನ್ಯಾಯಾಲಯ ಅರ್ಚಕ ಕುಟುಂಬದ ರಮೇಶ್ ಕರಗ ಹೊರುವಂತೆ ಆದೇಶ ನೀಡಿದೆ. ಇದರ ಬೆನ್ನಲ್ಲೇ ಕುಲಸ್ಥರ ಪರವಾದ ಭಕ್ತಾಧಿಗಳು ಈಗಾಗಲೇ ಕುಡಿ(ದ್ವಜ)ಕಟ್ಟುವ ಮೂಲಕ ದ್ರೌಪತಿ ದೇವಿ ಪೂಜಾ ಕೈಂಕರ್ಯಗಳನ್ನು ಕೈಗೊಂಡು ಕರಗೋತ್ಸವಕ್ಕೆ ಚಾಲನೆ ನೀಡಿದ್ದು, ರಥ, ಇನ್ನಿತರೆ ಸಕಲ ಸಿದ್ದತೆಗಳನ್ನು ನಡೆಸಿಕೊಂಡಿದ್ದು ಇದೀಗ ಎಲ್ಲವನ್ನೂ ಮತ್ತೆ ಕಳಚಿ ಹಾಕಿದ ಕುಲಸ್ಥರ ಗುಂಪು ಹೈಕೋರ್ಟ್ ತೀರ್ಪಿಗೆ ತಲೆ ಬಾಗುವುದಾಗಿ ತಿಳಿಸಿ ಗೌರವ ಮೆರೆದಿದ್ದಾರೆ.
ಇದೀಗ ಅರ್ಚಕ ಕುಟುಂಬದ ಮೇರು ಹಿರಿಯ ಅರ್ಚಕ ಅರ್ಜುನಪ್ಪ ಖುಷಿ ಪಟ್ಟಿದ್ದು ತನಗನ ತಮ್ಮ ರಮೇಶ್ ಕರಗ ಹೊರುವುದರಿಂದ ಸಂತಸ ಹಂಚಿಕೊಂಡಿದ್ದಾರೆ.
